14 ಎತ್ತಿನ ಗಾಡಿಗಳ ಮೂಲಕ ಅಕ್ರಮ ಮರಳು ಸಾಗಾಣಿಕೆ

ಚಳ್ಳಕೆರೆ

         ಕಳೆದ ಹಲವಾರು ತಿಂಗಳುಗಳಿಂದ ಲಾರಿ ಮತ್ತು ಟ್ರ್ಯಾಕ್ಟರ್‍ಗಳಲ್ಲಿ ಕಾನೂನು ಬಾಹಿರವಾಗಿ ಮರಳು ಸಾಗಾಣಿಕೆಯಾಗುತ್ತಿದ್ದನ್ನು ಜಿಲ್ಲಾ ರಕ್ಷಣಾಧಿಕಾರಿಗಳ ಖಡಕ್ ನಿರ್ದೇಶನದ ಮೇರೆಗೆ ಪೊಲೀಸ್ ಇಲಾಖೆ ಸಂಪೂರ್ಣವಾಗಿ ನಿಯಂತ್ರಿಸಿದ್ದು, ಎಲ್ಲಿಯೂ ಸಹ ಪರವಾನಿಗೆ ಇಲ್ಲದೆ ಮರಳು ಸಾಗಾಣಿಕೆ ಮಾಡುತ್ತಿದ್ದ 14 ಎತ್ತಿನ ಗಾಡಿಗಳ ವಶ ಪ್ರಕರಣ ದಾಖಲಿಸಿದೆ.

         ಆದರೆ, ಪೊಲೀಸ್ ಇಲಾಖೆಯ ಕಣ್ಣು ತಪ್ಪಿಸಿ ಕೆಲವು ಮರಳು ದಂಧೆಕೋರರು ಎತ್ತಿನ ಗಾಡಿಗಳಲ್ಲಿ ಪ್ರತಿನಿತ್ಯ ಬೆಳಗಿನ ಜಾವವೇ ಮರಳು ಸಾಗಾಣಿಕೆ ಮಾಡುವುದು ಕಂಡು ಬಂದಿದ್ದು, ಈ ಬಗ್ಗೆ ಜಿಲ್ಲಾ ರಕ್ಷಣಾಧಿಕಾರಿ ಮತ್ತು ಡಿವೈಎಸ್ಪಿ ಸೂಚನೆ ಮೇರೆಗೆ ವೃತ್ತ ನಿರೀಕ್ಷಕ ಎನ್.ತಿಮ್ಮಣ್ಣ ಗುರುವಾರ ಬೆಳಗಿನ ಜಾವ ದೊಡ್ಡೇರಿ, ನಗರಂಗೆರೆ, ನರಹರಿನಗರ ವ್ಯಾಪ್ತಿಯ ಹಳ್ಳಗಳಿಂದ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದ ಎತ್ತಿನ ಗಾಡಿಗಳನ್ನು ತಡೆದು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಸುಮಾರು 14ಕ್ಕೂ ಹೆಚ್ಚು ಎತ್ತಿನ ಗಾಡಿಗಳು ದೊರಕಿದ್ದು, ಗಾಡಿನ ಮಾಲೀಕರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.

        ಈ ಸಂದರ್ಭದಲ್ಲಿ ಖಡಕ್ ಎಚ್ಚರಿಕೆ ನೀಡಿರುವ ವೃತ್ತ ನಿರೀಕ್ಷಕ ಎನ್.ತಿಮ್ಮಣ್ಣ, ಸರ್ಕಾರ ಅಕ್ರಮ ಮರಳು ಸಾಗಾಣಿಕೆಯನ್ನು ಸಂಪೂರ್ಣವಾಗಿ ನಿಷೇದಿಸಿದ್ದು, ಎತ್ತಿನ ಗಾಡಿಗಳಲ್ಲಿ ಮರಳು ಸಾಗಾಣಿಕೆ ಮಾಡುವುದು ಕಾನೂನು ಬದ್ದ ಅಪರಾಧವಾಗಿದೆ. ಮುಂಬರುವ ದಿನಗಳಲ್ಲಿ ಯಾರೂ ಸಹ ಇಂತಹ ಅಕ್ರಮ ಮರಳು ಸಾಗಾಣಿಕೆರೆ ಯತ್ನಿಸಬಾರದು. ಈಗಾಗಲೇ ಮರಳು ಸಾಗಾಣಿಕೆಯಿಂದ ಹಳ್ಳಗಳು ಒಣಗಿದ್ದು, ಗ್ರಾಮೀಣ ಭಾಗದ ಬೋರ್‍ಗಳು ಸಹ ಸ್ಥಗಿತಗೊಂಡಿವೆ.

         ನೀರಿಲ್ಲದೆ ಜಾನುವಾರುಗಳು ಸಂಕಷ್ಟವನ್ನು ಎದುರಿಸುತ್ತಿದ್ದು, ರೈತರಿಗೂ ಸಹ ನಿರೀಕ್ಷೆಯಂತೆ ಯಾವುದೇ ಬೆಳೆ ಸಿಗುತ್ತಿಲ್ಲ. ಕೆಲವು ಗ್ರಾಮಗಳ ಬಳಿಯೇ ಮುಕ್ತಿಧಾಮದಲ್ಲೇ ಅಕ್ರಮ ಮರಳು ಸಾಗಾಣಿಕೆಯಾಗಿದ್ದು, ಈ ಬಗ್ಗೆ ಹಲವಾರು ದೂರುಗಳು ಸಾರ್ವಜನಿಕರಿಂದ ವ್ಯಕ್ತವಾಗಿವೆ. ಆದ್ದರಿಂದ ಯಾರೂ ಸಹ ಅಕ್ರಮ ಮರಳು ಸಾಗಾಣಿಕೆಗೆ ಯತ್ನಿಸಿದೆ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕೆಂದು ತಿಳಿಸಿದರು.

          ಮರಳು ದಂಧೆಕೋರರು ಟ್ರ್ಯಾಕ್ಟರ್ ಮತ್ತು ಲಾರಿಗಳಲ್ಲಿ ಅಕ್ರಮ ಮರಳು ಸಾಗಾಣಿಕೆ ಮಾಡಿದಲ್ಲಿ ಕಾನೂನು ಕ್ರಮವನ್ನು ಎದುರಿಸುವುದರಿಂದ ಎತ್ತಿನ ಗಾಡಿಗಳಲ್ಲಿ ಮರಳನ್ನು ತಂದು ನಿಗದಿತ ಸ್ಥಳದಲ್ಲಿ ದಾಸ್ತಾನು ಮಾಡುತ್ತಿದ್ದರು. ಪ್ರತಿನಿತ್ಯ ಮುಂಜಾನೆಯೇ ಸುಮಾರು 20 ರಿಂದ 30ಕ್ಕೂ ಹೆಚ್ಚು ಎತ್ತಿನ ಟೈಯರ್ ಗಾಡಿಗಳಲ್ಲಿ ಮರಳು ಸಾಗಾಣಿಕೆಯಾಗುತ್ತಿದ್ದು, ಈ ಬಗ್ಗೆ ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಪಿಎಸ್‍ಐ ಎನ್.ಗುಡ್ಡಪ್ಪ ಮತ್ತು ಸಿಬ್ಬಂದಿ ವರ್ಗ ಗುರುವಾರ ಬೆಳಗಿನ ಜಾವ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ ಟೈಯರ್ ಗಾಡಿಗಳನ್ನು ಎತ್ತಿನ ಸಮೇತ ತಂದು ಇಲ್ಲಿನ ಪೊಲೀಸ್ ಠಾಣಾ ಆವರಣದಲ್ಲಿ ನಿಲ್ಲಿಸಿದ್ಧಾರೆ.

         ಟೈಯರ್ ಗಾಡಿಗಳಲ್ಲಿ ಅಕ್ರಮ ಮರಳು ಇದ್ದು, ಈ ಬಗ್ಗೆ ಗಾಡಿಯ ಮಾಲೀಕರಿಗೆ ಕಡು ಎಚ್ಚರಿಕೆ ನೀಡಲಾಗಿದೆ. ಇಲ್ಲಿನ ಪೊಲೀಸ್ ಠಾಣಾ ಆವರಣದಲ್ಲಿ ಎತ್ತಿನ ಟೈಯರ್ ಗಾಡಿಗಳಿದ್ದರೆ. ಎತ್ತುಗಳನ್ನು ಪೊಲೀಸ್ ಠಾಣೆಯ ಮುಂಭಾಗದ ಕಾಂಪೌಂಡ್ ಗೋಡೆಯ ಬಳಿ ಸಾಲಾಗಿ ಕಟ್ಟಲಾಗಿತ್ತು.

ಹೆಚ್ಚಿನ ಧರಕ್ಕೆ ಮಾರಾಟ 

          ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಟ್ರ್ಯಾಕ್ಟರ್ ಲಾರಿಯನ್ನು ಬಿಟ್ಟ ಅಕ್ರಮ ಮರಳು ದಂಧೆಕೋರರು ಸುಲಭವಾಗಿ ಮರಳು ದಂಧೆಕೋರರು ಮರಳು ಸಾಗಿಸುತ್ತಿದ್ದಾರೆ. ಈ ಹಿಂದೆ ಒಂದು ಮರಳು ಗಾಡಿಗೆ 500 ರೂ ಪಾತ್ರವಿದ್ದು, ಈ 2 ಸಾವಿರಕ್ಕೆ ಏರಿಕೆಯಾಗಿದೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡ ದಂಧೆಕೋರರು ಹೆಚ್ಚು ಹೆಚ್ಚು ಗಾಡಿಗಳಲ್ಲಿ ಮರಳುಗಳನ್ನು ಬೆಳಗಿನ ಜಾವವೇ ಗ್ರಾಮೀಣ ಪ್ರದೇಶಗಳಿಂದ ನಗರಕ್ಕೆ ತರುವ ಕಾರ್ಯದಲ್ಲಿ ನಿರತರಾಗಿದ್ಧಾರೆ. ಈ ಬಗ್ಗೆ ಸೂಚನೆ ನೀಡಿರುವ ಪೊಲೀಸರು ಎತ್ತಿನ ಗಾಡಿಯಲ್ಲಿ ಮರಳು ಸಾಗಾಣಿಕೆ ಕಂಡು ಬಂದಲ್ಲಿ ಹೆಚ್ಚಿನ ದಂಡ ವಸೂಲಿ ಮಾಡುವ ಎಚ್ಚರಿಕೆ ನೀಡಿದ್ಧಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap