ಹರಪನಹಳ್ಳಿ
ಯುವ ಜನಾಂಗದ ಸ್ಪೂರ್ತಿಯ ಸೆಲೆ ಸ್ವಾಮಿವಿವೇಕಾನಂದರು ಅವರ ಆದರ್ಶಗಳನ್ನು ಮೈಗೂಡಿಸಿಕೊಂಡರೆ ವಿದ್ಯಾರ್ಥಿಗಳು ಸಾಧನೆಯ ಶಿಖರವನ್ನು ಸುಲಭವಾಗಿ ಹತ್ತಬಹುದು ಎಂದು ಎಸ್ಡಿಎಂಸಿ ಅಧ್ಯಕ್ಷ ಡಾ.ಗಣೇಶಭಟ್ ಹೇಳಿದರು.
ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜಿನ ಫ್ರೌಢಶಾಲಾ ವಿಭಾಗದಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಹಾಗೂ ಸ್ವಾಮಿವಿವೇಕಾನಂದರ 156ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವಕರಿಗೆ ವಿವೇಕಾನಂದರು ಪ್ರೇರಣೆಯಾಗಿದ್ದಾರೆ. ಗುರಿ ಮುಟ್ಟಲು ಗುರುಗಳ ಮಾರ್ಗದರ್ಶನ ಅವಶ್ಯವಾಗಿದೆ. ಸನ್ನಡತೆಯಿಂದ ವಿದ್ಯಯನ್ನು ಕಲಿತರೆ ಉನ್ನತ ಸ್ಥಾನ ಪಡೆಯಬಹುದು ಎಂದು ಕಿವಿಮಾತು ಹೇಳಿದರು.
ಪ್ರಾಚಾರ್ಯ ಕುಬೇಂದ್ರಪ್ಪ ಮೇಕಪ್ಪನವರ ಮಾತನಾಡಿ, ಸರ್ಕಾರಿ ಜೂನಿಯರ್ ಕಾಲೇಜ್ 1899 ನೇ ಇಸಿವಿಯಲ್ಲಿ ಸ್ಥಾಪನೆಯಾಗಿದ್ದು ಬ್ರಿಟಿಷರ್ ಆಳ್ವಿಕೆಯಲ್ಲಿ ಬಳ್ಳಾರಿ ಹೊರೆತು ಪಡಿಸಿದರೆ ಫ್ರೌಢಶಾಲೆಯನ್ನು ಹೊಂದಿತ್ತು. ಮಹಾತ್ಮಗಾಂಧೀಜಿ ಅವರು ಈ ಫ್ರೌಢ ಶಾಲೆಯಲ್ಲಿ ತಂಗಿದ್ದು ಇತಿಹಾಸವಾಗಿದೆ. ಅವರ ಏಕಶಿಲೆ ಪ್ರತಿಮೆಯನ್ನು ಅವರು ತಂಗಿದ್ದ ಕೊಠಡಿಯಲ್ಲಿ ಪ್ರತಿಸ್ಠಾಪಿಸಿ ಅವರಿಗೆ ಗೌರವ ಸಲ್ಲಿಸಲಾಗಿದೆ. ಅಲ್ಲದೇ ವಿನೋಭಾಬಾವೆ ಬಾಬು ರಾಜೇಂದ್ರಪ್ರಸಾದ ಅವರಂತ ಗಣ್ಯರು ಈ ಶಾಲೆಯಲ್ಲಿ ಉಳಿದುಕೊಂಡು ಹೋಗಿದ್ದು ಪಾವನವಾಗಿದೆ. ಇಂತಹ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿರುವ ಅನೇಕ ವಿದ್ಯಾರ್ಥಿಗಳು ಉತ್ತಮ ಸ್ಥಾನಗಳಲ್ಲಿ ಹುದ್ದೆಗಳನ್ನು ಅಲಂಕರಿಸಿದ್ದಾರೆ.
ಖಾಸಗಿ ಶಾಲೆಗಳಿಗೆ ಪೈಪೊಟಿ ನೀಡಲು ಈ ಸರ್ಕಾರಿ ಶಾಲೆಗೆ ಉತ್ತಮ ಕಲಿಕಾ ಸಮಾಗ್ರಿಗಳನ್ನು ಇಲ್ಲಿಯ ಶಿಕ್ಷಕರ ನೆರವು ಹಾಗೂ ಹಳೆಯ ವಿದ್ಯಾರ್ಥಿಗಳಿಂದ ದಾನ ಸಹಾಯ ಪಡೆದು ಗುಣ ಮಟ್ಟದ ಶಿಕ್ಷಣ ನೀಡುವಲ್ಲಿ ದಾಪುಗಾಲು ಹಾಕುತ್ತಿದ್ದೇವೆ ಎಂದರು.
ದಾನಿಗಳಾದ ರಾಜು ಇಜಂತಕರ್, ಸಪ್ನ ಮಲ್ಲಿಕಾರ್ಜುನ, ಮದನಶೆಟ್ಟಿ, ಶಿಕ್ಷಕರಾದ ಲತಾ ರಾಥೋಡ, ವಿಜಯಲಕ್ಷ್ಮಿ, ತುಂಬಣ್ಣ, ಎಸ್ಡಿಎಂಸಿ ಸದಸ್ಯರಾದ ಮಹೇಶ ಪೂಜಾರ, ಎಂ.ಜಾಫರ್ಸಾಬ್, ಬಾಗಳಿ ಕೆಂಚನಗೌಡ, ವಿರೇಶ್, ಶಬಾನಭಾನು, ಮೋಹನ ಹಾಗೂ ಇತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ