ಬೆಂಗಳೂರು
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾನಕ್ಕೂ ಮೊದಲು ಏ.16ರ ಸಂಜೆ ನಾಲ್ಕು ಗಂಟೆಯಿಂದ 19ರವರೆಗೆ ಬೆಂಗಳೂರು ನಗರದಲ್ಲಿ ನಿಷೇದಾಜ್ಞೆ ಜಾರಿ ಮಾಡಲಾಗಿದೆ.
ಮತದಾನಕ್ಕೂ ಮೊದಲ 48 ಗಂಟೆ ಹಾಗೂ ಮತದಾನ ಮುಗಿದ ನಂತರದ 24ಗಂಟೆಗಳ ಅವಧಿಯಲ್ಲಿಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿ ಮಾಡಿ ನಗರ ಪೊಲೀಸ್ ಆಯುಕ್ತ ಸುನಿಲ್‍ಕುಮಾರ್ ಆದೇಶ ಹೊರಡಿಸಿದ್ದಾರೆ.
ಚುನಾವಣಾ ಆಯೊಗದ ಆದೇಶದಂತೆ ನಿಷೇಧಾಜ್ಞೆ ವೇಳೆ ರಾಜಕೀಯ ಕಾರ್ಯಕರ್ತರು 10ಜನರು ಮೀರದಂತೆ ಮನೆ ಮನೆಗೆ ಭೇಟಿ ನೀಡಿ ಚುನಾವಾಣ ಪ್ರಚಾರ ಮಾಡುವುದಕ್ಕೆ ವಿನಾಯಿತಿನೀಡಲಾಗಿದೆ.ನಿಷೇಧಾಜ್ಞೆ ಅವಧಿಯಲ್ಲಿ ಮತದಾನ ಕೇಂದ್ರಗಳಿಗೆ ಮತ ಹಾಕಲು ಬರುವ ಮತದಾರರನ್ನ ಹೊರತುಪಡಿಸಿ ಉಳಿದಂತೆ 5ಜನರ ಮೇಲ್ಪಟ್ಟು ಗುಂಪುಗಾರಿಕೆ ಮಾಡುವುದಾಗಲೀ ಇತರೆ ಕಾನೂನು ಬಾಹಿರ ಚಟುವಟಿಕೆ ನಡೆಸುವಂತಿಲ್ಲ.
ಹಾಗೆ ಯಾವುದೇ ಸಂಘಟನೆಗಳು, ರಾಜಕೀಯ ಪಕ್ಷಗಳು, ಧಾರ್ಮಿಕ ಪಂಗಡಗಳು ಮೆರವಣಿಗೆ, ಪ್ರತಿಭಟನೆ ನಡೆಸುವಂತಿಲ್ಲ. ಮಾರಕಾಸ್ತ್ರ, ವಿನಾಶಕಾರಿ ಮತ್ತು ಸ್ಫೋಟಕ ವಸ್ತು ಹೊಂದಿದವರನ್ನ ಬಂಧಿಸುವ ಅಧಿಕಾರ ಪೊಲೀಸರಿಗಿದೆ. ರಾಜಕಾರಣ ಭಾಷಣ, ಪ್ರಚೋಧನಾಕಾರಿ ಹೇಳಿಕೆ ನೀಡುವುದು, ಬ್ಯಾನರ್ಸ್ ಅಥವಾ ಫ್ಲೈಕ್ಸ್ ಅಂಟಿಸಲು ನಿಷೇಧ. ಸಮಾರೋಪ ಸಂಭ್ರಮಗಳನ್ನ ನಡೆಸಲು ಆಯಾ ಪೊಲೀಸ್ ಠಾಣೆಗಳ ಅನುಮತಿ ತೆಗೆದುಕೋಳ್ಳಲು ಸೂಚನೆ ನೀಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








