ತುಮಕೂರು
ಪಾವಗಡಠಾಣೆಯಲ್ಲಿ ದಿನಾಂಕ 24/03/2019 ರಂದು ಟಿ.ವಿ.ಎಸ್.ಎಕ್ಸ್.ಎಲ್ ಸೂಪರ್ ಹೆವಿ ಡ್ಯೂಟಿ ದ್ವಿಚಕ್ರವಾಹನ ಕಳ್ಳತನವಾದ ಬಗ್ಗೆ ಪ್ರಕರಣದಾಖಲಾಗಿರುತ್ತದೆ. ಸದರಿ ಪ್ರಕರಣದ ಪತ್ತೆಕಾರ್ಯಕ್ಕೆ ಮಾನ್ಯ ಪೊಲೀಸ್‍ಅಧೀಕ್ಷಕರವರಾದಶ್ರೀಕೋನ ವಂಶೀಕೃಷ್ಣರವರು, ಹೆಚ್ಚುವರಿ ಪೋಲೀಸ್ ಅಧೀಕ್ಷಕರವರು ಶ್ರೀಮತಿ ಶೋಭಾರಾಣಿರವರು, ಮಧುಗಿರಿ ಮಾನ್ಯಉಪಾಧೀಕ್ಷರವರಾದ ಶ್ರೀಶ್ರೀನಿವಾಸ ಮೂರ್ತಿರವರ ಸೂಕ್ತ ಮಾರ್ಗದರ್ಶನದಲ್ಲಿಪಾವಗಡ ವೃತ್ತ ನಿರೀಕ್ಷಕರವರಾದ ಸಿ.ವೆಂಕಟೇಶ್ ಮತ್ತು ಪಿ.ಎಸ್.ಐ ಮಧುಸೂಧನ್‍ನೇತೃತ್ವದಲ್ಲಿ ಹಾಗೂ ಸಿಬ್ಬಂದಿಯರ ತಂಡ ಆರೋಪಿ ಮತ್ತು ಮಾಲು ಪತ್ತೆಕಾರ್ಯ ಕೈಗೊಂಡಿದ್ದು, ಕಾರ್ಯಾಚರಣೆಯ ಸಮಯದಲ್ಲಿ ದಿನಾಂಕ 24/03/2019 ರಂದು ಪಾವಗಡ ಟೌನ್ ಹಿಂದೂಪುರ ರಸ್ತೆಯ ಕಣವೇನಹಳ್ಳಿ ಕ್ರಾಸ್ ಬಳಿ ಆರೋಪಿ ಬೈಕ್ ನಲ್ಲಿ ತೆರಳುತ್ತಿದ್ದಾಗ ಆರೋಪಿಯನ್ನು ಮಾಲು ಸಮೇತ ಬಂಧಿಸಿ ಆರೋಪಿಯಿಂದ ಪಾವಗಡ ಟೌನ್ ಹಾಗೂ ಇನ್ನಿತರೆ ಕಡೆಗಳಲ್ಲಿ ಕಳ್ಳತನ ಮಾಡಿದ್ದ ಸುಮಾರು 16 ಟಿ.ವಿ.ಎಸ್.ಎಕ್ಸ್.ಎಲ್ ಸೂಪರ್ ಹೆವಿ ಡ್ಯೂಟಿಗಳನ್ನು ವಶಪಡಿಸಿಕೊಂಡಿದ್ದು, ಇವುಗಳಒಟ್ಟು ಮೌಲ್ಯಸುಮಾರು 4.50 ಲಕ್ಷಆಗಿರುತ್ತದೆ.
ಸದರಿ ಕಾರ್ಯಾಚರಣೆಯಲ್ಲಿ ಪಾವಗಡ ವೃತ್ತ ಸಿ.ಪಿ.ಐ ವೆಂಕಟೇಶ್.ಸಿರವರುಹಾಗೂ ಪಿ.ಎಸ್.ಐ ಮಧುಸೂಧನ್ .ಆರ್ ಹಾಗೂಸಿಬ್ಬಂದಿಗಳಾದಸೋಮಶೇಖರ್, ಶ್ರೀರಂಗಪ್ಪ, ರಾಮಕೃಷ್ಣ, ಗೋಪಾಲಕೃಷ್ಣ, ಶರತ್, ಭೋಗನರಸಿಂಹ, ಬಾಬುರಾಯಕಡಾಣಿ, ನರಸಿಂಹಯ್ಯ, ಸಚಿನ್‍ರವರು ಪತ್ತೆ ಮಾಡಲು ಸಹಕರಿಸಿರುತ್ತಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
