128ನೇ ವರ್ಷದ ಡಾ. ಬಿ.ಆರ್.ಅಂಬೇಡ್ಕರ್‍ರವರ ಜನ್ಮದಿನಾಚರಣೆ

ತುರುವೇಕೆರೆ:

        ಬಾಬ ಸಾಹೇಬ್ ಡಾ. ಅಂಬೇಡ್ಕರ್ ನಂಬಿದ್ದ ಸಾಮಾಜಿಕ ನ್ಯಾಯದ ಆಶಯದಲ್ಲಿ ನಂಬಿಕೆಯಿಟ್ಟು ಆಡಳಿತ ನೆಡಸುತ್ತಿದ್ದು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸಿಕೊಡುವ ಸಂಕಲ್ಪ ನನ್ನದಾಗಿದೆ ಎಂದು ಶಾಸಕ ಮಸಾಲಾ ಜಯರಾಂ ತಿಳಿಸಿದರು.

        ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಆಯೋಜಿಸಿದ್ದ 128ನೇ ವರ್ಷದ ಡಾ. ಬಿ.ಆರ್.ಅಂಬೇಡ್ಕರ್‍ರವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು ಪ್ರಸ್ತುತ ದೇಶಕ್ಕೆ ರಾಷ್ಟ್ರೀಯ ಮನೋಭಾವ, ದೇಶಪ್ರೇಮದಂತಹ ಆದರ್ಶಗಳನ್ನು ಒಳಗೊಂಡಂತಹ ಸರ್ಕಾರಗಳನ್ನು ಜನತೆ ನಿರೀಕ್ಷಿಸುತ್ತಾರೆ.

       ಈ ದಿಸಿಯಲ್ಲಿ ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ ಅಸ್ಥಿತ್ವಕ್ಕೆ ಬಂದ ಜನಸಂಘ ಡಾ:ಬಾಬಸಾಹೇಬ್‍ರವರ ಎಲ್ಲಾ ಸಾಮಾಜಿಕ ಕಳಕಳಿ ನಿಲುವುಗಳನ್ನು ಜಾರಿಗೆ ತಂದ ಸಂಘವಾಗಿತ್ತು. ಅದೇ ಜನಸಂಘ ಬಾಬಸಾಹೇಬರ ರಾಜಕೀಯ ಅಸ್ತಿತ್ವಕ್ಕೂ ಕಾರಣವಾಯಿತು. ಜನಸಂಘ ಮತ್ತೊಷ್ಟು ಆದರ್ಶಗಳೊಂದಿಗೆ ಭಾರತೀಯ ಜನತಾ ಪಕ್ಷವಾಗಿ ಭಾರತೀಯರ ಮನಸ್ಸಿನಲ್ಲಿ ಸುಭದ್ರವಾಗಿದೆ. ಅವರ ಆಶಯದಂತೆ ಸರ್ವರಿಗೂ ಸಮಬಾಳು, ಸಮಪಾಲು ನಮ್ಮ ಸಂಕಲ್ಪವಾಗಿದೆ ಎಂದರು.

         ಈ ಸಂದರ್ಭದಲ್ಲಿ ದಲಿತ ಮುಖಂಡರುಗಳಾದ ವಿ.ಟಿ.ವೆಂಕಟರಾಮ್, ಸೋಮೇನಹಳ್ಳಿ ಜಗಧೀಶ್, ಚಿದಾನಂದ್, ದಿವಾಕರ್ ಮೊದಲಾದವರು ಅಂಬೇಡ್ಕರ್‍ರವರು ಸಮಾಜಕ್ಕೆ ನೀಡಿರುವ ಹತ್ತು-ಹಲವು ಕೊಡುಗೆಗಳ ಜೊತೆಗೆ, ಹಿಂದುಳಿದ ವರ್ಗಗಳಿಗೆ ದ್ವನಿಯಾಗಿ ಂಹಕ್ಕು-ಬಾದ್ಯತೆಗಳನ್ನು ಸಂವಿಧಾನಾತ್ಮಕವಾಗಿ ನೀಡಿದ ಮಹಾನುಭಾವರೆಂದು ತಿಳಿಸಿದರು.

        ಕಾರ್ಯಕ್ರಮದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ದುಂಡಾ ರೇಣುಕಯ್ಯ, ಮುಖಂಡರಾದ ಹೆಚ್.ಆರ್.ರಾಮೇಗೌಡ, ಎಡಗೀಹಳ್ಳಿವಿಶ್ವನಾಥ್, ಅಮಾನಿಕೆರೆಮಂಜಣ್ಣ, ವಿ.ಬಿ.ಸುರೇಶ್, ಪ್ರಕಾಶ್, ಡಿ.ಆರ್.ಬಸವರಾಜ್. ಡಿ.ಟಿ.ರಾಜಶೇಖರ್, ವೀರೇಂದ್ರ ಪಾಟೀಲ್, ಶಶಿ ಮೊದಲಾದವರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap