ಕೊಟ್ಟೂರು
ತಾಲೂಕಿನ ಉಜ್ಜಯಿನಿ ಗ್ರಾಮದಲ್ಲಿ ನಕಲಿ ಚಿನ್ನ ಮಾರಾಟ ಮಾಡುವ ಸಂದರ್ಭದಲ್ಲಿ ಪೊಲೀಸರಿಗೆ ಇಬ್ಬರು ಸಿಕ್ಕಿ ಬಿದ್ದಿದ್ದು, ಮತ್ತಿಬ್ಬರು ಪರಾರಿಯಾಗಿರುವ ಘಟನೆ ಗುರುವಾರ ನಡೆದಿದೆ.
ನಕಲಿ ಚಿನ್ನ ಮಾರಾಟದ ಚಿತ್ರದುರ್ಗ ಜಿಲ್ಲೆಯ ಕೂನಬೇವು ಗ್ರಾಮದ ವಿ.ಆನಂದ ಮತ್ತು ಆಗಸನಹಳ್ಳಿ ಗ್ರಾಮದ ತಳವಾರ ಹನುಮಂತ ಬಂಧಿತರು. ಹರಿಯಮ್ಮನಹಳ್ಳಿ ಗ್ರಾಮದ ಸತೀಶ ಮತ್ತು ಡಿ.ಪ್ರಭಾಕರ ಪರಾರಿಯಾಗಿದ್ದಾರೆ. ಇಬ್ಬರನ್ನು ಬಂಧಿಸಿರುವ ಕೊಟ್ಟೂರು ಪೊಲೀಸರು ಬಂಧಿತರ ವಿರುದ್ಧ ಕಲಂ 420, 511, 363 ರೆ/ವಿ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣ :
ಬಳ್ಳಾರಿ ಜಿಲ್ಲೆಯಲ್ಲಿ ನಕಲಿ ಚಿನ್ನ ಮಾರಾಟದ ಜಾಲ ಇದೆ ಎಂಬ ಮಾಹಿತಿ ಕನ್ನಡದ ಖಾಸಗಿ ಚಾನೆಲ್‍ವೊಂದಕ್ಕೆ ಬಾತ್ಮೀದಾರ ರೊಬ್ಬರಿಂದ ಮಾಹಿತಿ ಸಿಕ್ಕಿತ್ತು. ಆರೋಪಿಗಳ ಮೊಬೈಲ್‍ಗೆ 15ದಿನಗಳ ಹಿಂದೆ ಬಾತ್ಮಿದಾರರನ್ನು ಸಂಪರ್ಕಿಸಿ, ಮನೆ ಪಾಯ ತೆಗೆಯುವಾಗ ನಿಧಿ ಸಿಕ್ಕಿದ್ದು, 20ಲಕ್ಷ ರೂ.ಗಳಿಗೆ ಒಂದು ಕೆಜಿಯಂತೆ ಮಾರಾಟ ಮಾಡುವುದಾಗಿ ಹೇಳಿದ್ದರು. ಖರೀದಿ ಮಾಡುವ ಭರವಸೆ ನೀಡಿ 4ಕೆಜಿ ಬಂಗಾರ ಬೇಕು ಎಂದು ತಿಳಿಸಿದ್ದರು. ನಂತರದಲ್ಲಿ ಆರೋಪಿಗಳು ದಿ.6ರಂದು ಕರೆ ಮಾಡಿ ಕೊಟ್ಟೂರು ತಾಲೂಕಿನ ಗಾಣಗಟ್ಟೆ ಮಾಯಮ್ಮ ದೇವಸ್ಥಾನದ ಹತ್ತಿರ ಬರಲು ತಿಳಿಸಿದ್ದಾರೆ. ಮತ್ತೆ ಸಂಜೆ 5ಕ್ಕೆ ಕರೆ ಮಾಡಿ ಉಜ್ಜಯಿನಿಯ ಶ್ರೀ ಮರುಳಸಿದ್ದೇಶ್ವರ ಕಲ್ಯಾಣ ಮಂಟಪದ ಹತ್ತಿರ ಬರಲು ತಿಳಿಸಿದ್ದಾರೆ.
ನಕಲಿ ಮಾರಾಟ ಜಾಲ ಕಾರ್ಯಾಚರಣೆ ಪೊಲೀಸರು ಮಾಹಿತಿ ಪಡೆದು. ಅದರಂತೆ ಪೊಲೀಸರ ಜೊತೆಯಲ್ಲಿ ಮೂವರು, ಮಫ್ತಿಯಲ್ಲಿದ್ದ 3 ಪೊಲೀಸರು ಕಲ್ಯಾಣ ಮಂಟಪದ ಹತ್ತಿರ ಹೋದಾಗ ನಕಲಿ ಚಿನ್ನ ತೋರಿಸಿ ನಂಬಿಸಿದ್ದಾರೆ. ಆಗ ಚಿನ್ನ ನಕಲಿ ಎಂದು ವಾದ ಮಾಡುತ್ತಿದ್ದಂತೆ ಆರೋಪಿಗಳು ಓಡಿ ಹೋಗಿದ್ದಾರೆ. ಅವರನ್ನು ಹಿಂಬಾಲಿಸಿದಾಗ ಪೊಲೀಸರಿಗೆ ಇಬ್ಬರು ಸಿಕ್ಕಿದ್ದಾರೆ. ಇನ್ನಿಬ್ಬರು ಬೈಕ್‍ನಲ್ಲಿ ಪರಾರಿಯಾಗಿದ್ದಾರೆ.
ಸಿಪಿಐ ರವೀಂದ್ರ ಕುರುಬಗಟ್ಟೆ, ಪಿಎಸ್‍ಐ ತಿಮ್ಮಣ್ಣ ಎಸ್.ಚಾಮನೂರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಮಹಜರು ನಡೆಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಬಿ.ಎಸ್. ಮಂಜುನಾಥ, ಬಸವರಾಜ ಮತ್ತು ತಿಮ್ಮಪ್ಪ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ