ಬೆಂಕಿ ದುರಂತ : ನಾಲ್ಕು ಹುಲ್ಲಿನ ಬಣವೆ, ಎರಡು ಎತ್ತಿನ ಗಾಡಿಗಳು ಭಸ್ಮ

ಚಳ್ಳಕೆರೆ

       ತಾಲ್ಲೂಕಿನ ತಳಕು ಹೋಬಳಿಯ ಚಿಕ್ಕಹಳ್ಳಿ ಗ್ರಾಮದಲ್ಲಿ ಗುರುವಾರ ರಾತ್ರಿ ಸಂಭವಿಸಿದ ಆಕಸ್ಮಿಕ ಬೆಂಕಿ ದುರಂತದಲ್ಲಿ ರೈತರು ಜಾನುವಾರುಗಳಿಗಾಗಿ ದಾಸ್ತಾನು ಮಾಡಿದ್ದ ನಾಲ್ಕು ಹುಲ್ಲಿನ ಬಣವೆ ಹಾಗೂ ಎತ್ತಿನ ಗಾಡಿಗಳು ಬೆಂಕಿಯಲ್ಲಿ ಸುಟ್ಟು ಹೋಗಿದ್ದು, ಸುಮಾರು 2 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ ಎನ್ನಲಾಗಿದೆ.

        ಚಿಕ್ಕಹಳ್ಳಿ ಗ್ರಾಮದ ಓಂಕಾರಪ್ಪ, ನಾಗರಾಜ ಮತ್ತು ದೊಡ್ಡ ತಿಪ್ಪಯ್ಯ ಎಂಬುವವರ ನಾಲ್ಕು ಹುಲ್ಲಿನ ಬಣವೆಗಳು ಬೆಂಕಿಗೆ ಆಹುತಿಯಾಗಿವೆ. ಇದೇ ಸಂದರ್ಭದಲ್ಲಿ ಬಣವೆಯ ಪಕ್ಕದಲ್ಲೇ ಎರಡು ಟೈಯರ್ ಗಾಡಿಗಳಿದ್ದು ಅವು ಬೆಂಕಿಯಲ್ಲಿ ಸುಟ್ಟಿವೆ. ಬೆಂಕಿ ಅವಘಡಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಸುದ್ದಿ ತಿಳಿದ ಕೂಡಲೇ ತಳಕು ಪೊಲೀಸರು ಅಗ್ನಿಶಾಮಕ ಪಡೆಗೆ ಮಾಹಿತಿ ನೀಡಿದ್ದು, ಕೂಡಲೇ ಅಗ್ನಿಶಾಮಕ ಪಡೆಯವರು ಸ್ಥಳಕ್ಕೆ ದಾವಿಸಿ ಬೆಂಕಿಯನ್ನು ನಂದಿಸಿದ್ಧಾರೆ. ಈ ಬಗ್ಗೆ ಕಂದಾಯಾಧಿಕಾರಿಗಳು ನಷ್ಟದ ಅಂದಾಜನ್ನು ನಡೆಸುತ್ತಿದ್ದಾರೆ.

        ಜಿಲ್ಲಾ ಪಂಚಾಯಿತಿ ಸದಸ್ಯರ ಕಳವಳ :- ತಳಕು ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಓಬಳೇಶ್ ಚಿಕ್ಕಹಳ್ಳಿ ಗ್ರಾಮದಲ್ಲಿ ಅಗ್ನಿ ಆಕಸ್ಮಿಕಕ್ಕೆ ರೈತರ ಹುಲ್ಲಿನ ಬಣವೆಗಳು ಹಾಗೂ ಎರಡು ಗಾಡಿಗಳು ಸುಟ್ಟು ಲಕ್ಷಾಂತರ ರೂಪಾಯಿ ನಷ್ಟವಾಗಿದ್ದು, ಹೆಚ್ಚಿನ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿವುದಾಗಿ ಅವರು ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link