ಹಾನಗಲ್ : ಕಾಡು ಪ್ರಾಣಿಗಳನ್ನು ಭೇಟೆಯಾಡಿದ ಇಬ್ಬರ ಬಂಧನ..!

ಹಾನಗಲ್:

     ಕಾಡು ಪ್ರಾಣಿಗಳನ್ನು ಬೇಟೆಯಾಡಿ ಅದರ ಮಾಂಸವನ್ನು ಮಾರಾಟ ಮಾಡುತ್ತಿದ್ದ 10 ಮಂದಿ ಬೇಟೆಗಾರರಲ್ಲಿ ಇಬ್ಬರನ್ನು ಬಂದಿಸಿ ಅವರಿಂದ ಐದು ಬೈಕ್‍ಗಳ ಜೊತೆಗೆ 40 ಕೆಜಿ ಜಿಂಕೆ ಮತ್ತು 20 ಕೆಜಿ ಕಾಡುಹಂದಿ ಮಾಂಸ, 34 ಕೆಜಿ ಜೀವಂತ ಕಾಡುಹಂದಿಯನ್ನು ಹಾನಗಲ್ಲ ವಲಯ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ವಶಪಡಿಸಿಕೊಂಡು ಇನ್ನುಳಿದ ಪರಾರಿಯಾದ ಆರೋಪಿಗಳಿಗೆ ಶೋದ ಕಾರ್ಯ ನಡೆಸಿರುವ ಘಟನೆ ನಡೆದಿದೆ.

    ತಾಲೂಕಿನ ಮೂಡೂರ ವಡಗೇರಿ ಅರಣ್ಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿಗಳು ಭಾನುವಾರ ರಾತ್ರಿ 2-3 ಘಂಟೆಯ ಸುಮಾರಿಗೆ ಒಂದು ಜಿಂಕೆ ಹಾಗೂ ಎರಡು ಕಾಡುಹಂದಿಗಳನ್ನು ಬೇಟೆಯಾಡಿ ಕೊಂಡಿದ್ದಾರೆ. ಅವುಗಳನ್ನು ಒಂದು ಮರದಡಿ ಬಚ್ಚಿಟ್ಟು, ಮನೆಗೆ ಮರಳಿದ್ದರು. ಮತ್ತೆ ಸೋಮವಾರ ಬೆಳಗಿನ ಜಾವ 4 ಘಂಟೆಗೆ ಅರಣ್ಯ ಪ್ರದೇಶಕ್ಕೆ ತೆರಳಿ ಬಚ್ಚಿಟ್ಟಿದ್ದ ಮಾಂಸವನ್ನು ಎಲ್ಲರೂ ಹಂಚಿಕೊಳ್ಳುತ್ತಿದ್ದ ವೇಳೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು-ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ. ಇಬ್ಬರು ಆರೋಪಿಗಳು ಸಿಕ್ಕಿದ್ದು ಇನ್ನುಳಿದ 8 ಜನರು ಪರಾರಿಯಾಗಿದ್ದಾರೆ. ಈ ತಂಡ ಹಲವು ವರ್ಷಗಳಿಂದ ವನ್ಯ ಜೀವಿಗಳನ್ನು ಬೇಟೆಯಾಡಿ, ಅದರ ಮಾಂಸವನ್ನು ಮತ್ತು ಚರ್ಮವನ್ನು ಮಾರಾಟ ಮಾಡುವ ಧಂದೆಯಲ್ಲಿ ತೊಡಗಿರುವ ಕುರಿತು ಮಾಹಿತಿ ದೊರೆತಿತ್ತು. ಆರೋಪಿಗಳನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

    ಮೂಡೂರ ಗ್ರಾಮದ ರಾಮು ಅಂಟಗಣಿ (30)ಅಜಗುಂಡಿಕೊಪ್ಪದ ಪ್ರಭು ಚಿಕ್ಕಾಂಶಿ (21) ಎಂಬ ಆರೋಪಿಗಳು ಸಿಕ್ಕಿಹಾಕಿಕೊಂಡಿದ್ದಾರೆ ಇನ್ನುಳಿದ ಆರೋಪಿಗಳಲ್ಲಿ ಶಿವಮೂರ್ತಿ ಕುರಿಯವರ, ಮಂಜು ಕುರಿಯವರ, ರಾಮಪ್ಪ ರಂಗನವರ, ಮಲ್ಲೇಶಪ್ಪ ಹುಳ್ಳಿ, ಸುರೇಶ ಹುಳ್ಳಿ, ಉಮೇಶ ಬಾಲಣ್ಣನವರ, ಶಿವಪ್ಪ ಕೋಣನಕೊಪ್ಪ, ಆನಂದ ಚಿಕ್ಕಾಂಶಿ ಎಂಬ ಆರೋಪಿಗಳು ಬೈಕ್‍ಗಳನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ ಇವರೆಲ್ಲರು ಅಜಗುಂಡಿಕೊಪ್ಪದ ಗ್ರಾಮದವರಾಗಿದ್ದು, ಆರೋಪಿಗಳ ಪತ್ತೆಗೆ ಬಲೆಬಿಸಲಾಗಿದೆ ಎಂದು ತಿಳಿದುಬಂದಿದೆ.

    ಕಾರ್ಯಾಚರಣೆಯಲ್ಲಿ ಹಾವೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಇ.ಕ್ರಾಂತಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಬಿ.ಬಸವರಾಜಪ್ಪ ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಪರಮೇಶ್ವರಪ್ಪ ಪೇಲನವರ, ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್.ಹೊಸೂರ, ಅರಣ್ಯ ರಕ್ಷಕರಾದ ಎಚ್.ಕೆ.ಪೂಜಾರ, ಎಸ್.ಎಂ.ತಳವಾರ, ವಿನಾಯಕ ಶೆಟ್ಟರ, ಸುರೇಶ ಗೂರ್ಖಾ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap