ಬೆಂಗಳೂರು
ಸಾಮೂಹಿಕ ವಿವಾಹ ನೆರವೇರುತ್ತಿದ್ದ ಸಂದರ್ಭದಲ್ಲಿ ಗಟ್ಟಿಮೇಳದ ವೇಳೆ 15ಕ್ಕೂ ತಾಳಿಗಳು ನಾಪತ್ತೆಯಾಗಿ, ವಧು-ವರರು ಗಲಿಬಿಲಿಯಾದ ಘಟನೆ ನೆಲಮಂಗಲದ ಕಾಚೋಹಳ್ಳಿ ಕಲ್ಯಾಣ ಮಂಟಪದಲ್ಲಿ ನಡೆದಿದೆ.ಕಾಚೋಹಳ್ಳಿ ಕಲ್ಯಾಣ ಮಂಟಪದಲ್ಲಿ ಗುರುವಾರ ಪಟ್ಟನಾಯಕನಹಳ್ಳಿ ನಂಜಾವದೂತ ಸ್ವಾಮೀಜಿ ನೇತೃತ್ವದಲ್ಲಿ ಸಾಮೂಹಿಕ ವಿವಾಹದಲ್ಲಿ ಅಡಮಾರನಹಳ್ಳಿ ಗ್ರಾಮಸ್ಥರು 15 ಜೋಡಿಗಳ ಮದುವೆ ಮಾಡಿಸುತ್ತಿದ್ದರು.ಈ ಖುಷಿ ನಡುವೆ ಕಳ್ಳನೊಬ್ಬ 15 ತಾಳಿಗಳನ್ನು ಕದ್ದು ಪರಾರಿಯಾಗಿದ್ದಾನೆ.
ಮದುವೆ ಸಮಾರಂಭದಲ್ಲಿ ಎಲ್ಲರೂ ತೊಡಗಿರುವಾಗ ಕ್ಷಣಾರ್ಧದಲ್ಲಿ ತಾಳಿ ಕದ್ದು ಕಲ್ಯಾಣ ಮಂಟಪದಿಂದ ಕಳ್ಳ ನಾಪತ್ತೆಯಾಗಿದ್ದಾನೆ. ಶುಭ ಸಮಾರಂಭದಲ್ಲಿ ಹೀಗಾಯ್ತಲ್ಲಾ ಎಂದು ಕುಟುಂಬಸ್ಥರು ಹಾಗೂ ಸ್ಥಳದಲ್ಲಿದ್ದವರು ತಳಮಳಗೊಂಡಿದ್ದು ಕೂಡಲೇ 15 ತಾಳಿಗಳನ್ನು ತರಿಸಿ ವಿವಾಹ ಮಾಡಿಸಿದ್ದಾರೆ ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








