ತುರುವೇಕೆರೆ:
ಅಂಡಮಾನ್ ಪ್ರವಾಸಕ್ಕೆ ತೆರಳಿದ್ದ ತಾಲೂಕಿನ 14 ಜನ ಪ್ರವಾಸಿಗರು ಸೇರಿ ಕರ್ನಾಟಕದ ಸುಮಾರು 47 ಪ್ರವಾಸಿಗರಿಗೆ ಬೆಂಗಳ್ರರಿಗೆ ವಿಮಾನ ಸಿಗದೆ ಕೊಲ್ಕತಾ ವಿಮಾನ ನಿಲ್ದಾಣದಲ್ಲಿ 2 ದಿನ ಕಾಲ ಕಳೆಯುವಂತಾಗಿದೆ.
ಕಳೆದ ಏಪ್ರಿಲ್ ತಿಂಗಳ 29 ರಂದು 6 ದಿನಗಳ ಕಾಲ ಸುಮಾರು 47 ಜನರ ತಂಡ ಅಂಡಮಾನ್ ಪ್ರವಾಸ ಕೈಗೊಂಡಿದ್ದರು. ಈ ತಂಡದಲ್ಲಿ ತುರುವೇಕೆರೆ ತಾಲೂಕಿನ 14 ಪ್ರವಾಸಿಗರು ಇನ್ನುಳಿದ ಜನರು ಮೈಸೂರು ಹಾಗೂ ಮೂಡಗೆರೆ ಮೂಲದವರು ಸೇರಿದ್ದಾರೆ. ಅಂಡಮಾನ್‍ನಲ್ಲಿ 6 ದಿನ ಪ್ರವಾಸ ಮುಗಿಸಿದ ಪ್ರವಾಸಿಗರ ತಂಡ ಕೊಲ್ಕತಾ ವಿಮಾನ ನಿಲ್ದಾಣಕ್ಕೆ ತಲುಪಿದ್ದಾರೆ. ಅದರೆ ಶನಿವಾರವೇ ಬೆಂಗಳೂರಿಗೆ ಆಗಮಿಸಬೇಕಿದ್ದ ಪ್ರವಾಸಿಗರು ವಿಮಾನ ಕಂಪನಿ ವಿಮಾನ ವ್ಯವಸ್ಥೆ ಕಲ್ಪಿಸದ ಕಾರಣ ಕೊಲ್ಕತಾದ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಕಾಲ ಕಳೆಯುವಂತಗಿದೆ.
ಪ್ರವಾಸಿಗರಾದ ಪಟ್ಟಣದ ಮಹೇಶ್ ಮಾತನಾಡಿ ನಾವುಗಳು 6 ದಿನ ಚನ್ನಾಗಿ ಪ್ರವಾಸ ಮುಗಿಸಿದವು ಆದರೆ ಅಂಡಮಾನಿಂದ ಬಂದ ನಮಗೆ ಸ್ಪೈಸ್ ಜಟ್ ಏರ್‍ಲೈನ್ಸ್ ವಿಮಾನ ವ್ಯವಸ್ಥೆ ಮಾಡಬೇಕಿತ್ತು ಹಾಗೆ ಮಾಡಿದ್ದರೆ ಶನಿವಾರವೇ ಬೆಂಗಳೂರು ತಲುಪುತ್ತಿದ್ದವು. ಆದರೆ ಸ್ಪೈಸ್ ಏರ್ ಲೈನ್ಸ್‍ನವರು ಮಾಡಲ್ಲಿಲ್ಲ ಅದ್ದರಿಂದ ನಮ್ಮ ತಂಡ ಸೇರಿ ಕರ್ನಾಟಕ ಮೂಲದ 150ಕ್ಕೂ ಹೆಚ್ಚು ಜನರು ಇಲ್ಲೆ ಕೊಳೆಯುವಂತಾಗಿದೆ.
ಮೊದಲು 8, 9 ನೆ ತಾರೀಕುವರೆಗೂ ವಿಮಾನ ವ್ಯವಸ್ಥೆ ಮಾಡಲು ಸಾದ್ಯವಿಲ್ಲ ಎಂದು ತಿಳಿಸಿದ್ದು ಒಂದು ದಿನ ಮಾತ್ರ ಹೋಟಲ್ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ತಿಳಿಸಿದರು ನಂತರ ನಾವುಗಳು ಪ್ರತಿಭಟನೆ ಹಾಗೂ ಒತ್ತಾಯದಿಂದಾಗಿ ಹೋಟಲ್ ಬುಕ್ ಮಾಡಿ ಕೊಟ್ಟು 11 ಜನರನ್ನು ದೆಹಲಿ ಮೂಲಕ, 6 ಜನರನ್ನು ಬಾಂಬೆ ಮೂಲಕ, 9 ಜನರನ್ನು ಪೂನ ಮೂಲಕ, 4 ಜನರನ್ನು ನೇರ ಬೆಂಗಳೂರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದು ಒಟ್ಟು ನಾಳೆ ಬಹುತೇಖ ಬೆಂಗಳೂರಿಗೆ ಆಗಮಿಸಿ ರಾತ್ರಿ ಮನೆ ತಲುಪುತ್ತೇವೆ ಎಂದು ತಿಳಿಸಿದ್ದಾರೆ.
ಕೊಲ್ಕತಾದಲ್ಲಿ ಸಿಲುಕಿಕೊಂಡ ಪಟ್ಟಣದವರು. ತಾಲೂಕಿನ ಮುನಿಯೂರು ರಂಗನಾಥಅವರ ಕುಟುಂಬ ಮತ್ತು ಮಹಿಳೆಯರು ಹಾಗೂ ಸಾಮಿಲ್ ಬಾಲಕೃಷ್ಣ, ಹಚಿಡತಿ ಛಾಯಾ ಹಾಗೂ ಕುಟುಂಬ ವರ್ಗ ಸೇರಿದಂತೆ ಇನ್ನುಳಿದ ಕುಟುಂಬಗಳು ಸಿಲುಕಿವೆ ಎನ್ನಲಾಗಿದೆ.