132 ಜನರಿಗೆ ಪಾಸಿಟೀವ್- ಸೋಂಕಿತರ ಸಂಖ್ಯೆ 1346ಕ್ಕೆ

ತುಮಕೂರು

     ಜಿಲ್ಲೆಯಲ್ಲಿ ಪ್ರತಿದಿನವೂ ಕೊರೊನಾ ಅಬ್ಬರಿಸುತ್ತಿದೆ. ನಿತ್ಯ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಸೋಮವಾರ ಜಿಲ್ಲೆಯ 132 ಜನರಲ್ಲಿ ಪಾಸಿಟೀವ್ ಖಚಿತವಾಗಿದೆ. ಇದರೊಂದಿಗೆ ಈವರೆಗೆ ಸೋಂಕಿತರ ಸಂಖ್ಯೆ 1346ಕ್ಕೆ ಏರಿದೆ. ಜೊತೆಗೆ ನಗರದ ಒಬ್ಬರು ಮಹಿಳೆ ಮೃತಪಟ್ಟಿದ್ದಾರೆ.

     ನಗರದ ಫಕೀರ್ ಪಾಳ್ಯದ 60 ವರ್ಷದ ಮಹಿಳೆ ಜ್ವರದ ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೇ 24ರಂದು ಇವರ ಗಂಟಲು ದ್ರವವನ್ನು ಪರೀಕ್ಷೆಗೆ ಒಳಪಡಿಸಿದಾಗ, ಪಾಸಿಟೀವ್ ದೃಢಪಟ್ಟಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಇವರು ಮೃತಪಟ್ಟರು. ಜಿಲ್ಲೆಯಲ್ಲಿ ಇದೂವರೆಗೆ ಸೋಂಕಿನಿಂದ 43 ಜನ ಮೃತರಾಗಿದ್ದು, ಇವರಲ್ಲಿ ತುಮಕೂರು ತಾಲ್ಲೂಕಿನ 30 ಜನ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ಹೇಳಿದ್ದಾರೆ.

     ಸೋಮವಾರ ವರದಿಯಾದ 132 ಪ್ರಕರಣಗಳಲ್ಲಿ ತುಮಕೂರು ತಾಲ್ಲೂಕಿನ 56 ಜನರಲ್ಲಿ ಪಾಸಿಟೀವ್ ಖಚಿತವಾಗಿದೆ. ಕುಣಿಗಲ್ ತಾಲ್ಲೂಕಿನಲ್ಲಿ 22, ತುರುವೇಕೆರೆ ತಾಲ್ಲೂಕಿನಲ್ಲಿ 13, ತಿಪಟೂರು ತಾಲ್ಲೂಕಿನಲ್ಲಿ 9, ಮಧುಗಿರಿ ತಾಲ್ಲೂಕಿನ 8, ಗುಬ್ಬಿ ತಾಲ್ಲೂಕಿನ 6, ಪಾವಗಡ ಹಾಗೂ ಶಿರಾ ತಾಲ್ಲೂಕಿನಲ್ಲಿ ತಲಾ 5, ಚಿಕ್ಕನಾಯಕನಹಳ್ಳಿ ಹಾಗೂ ಕೊರಟಗೆರೆ ತಾಲ್ಲೂಕಿನಲ್ಲಿ ತಲಾ 4 ಜನರಲಿ ಸೋಂಕು ಕಾಣಿಸಿದೆ.

     ಇವರಲ್ಲಿ 85 ಪುರುಷರು, 47 ಮಹಿಳೆಯರು ಸೇರಿದ್ದಾರೆ. 60 ವರ್ಷ ವಯಸ್ಸಿನ ಮೇಲ್ಪಟ್ಟ 15 ಜನ ಹಾಗೂ ಇಬ್ಬರು ಮಕ್ಕಳು ಇದ್ದಾರೆ.ಈವರೆಗೆ ಜಿಲ್ಲೆಯಲ್ಲಿ ವರದಿಯಾಗಿರುವ ಒಟ್ಟು 1346 ಸೋಂಕು ಪ್ರಕರಣಗಳಲ್ಲಿ ತುಮಕೂರು ತಾಲ್ಲೂಕಿನಲ್ಲಿ 575, ಕುಣಿಗಲ್ ತಾ. 125, ಪಾವಗಡ ತಾ. 113, ಮಧುಗಿರಿ ತಾ. 107, ಶಿರಾ 88, ಚಿಕ್ಕನಾಯಕನಹಳ್ಳಿ ತಾ. 72, ಗುಬ್ಬಿ ತಾ. 72, ಕೊರಟಗೆರೆ ತಾ. 69, ತಿಪಟೂರು ತಾ. 64, ತುರುವೇಕೆರೆ ತಾ. 60 ಪ್ರಕರಣ ವರದಿಯಾಗಿವೆ.ಸೋಮವಾರ ಗುಣಮುಖರಾಗಿ ಆಸ್ಪತ್ರೆಯಿಂದ 33 ಮಂದಿ ಬಿಡುಗಡೆಯಾಗಿದ್ದು, ಈವರೆಗೆ 636 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 667 ಸಕ್ರಿಯ ಪ್ರಕರಣಗಳಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap