ಬೆಂಗಳೂರು
ಮಣಿಪುರದಿಂದ ಮಾದಕ ವಸ್ತು ಹೆರಾಯಿನ್ ತಂದು ಮಾರಾಟ ಮಾಡುತ್ತಿದ್ದ ಮಣಿಪುರ ಹಾಗೂ ಅಸ್ಸಾಂ ಮೂಲದ ನಾಲ್ವರನ್ನು ಶಿವಾಜಿನಗರ ಪೊಲೀಸರು ಬಂಧಿಸಿಕದ್ದಾರೆ.
ಹೆರಾಯಿನ್ ಮಾರಾಟ ಮಾಡುತ್ತಿದ್ದ ಅಸ್ಸಾಂನ ಸಹೀಮ್ ಉದ್ದೀನ್ ಮಜುಮ್ ದಾರ್ ಅಲಿಯಾಸ್ ಲಂಬು (28) ಮಣಿಪುರದ ಅಬ್ದುಲ್ ಅಲಿಮ್ (42), ತಂಗ್ ಮಿನ್ ಲಾಲ್ ಅಲಿಯಾಸ್ ಜೇಮ್ಸ್ (26) ಹಾಗೂ ಮಹ್ಮದ್ ಫಾರೂಕ್ ಖಾನ್ (28)ನನ್ನು ಬಂಧಿಸಿ 2 ಲಕ್ಷದ 20 ಸಾವಿರ ಮೌಲ್ಯದ, 22 ಗ್ರಾಂ ತೂಕದ ಹೆರಾಯಿನ್ ಅನ್ನು ವಶ ಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ
ಆರೋಪಿಗಳು ಶಿವಾಜಿನಗರದ ಚಾರ್‌ಮಿನಾರ್ ರಸ್ತೆ 6ನೇ ಸ್ಟ್ರೀಟ್‌ನ ಮನೆಯೊಂದರ ಬಳಿ ಮಾದಕ ವಸ್ತು ಹೆರಾಯಿನ್ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಆಧಾರಿಸಿ ಕಾರ್ಯಾಚರಣೆ ನಡೆಸಿದ ಶಿವಾಜಿನಗರ ಪೊಲೀಸ್ ಇನ್ಸ್‌ಪೆಕ್ಟರ್ ಸಿದ್ದರಾಜು ಮತ್ತವರ ಸಿಬ್ಬಂದಿ ಬಂಧಿಸಿದ್ದಾರೆ ಎಂದು ಡಿಸಿಪಿ ಡಾ. ಶರಣಪ್ಪ ತಿಳಿಸಿದ್ದಾರೆ.
ಆರೋಪಿಗಳು ಮಣಿಪುರಂ ಮೂಲದ ಎಲೆಕ್ಟ್ರಾನಿಕ್ ಸಿಟಿ ವಾಸಿ ಅಲಿ ಎಂಬಾತನಿಂದ ಹೆರೆಯಿನ್ ತರಿಸಿಕೊಂಡು ಟ್ಯೂಬ್ ಮಾದರಿಯ ಚಿಕ್ಕ ಪ್ಲಾಸ್ಟಿಕ್ ಡಬ್ಬದಲ್ಲಿ ತುಂಬಿ ಗಿರಾಕಿಗಳಿಗೆ ಮಾರಾಟ ಮಾಡುತ್ತಿರುವುದು ತನಿಖೆಯಲ್ಲಿ ಕಂಡು ಬಂದಿದೆ. ಕೂಲಿ ಅರಸಿ ಬಂದಿದ್ದ ಆರೋಪಿಗಳು ಐಷಾರಾಮಿ ಜೀವನ ನಡೆಸಲು ಈ ಕೃತ್ಯದಲ್ಲಿ ಭಾಗಿಯಾಗಿದ್ದರು. ಆರೋಪಿಗಳು ಹೆರಾಯಿನ್ ಪೂರೈಕೆ ಮಾಡುತ್ತಿದ್ದ ಅಲಿಗಾಗಿ ಶೋಧ ನಡೆಸಲಾಗಿದೆ ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








