ಗಾಂಧೀಜಿಯವರ ನಡೆ ನುಡಿಗಳು ತೆರೆದ ಪುಸ್ತಕದಂತೆ : ಡಾ.ನಾಗತಿಹಳ್ಳಿ ಚಂದ್ರಶೇಖರ್

ಬೆಂಗಳೂರು

    ಗಾಂಧೀಜಿಯವರು ಜೀವನ, ಅವರ ನಡೆ ನುಡಿಗಳು ತೆರೆದ ಪುಸ್ತಕವಿದ್ದಂತೆ, ಸಮಾಜದಲ್ಲಿ ಜನರ ಸ್ಥಿತಿ ಗತಿಗಳ ಬಗ್ಗೆ ಜನರಲ್ಲಿ ಬೆರೆತು ತನ್ನನ್ನು ತಾನೇ ಅರ್ಪಣೆ ಮಾಡಿಕೊಂಡ ಮಹಾತ್ಮ ಎಂದು ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಹಾಗೂ ಸಾಹಿತಿ ಡಾ.ನಾಗತಿಹಳ್ಳಿ ಚಂದ್ರಶೇಖರ್ ಅವರು ಬಣ್ಣಿಸಿದರು.

     ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ ಹಿನ್ನೆಲೆ ಭಾರತೀಯ ವಿದ್ಯಾಭವನವು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸಂಯೋಗದೊಂದಿಗೆ ಮಂಗಳವಾರ ಆರಂಭಗೊಂಡ ಮೂರು ದಿನಗಳ `ಮಹಾತ್ಮಗಾಂಧಿ150′ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

      ಇತ್ತೀಚಿನ ಯುವ ಪೀಳಿಗೆ ಓದುವ ಹವ್ಯಾಸ ಕಡಿಮೆ ಮಾಡಿದೆ. ಆದರೆ, ಸಿನೆಮಾ ಮಾಧ್ಯಮ ಮೂಲಕ ಗಾಂಧಿ ಸಾಧನೆ ತಿಳಿಸುವುದು ಸುಲಭವಾಗಿ ರುವುದರಿಂದ ಚಿತ್ರೋತ್ಸವ ಆಯೋಜಿಸಲಾಗಿದೆ ಎಂದರು.

       ಅಧ್ಯಕ್ಷತೆ ವಹಿಸಿ ಮಾತನಾಡಿದ ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವ್ ಸಿಂಗ್, ಮಹಾತ್ಮಗಾಂಧಿ ಅಹಿಂಸೆಯಿಂದ ಗುರಿ ಸಾಧನೆ ಮಾಡಿದ ಮಹಾನ್ ಚೇತನ. ಇವರ ಪ್ರಬಲವಾದ ಅಸ್ತ್ರ ಉಪವಾಸವಾಗಿತ್ತು ಎಂದು ತಿಳಿಸಿದರು.

ಯಾವಾವ ಸಿನಿಮಾ

       ಮಹಾತ್ಮ ಗಾಂಧೀಜಿಯ ಬದುಕು ಹಾಗೂ ಚಿಂತನೆಗಳ ಮೇಲೆ ಬೆಳಕು ಚೆಲ್ಲುವ ಬೇರೆ ಬೇರೆ ಭಾಷೆಗಳ ಏಳು ಚಿತ್ರಗಳು ಭಾರತೀಯ ವಿದ್ಯಾಭವನದಲ್ಲಿ ಪ್ರದರ್ಶಗೊಳ್ಳಲಿವೆ’ ಮೊದಲ ದಿನ ಬೆಳಿಗ್ಗೆ 11ಗಂಟೆಗೆ ಆಸ್ಕರ್ ಪ್ರಶಸ್ತಿ ಪುರಸ್ಕೃತ `ಗಾಂಧಿ’ ಚಿತ್ರದ ಪ್ರದರ್ಶನ ನಡೆಯಿತು.

       ಬುಧವಾರ(ಏ.10) ಬೆಳಿಗ್ಗೆ 10.30ಕ್ಕೆ ಫಿರೋಜ್ ಅಬ್ಬಾಸ್ ಖಾನ್ ನಿರ್ದೇಶನದ `ಗಾಂಧಿ ಮೈ ಫಾದರ್’, ಮಧ್ಯಾಹ್ನ 2ಗಂಟೆಗೆ ಗಿರೀಶ್ ಕಾಸರವಳ್ಳಿ ನಿರ್ದೇಶನದ `ಕೂರ್ಮಾವತಾರ’, ಸಂಜೆ `ಟ್ವೆಂಟಿಯತ್ ಸೆಂಚುರಿ ಪ್ರಾಫೆಟ್’ ಚಿತ್ರಗಳು ಪ್ರದರ್ಶನಗೊಳ್ಳಲಿವೆ’.
ಚಿತ್ರೋತ್ಸವದ ಕೊನೆಯ ದಿನ ಬೆಳಿಗ್ಗೆ ಹಿಂದಿ ಭಾಷೆಯ `ಮೇಕಿಂಗ್ ಆಫ್ ಮಹಾತ್ಮ’, ಮಧ್ಯಾಹ್ನ 2ಗಂಟೆಗೆ `ಗಾಂಧಿ ದೇವಿ’ ಹಾಗೂ ಸಂಜೆ 4.30ಕ್ಕೆ ತಮಿಳು ಭಾಷೆಯ `ವೆಲ್ಕಂ ಬ್ಯಾಕ್ ಗಾಂಧಿ’ ಚಿತ್ರಗಳ ಪ್ರದರ್ಶನ ಇರಲಿದೆ ಉದ್ಘಾಟನೆಯಲ್ಲಿ ಗಾಂಧಿಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಡಾ.ವುಡೇ.ಪಿ. ಕೃಷ್ಣ, ಪತ್ರಕರ್ತ ಶಶಿಧರ, ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್.ಎನ್.ಸುರೇಶ್ ಸೇರಿದಂತೆ ಪ್ರಮುಖರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link