ಮಿಡಿಗೇಶಿ
ನಾಲ್ಕಾರು ವರ್ಷಗಳಿಂದ ಮಳೆಬಾರದೆ,ಬೆಳೆ ಬೆಳೆಯದೆಯೇ ತಿನ್ನಲು ಮೇವಿಲ್ಲದೆ ಕುಡಿಯಲು ನೀರು ಸಿಗದೆ ಇರುವಂತಹ ಸಂಕಷ್ಠದ ಪರಿಸ್ಥಿತಿಯಲ್ಲಿ ಜನಸಾಮಾನ್ಯರು,ದನ,ಕರ,ಕುರಿ,ಮೇಕೆ,ಹಸು,ಎಮ್ಮೆ,ಎತ್ತುಗಳು,ಓರಿಗಳು,ಸೇರಿದಂತೆ ಸಕಲ ಜೀವಂತ ಪ್ರಾಣಿಗಳು ಸಂಕಷ್ಠದಲ್ಲಿರುವ ಸಮಯ ಒಂದಡೆಯಾದರೆ.
ತನ್ನ ಸಂಸಾರದ ಜೀವನ ನಿರ್ವಹಣೆ ಮಾಡುವ ಸಲುವಾಗಿ ಮಧುಗಿರಿ ತಾಲ್ಲೂಕಿನ ಐ.ಡಿ.ಹಳ್ಳಿ ಹೋಬಳಿಗೆ ಸೇರಿದ ಬ್ರಹ್ಮಸಮುದ್ರ ಗ್ರಾಮ ಪಂಚಾಯಿತಿಗೆ ಸೇರಿದ ದಿನ್ನೆ ಮೇಗಲ ಗೊಲ್ಲರಹಟ್ಟಿ ಗ್ರಾಮದ ದೊಡ್ಡಯ್ಯ ಈತನ ತಾಯಿ ದೇವೀರಮ್ಮಳಿಗೂ ಹಾಗೂ ಇದೇ ಗ್ರಾಮದ ಚಿತ್ತಪ್ಪ ಕೋಂ ಲೇಟ್ ಹುಲಿಯಪ್ಪ ಎನ್ನುವವರಿಗೆ ಕಳೆದ ಎರಡು-ಮೂರು ವರ್ಷಗಳಿಂದಲೂ ಇದೇ ಗ್ರಾಮದ ಸರ್ವೇನಂ 11ರಲ್ಲಿ ಒಂದು ಹುಣಸೆ ಮರದ ವಿಚಾರವಾಗಿ ಆಗಿಂದಾಗ್ಗೆ ಜಗಳಗಳು ನಡೆಯುತ್ತ ಬಂದಿದ್ದು ಸದರಿಯವರಿಬ್ಬರು ಮಧುಗಿರಿ ಪಟ್ಟಣದ ನ್ಯಾಯಾಲಯದಲ್ಲಿ ಮೊಕ್ಕದ್ದಮ್ಮೆ ಹೂಡಿದ್ದು ವಾದ-ವಿವಾದಗಳು ನಡೆಯುತ್ತಿದ್ದು ಸರಿಯಷ್ಟೆ ಆದರೆ ತಾ.2-2-2019ರಂದು ಸ.ನಂ 11ರಲ್ಲಿನ ಹುಣಸೆ ಮರದಲ್ಲಿ ಹುಣಸೆ ಹಣ್ಣನ್ನು ದೊಡ್ಡಯ್ಯ ಕೀಳುತ್ತಿರುವ ಸಮದಲ್ಲಿ ಚಿತ್ತಪ್ಪನು ಜಗಳ ಮಾಡಿದ್ದು ಮಿಡಿಗೇಶಿ ಪೋಲಿಸ್ ಠಾಣೆಗೆ ದೊಡ್ಡಯ್ಯನ ವಿರುದ್ದ ಜನವರಿ 2ರಂದು ಲಿಖಿತ ದೂರನ್ನು ನೀಡಿರುತ್ತಾನೆ.
ದೊಡ್ಡಯ್ಯ ಕಿತ್ತೀದ್ದ ಹುಣಸೆ ಹಣ್ಣು ಹುಣಸೆ ಮರದ ಕೆಳಗಡೆಯೇ ಬಿಟ್ಟಿದ್ದು ಸರಿಯಷ್ಠೆ (ಸದರಿ ಹುಣಸೆ ಹಣ್ಣಿಗೆ ಚಿತ್ತಪ್ಪನು ಔಷಧಿಸಿಂಪಡಿಸಿರುವ ಬಗ್ಗೆ ದೊಡ್ಡಯ್ಯನಿಗೆ ಅನುಮಾನ) ಔಷಧಿಸಿಂಪಡಿಸಿರುವ ಹುಣಸೆ ಹಣ್ಣುನ್ನು ದೊಡ್ಡಯ್ಯನಿಗೆ ಸೇರಿದ ಕುರಿಗಳು ತಿಂದಿದ್ದು ರಾತ್ರಿ ರೊಪ್ಪದಲ್ಲಿ 15 ಕುರಿಗಳು ಸಾವನ್ನಪ್ಪಿರುತ್ತವೆ. ಇದರಿಂದ ಅನುಮಾನಗೊಂಡ ದೊಡ್ಡಯ್ಯನು ತಾ 3-2-2019 ರಂದು ಚಿತ್ತಪ್ಪನ ವಿರುದ್ದ ನೇರವಾಗಿ ಮಿಡಿಗೇಶಿ ಪೋಲಿಸ್ ಠಾಣೆಗೆ ಲಿಖಿತ ದೂರನ್ನು ನೀಡಿರುತ್ತಾನೆ.
15 ಕುರಿಗಳು ಸಾವಿನಿಂದ ದೊಡ್ಡಯ್ಯನಿಗೆ ಸುಮಾರು 1 ಲಕ್ಷರೂ ಅಂದಾಜು ನಷ್ಠ ಉಂಟಾಗಿದೆಯೆಂದು ಅಂದಾಜಿಸಲಾಗಿದೆ. ಸದರಿ ಇಬ್ಬರು ನೀಡಿರುವಂತ ದೂರಿನ ಮೇರೆಗೆ ಮಿಡಿಗೇಶಿ ಸಬ್ ಇನ್ಸ್ ಪೆಕ್ಟರ್ ಪುರುಷೋತ್ತಮ್.ಜಿ. ರವರ ತನಿಖೆಯಿಂದಷ್ಠೆ 15 ಕುರುಗಳ ಸಾವಿನ ಸತ್ಯಾಂಶ ತಿಳಿಯಬಹುದಾಗಿರುತ್ತದೆ. ಒಟ್ಟಾರೆ ಹೇಳುವುದಾದರೆ ಸದರಿಯವರ ಕಿತ್ತಾಟದಿಂದ ಮೂಕ ಪ್ರಾಣಿಗಳು (ಕುರಿಗಳು) ಮಾರಣಹೋಮ ನಡೆದು ಹೊದಂತಾಗಿರುತ್ತದೆ. ಇದೊಂದು ಹೇಯ ಕೃತ್ಯ ಎನ್ನುವಂತಾಗಿರುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
