ತಿಪಟೂರು :
ಮೇ 29 ರಂದು ನಡೆಯಲಿರುವ ನಗರಸಭಾ ಚುನಾವಣೆಗೆ ರಾಷ್ಟ್ರೀಯ/ಪ್ರಾದೇಶಿಕ ಪಕ್ಷಗಳೂ ಸೇರಿದಂತೆ ಒಟ್ಟು 146 ಅರ್ಜಿಗಳು ಸಲ್ಲಿಕೆಯಾಗಿದ್ದು ಈ ಪೈಕಿ 5 ನಾಮಪತ್ರಗಳು ತಿರಸ್ಕøತಗೊಂಡು, 7 ಮಂದಿ ಸ್ಪರ್ಧೆಯಿಂದ ಹಿಂದುಳಿದಿದ್ದು. ಅಂತಿವiವಾಗಿ 134 ಮಂದಿ ಸ್ಪರ್ಧಾ ಕಣದಲ್ಲಿದ್ದಾರೆ.
ಕಾಂಗ್ರೆಸ್, ಬಿ.ಜೆ.ಪಿ. ಜೆ.ಡಿ.ಎಸ್ ಪಕ್ಷಗಳಿಂದ 81, ಬಿ.ಎಸ್.ಪಿ. ಯಿಂದ 01, ಮತ್ತು 52 ಮಂದಿ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ.
ಪಕ್ಷೇತರರಲ್ಲಿ ಪ್ರಮುಖರು : 7 ನೇ ವಾರ್ಡಿನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಮಾಜಿ ಸದಸ್ಯ ಎಂ.ಎಸ್. ಯೋಗೇಶ್ ಗೆ ಕಡೇ ಗಳಿಗೆಯಲ್ಲಿ ಬಿ.ಜೆ.ಪಿ. ಯಿಂದ ಟಿಕೆಟ್ ಕೈ ತಪ್ಪಿದ್ದು. ಮತ್ತು ತಾಲ್ಲೂಕು ಚುನಾವಣಾ ಆಯೋಗ ಬಿ.ಸಿ.ಎಂ.ಬಿ. ಜಾತಿ ಪ್ರಮಾಣ ಪತ್ರ ನೀಡಲು ನಿರಾಕರಿಸಿದಾಗ್ಯೂ. ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಜಾತಿ ಪ್ರಮಾಣ ಪತ್ರ ಗಿಟ್ಟಿಸಿಕೊಂಡ ಯೋಗೇಶ್ ಇದೇ ವಾರ್ಡಿನಿಂದ ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದಾರೆ.
09 ನೇ ವಾರ್ಡಿಗೆ, ಕಾಂಗ್ರೆಸ್‍ನಿಂದ ಹೊರಬಂದಿರುವ ಮಾಜಿ ಹಿರಿಯ ಸದಸ್ಯ ಟಿ.ಜಿ. ಲಿಂಗರಾಜು ಪಕ್ಷೇತರರಾಗಿ ಬ್ಯಾಟ್ ಚಿನ್ಹೆಯೊಂದಿಗೆ ಮೈದಾನಕ್ಕಿಳಿದಿದ್ದಾರೆ. ನಗರಸಭೆ ಸದಸ್ಯತ್ವದ ಜೊತೆ ಕಲ್ಪತರು ವಿಜ್ಞಾನ ಕಾಲೇಜಿನಲ್ಲಿ ನೌಕರಿ ಹೊಂದಿರುವ ಇವರಿಗೆ ಕಾನೂನು ತೊಡಕು ಕಾಡುತ್ತಿದ್ದು. ಹೇಗಾದರಾಗಲಿ ಎಂದು ತಮ್ಮ ಪತ್ನಿ ಸ್ವರ್ಣರನ್ನು ತಾವು ಹಿಂದೆ ಪ್ರತಿನಿಧಿಸುತ್ತಿದ್ದ 13 ನೇ ವಾರ್ಡಿಗೆ ಪಕ್ಷೇತರರಾಗಿ ಕಣಕ್ಕಿಳಿಸಿದ್ದಾರೆ.
14 ನೇ ವಾರ್ಡನ್ನು ಜೆ.ಡಿ.ಎಸ್. ನಿಂದ ಪ್ರತಿನಿಧಿಸುತ್ತಿದ್ದ ಮಾಜಿ ಸದಸ್ಯೆ ರೇಖಾ ಅನೂಪ್.ಗೆ ಪಕ್ಷದಿಂದ ಟಿಕೆಟ್‍ಸಿಗದ ಕಾರಣ 13 ನೇ ವಾರ್ಡಿನಿಂದ ಪಕ್ಷೇತರರಾಗಿ ಕಣದಲ್ಲಿದ್ದಾರೆ. ಬಿ.ಜೆ.ಪಿ. ಪಕ್ಷದಲ್ಲಿ ಪ್ರಭಲವಾಗಿ ಗುರುತಿಸಿಕೊಂಡಿದ್ದ ಎಂ.ಆರ್. ಗಿರೀಶ್ ಗೆ ಕಡೇ ಗಳಿಗೆಯಲ್ಲಿ ಪಕ್ಷದಿಂದ ಟಿಕೆಟ್ ದೊರಕದ ಕಾರಣ 19 ನೇ ವಾರ್ಡಿಗೆ ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ