ಬೆಂಗಳೂರು 
ರಾಜ್ಯದ ರೈಲ್ವೆ ಮೂಲಸೌಕರ್ಯಕ್ಕೆ ಕೇಂದ್ರ ಸರ್ಕಾರ 17 ಸಾವಿರ ಕೋಟಿ ರೂಪಾಯಿ ಆರ್ಥಿಕ ನೆರವು ನೀಡಿದೆ ಎಂದು ಬೆಂಗಳೂರು ಕೇಂದ್ರ ಲೋಕಸಭಾ ಸದಸ್ಯ ಪಿ.ಸಿ. ಮೋಹನ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ವೈಟ್‌ಫೀಲ್ಡ್- ಬಾಣಸವಾಡಿ ವಿಶೇಷ ಡೆಮು ಉಪನಗರ ರೈಲು ಸೇವೆಗೆ ಹಸಿರು ನಿಶಾನೆ ತೋರಿದ ನಂತರ ಅವರು ಈ ವಿಷಯ ತಿಳಿಸಿದರು. ಪ್ರತಿ ನಿತ್ಯ ವೈಟ್‌ಫಿಲ್ಡ್‌ನಲ್ಲಿ ಕೆಲಸ ಮಾಡಲು ೧೮ ಸಾವಿರ ಉದ್ಯೋಗಿಗಳು ಬರುತ್ತಿದ್ದಾರೆ. ಈ ಉಪನಗರ ರೈಲು ಸೇವೆಯಿಂದ ಅವರಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ರಸ್ತೆ ಮೇಲಿನ ಸಂಚಾರದ ಒತ್ತಡ ಕಡಿಮೆಯಾಗಲಿದೆ ಎಂದರು. ವಿಶೇಷ ಡೆಮು ರೈಲು ವಾರದಲ್ಲಿ ೬ ದಿನ ಸಂಚಾರ ಮಾಡಲಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








