ಬೆಂಗಳೂರು ಗ್ರಾಮಾಂತರ ಕ್ಷೇತ್ರ : 15 ಮಂದಿ ಕಣದಲ್ಲಿ

ಕುಣಿಗಲ್

      ಏ.18 ರಂದು ನಡೆಯುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣಾ ಕಣದಲ್ಲಿ ಅಂತಿಮವಾಗಿ 15 ಅಭ್ಯರ್ಥಿಗಳು ಉಳಿದಿದ್ದಾರೆ ಎಂದು ಸಹಾಯಕ ಚುನಾವಣಾಧಿಕಾರಿ ಜಿ.ಎಸ್. ಜಯಸ್ವಾಮಿ ತಿಳಿಸಿದರು.

      ತಾಲ್ಲೂಕು ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಯಲ್ಲಿ ಅಂತಿಮವಾಗಿ 15 ಮಂದಿ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಪಕ್ಷೇತರ ಅಭ್ಯರ್ಥಿಗಳಾದ ಈಶ್ವರ, ಬಿ.ಗೋಪಾಲ್, ಹೆಚ್.ಡಿ.ಚಿಕ್ಕರಾಜು, ಎಂ.ಸಿ.ದೇವರಾಜು, ಜೆ.ಟಿ.ಪ್ರಕಾಶ್, ರಘು ಜಾಣಗೆರೆ, ಎನ್.ಕೃಷ್ಣಪ್ಪ, ಡಿ.ಎಂ.ಮಾದೇಗೌಡ, ಮಂಜುನಾಥ್ ಎಂ., ರಮಾ ಟಿ.ಸಿ., ಡಾ.ಎಂ.ವೆಂಕಟಸ್ವಾಮಿ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ, ವೆಂಕಟೇಶಪ್ಪ ಸರ್ವ ಜನತಾ ಪಾರ್ಟಿ, ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಾಗಿ ಬೆಜೆಪಿಯ ಅಶ್ವತ್ಥ್ ನಾರಾಯಣಗೌಡ, ಬಹುಜನ ಸಮಾಜ ಪಾರ್ಟಿ ಡಾ ಚಿನ್ನಪ್ಪ ವೈ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನಿಂದ ಡಿ.ಕೆ.ಸುರೇಶ್ ಇವರುಗಳು ಚುನಾವಣಾ ಕಣದಲ್ಲಿದ್ದಾರೆ. ಈ ಎಲ್ಲಾ ಅಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆ ಮಾಡಲಾಗಿದ್ದು, ಈಗಾಗಲೇ ಅಭ್ಯರ್ಥಿಗಳಿಗೆ ಚುನಾವಣೆ ನೀತಿ ಸಂಹಿತೆ, ಪಾರದರ್ಶಕ ಚುನಾವಣೆ ನಡೆಸಲು ಕೋರಲಾಗಿದೆ.

       ಇವಿಎಂ ಹಾಗೂ ವಿವಿ ಪ್ಯಾಟ್‍ಗಳ ಮೊದಲ ಸುತ್ತಿನ ಮತ ಪೆಟ್ಟಿಗೆಗಳು ಬಂದಿದ್ದು, ಅವುಗಳನ್ನು ಪೊಲೀಸ್ ಬಂದೋಬಸ್ತ್‍ನಲ್ಲಿ ಇಡಲಾಗಿದೆ. ಯುವಕರಲ್ಲಿ, ವಿದ್ಯಾರ್ಥಿಗಳಲ್ಲಿ ಮತದಾನದ ಬಗ್ಗೆ ಹೆಚ್ಚಿನ ಅರಿವು ಉಂಟಾಗಬೇಕಾಗಿದೆ. ಮಾಹಿತಿಗಳ ಕೊರತೆಯಿದೆ. ಈಗಾಗಲೇ 264 ಪೋಲಿಂಗ್ ಸ್ಟೇಷನ್‍ಗಳಲ್ಲಿ ಕುಡಿಯುವ ನೀರು, ವಿದ್ಯುತ್, ಶೌಚಾಲಯ ಸೇರಿದಂತೆ ಸೌಲಭ್ಯಗಳನ್ನು ಕಲ್ಪಿಸುವುದರ ಜೊತೆಯಲ್ಲಿ ತಾಲ್ಲೂಕಿನಲ್ಲಿ 3600 ವಿಶೇಷಚೇತನರು ಇದ್ದು, ಇವರಿಗೆ ಮತ ಚಲಾಯಿಸಲು ಸಹಾಯಕವಾಗಲೆಂದು 75 ವೀಲ್‍ಚೇರ್‍ಗಳನ್ನು ನೀಡಲಾಗುವುದು. ಜೊತೆಗೆ ಗ್ರಾಮ ಪಂಚಾಯಿತಿಯಲ್ಲಿ ಕಾಲೇಜು ವಿದ್ಯಾರ್ಥಿಗಳನ್ನೊಳಗೊಂಡ ಸ್ವಯಂ ಸೇವಕರಾಗಿ 720 ಯುವಕರ ಸೇವೆಯನ್ನು ಪಡೆದು ಇವರು, ವಿಶೇಷ ಚೇತನರಿಗೆ, ವೃದ್ಧರಿಗೆ ಸಹಾಯ, ಸಹಕಾರ ನೀಡಲಿದ್ದಾರೆ ಎಂದರು.

         ಈಗಾಗಲೇ 1ನೇ ಹಂತ ತರಬೇತಿ ಮುಗಿದಿದೆ, ಅಧಿಕಾರಿಗಳು, ಕೆ.ಎಸ್.ಆರ್.ಟಿ.ಸಿ, ಪೊಲೀಸ್ ಸಿಬ್ಬಂದಿಗೆ ಅಂಚೆ ಮತಪತ್ರಗಳನ್ನು ವಿತರಿಸಲಾಗುವುದು. ಮೊಬೈಲ್‍ಗಳಲ್ಲಿ ಚುನಾವಣೆಗೆ ಸಂಬಂಧಿಸಿದ ಮಾಹಿತಿಯು ಆಪ್‍ನಲ್ಲಿದ್ದು, ಇದರ ಮಾಹಿತಿಯ ಕೊರತೆಯಿಂದ ಜನಸಾಮಾನ್ಯರಿಗೆ ತಲುಪಿಲ್ಲ. ಇದು ಹೆಚ್ಚು-ಹೆಚ್ಚು ಬಳಕೆಯಾಗಬೇಕಾಗಿದೆ. ಮತದಾರರು ಮತ ಚಲಾಯಿಸುವಾಗ ಹತ್ತು ಬಗೆಯ ವಿವಿಧ ಗುರುತಿನ ಚೀಟಿಯಲ್ಲಿ ಯಾವುದಾದರು ಒಂದನ್ನು ಕಡ್ಡಾಯವಾಗಿ ತೋರಿಸಬೇಕಾಗಿದೆ ಎಂದರು.ಈ ಸಂದರ್ಭದಲ್ಲಿ ತಹಸೀಲ್ದ್ದಾರ್ ವಿಶ್ವನಾಥ್, ಕಾರ್ಯನಿರ್ವಹಣಾಧಿಕಾರಿ ಶಿವರಾಜಯ್ಯ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap