ಹರಿಹರದಲ್ಲಿ 11.5ಲಕ್ಷ ರೂ ವೆಚ್ಚದಲ್ಲಿ 14 ಬೋರ್‍ವೆಲ್‍ಗಳು

ಹರಿಹರ:

       ನಗರದ ವಿವಿಧ ಬಡಾವಣೆಯಲ್ಲಿ 11.5ಲಕ್ಷ ರೂಪಾಯಿಗಳ ವೆಚ್ಚದಲ್ಲಿ 14 ಬೋರ್‍ವೆಲ್‍ಗಳನ್ನು ಕೊರೆಸಲಾಗುತ್ತಿದೆ ಎಂದು ಶಾಸಕ ಎಸ್. ರಾಮಪ್ಪ ಹೇಳಿದರು.

       ಹರಿಹರದ ಮಹತ್ಮಾಗಾಂಧಿ ಕೊಳಚೆ ಪ್ರದೇಶದಲ್ಲಿ ಗುರುವಾರ ಕೊಳವೆ ಬಾವಿ ಕೊರೆಯಲು ಚಾಲನೆ ನೀಡಿ ಮಾತನಾಡಿದ ಅವರು ಪ್ರತಿವರ್ಷ ಬೇಸಿಗೆ ಕಾಲದಲ್ಲಿ ನಗರದಾದ್ಯಂತ ನೀರಿನ ಸಮಸ್ಯೆ ಎದುರಾಗುತ್ತಾ ಬಂದಿದ್ದು, ಮುಂಬರುವ ಬೇಸಿಗೆ ಕಾಲಕ್ಕೆ ಕುಡಿಯುವ ನೀರಿನ ಸಮಸ್ಯೆ ಯಾಗದಂತೆ ನೋಡಿಕೊಳ್ಳುತ್ತೆವೆ. ಎಂದರು.

         ಬೇಸಿಗೆ ಕಾಲದಲ್ಲಿ ಪಕ್ಕದ ತುಂಗಭದ್ರ ನಂದಿಯಲ್ಲಿ ನೀರು ಇಲ್ಲದೆ ಭತ್ತಿಹೊಗುತ್ತದೆ. ಈ ಕಾರಣದಿಂದಾಗಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತದೆ. ಮುಂದಿನ ದಿನಗಳಲ್ಲಿ ನಗರಕ್ಕೆ ನೀರಿನಕೊರತೆ ಆಗಬಾರದು ಎಂಬ ಉದ್ಧೇಶದಿಂದ ನಗರಸಭೆಯ 2018-19ನೇ ಸಾಲಿನ ನಿಧಿಯಿಂದಕಾರ್ಯಕ್ಕೆ ಚಾಲನೆ ನೀಡಲಾಗುತ್ತಿದೆ ಎಂದರು.

         ಈ ಸಂದರ್ಭದಲ್ಲಿ ವಾರ್ಡ ಸದಸ್ಯ ಸಿಗ್ಬತ್ತುಲ್ಲಾ, ನಗರಸಭಾ ಸದಸ್ಯರಾದ ಎಸ್.ಎಂ.ವಸಂತ, ಕೆ. ಮರಿದೇವ, ಎಇಇ ಬಿ.ಎಸ್. ಪಾಟೀಲ್, ಕಿರಿಯ ಸಹಾಯಕ ಇಂಜಿನಿಯರ್ ನೌಷಾದ, ಮುಖಂಡರಾದ ಭದ್ರಾಚಾರಿ, ಆರ್.ಬಿ. ಗಜೇಂದ್ರ, ರೇವಣಸಿದ್ದಪ್ಪ, ಎಸ್.ಬಿ. ಉಮಾ ಹಾಗೂ ಇತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap