ಬೆಂಗಳೂರು
ಜೈಲಿನಿಂದ ಜಾಮೀನಿನ ಮೇಲೆ 5 ದಿನಗಳ ಹಿಂದಷ್ಟೇ ಬಿಡುಗಡೆಯಾಗಿ ತಂಗಿಯ ಮನೆಗೆ ಬಂದಿದ್ದ ಆರೋಪಿ ಭರತ್‍ನನ್ನು ಸಂಚು ರೂಪಿಸಿ ಚಾಕುವಿನಿಂದ ಇರಿದು ಕೊಲೆಗೈದು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಹನುಮಂತನಗರ ಪೊಲೀಸರು ಬಂಧಿಸಿದ್ದಾರೆ.
ಆನೇಕಲ್‍ನ ಭರತ್ (20) ಶುಕ್ರವಾರ ರಾತ್ರಿ 8.30ರ ವೇಳೆ ಕಾಳಿದಾಸ ಸರ್ಕಲ್ ಬಳಿಯ ತಂಗಿಯ ಮನೆಗೆ ನಡೆದು ಹೋಗುವಾಗ ಮನೆಯ ಬಳಿಯೇ ಚಾಕುವಿನಿಂದ ಇರಿದು ಇಬ್ಬರು ದುಷ್ಕರ್ಮಿಗಳು ಇರಿದು ಕೊಲೆಗೈದು ಪರಾರಿಯಾಗಿದ್ದಾರೆ ಈ ಸಂಬಂಧ ರಚಿಸಲಾಗಿರುವ ಹನುಮಂತನಗರ ಪೊಲೀಸರ ಎರಡು ವಿಶೇಷ ತಂಡಗಳು ದುಷ್ಕರ್ಮಿಗಳ ಸುಳಿವು ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಲೆಯಾಗಿದ್ದ ಭರತ್ ಮನೆಗಳವು ಇನ್ನಿತರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದನು ಅಪರಾಧ ಪ್ರಕರಣವೊಂದರ ಸಂಬಂಧ ಆನೇಕಲ್ ಭರತ್‍ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು ಜೈಲಿನಿಂದ ಯುಗಾದಿಯಂದು ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದನು.
ತಂಗಿಯ ಮನೆಗೆ ಹೋಗುವುದನ್ನು ತಿಳಿದ ದುಷ್ಕರ್ಮಿಗಳು ಸಂಚು ರೂಪಿಸಿ ಕೊಲೆ ಮಾಡಿ ಪರಾರಿಯಾಗಿದ್ದು ಹಳೆಯ ದ್ವೇಷದ ಹಿನ್ನಲೆಯಲ್ಲಿ ಈ ಕೊಲೆ ನಡೆದಿದೆ ಎಂದು ಡಿಸಿಪಿ ಅಣ್ಣಾಮಲೈ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








