ಮಂಗಳೂರು : ಗೋಡೆ ಕುಸಿದು ; ಇಬ್ಬರು ಮಕ್ಕಳ ಸಾವು

ಮಂಗಳೂರು

        ಪಕ್ಕದ ಮನೆಯ ಆವರಣ ಗೋಡೆ ಕುಸಿದು ಮೈಮೇಲೆ ಬಿದ್ದು ಇಬ್ಬರು ಮಕ್ಕಳು ಮೃತಪಟ್ಟ ಕರುಣಾಜನಕ ಘಟನೆ ಮಂಗಳೂರಿನ ಪಡೀಲ್ ಸಮೀಪದ ಶಿವನಗರದಲ್ಲಿ ಭಾನುವಾರ ರಾತ್ರಿ ನಡೆದಿದೆ.

     ರಾಮಚಂದ್ರ ಹಾಗೂ ರಜನಿ ದಂಪತಿಗಳ ಮಕ್ಕಳಾದ ವೇದಾಂತ್ ( 7 )ಮತ್ತು ವರ್ಷಿಣಿ ( 8 ) ಮೃತಪಟ್ಟ ಮಕ್ಕಳು.

      ಇಂದು ಸಂಜೆಯಿಂದ ನಗರದಲ್ಲಿ ಭಾರೀ ಮಳೆ ಸುರಿಯುತ್ತಿತ್ತು. . ಭಾರೀ ಮಳೆಗೆ 20 ಅಡಿ ಎತ್ತರದ ಈ ಆವರಣ ಗೋಡೆ ಕುಸಿದಿದೆ. ಈ ವೇಳೆ ಮಕ್ಕಳು ಮನೆಯೊಳಗಡೆ ಓದುತ್ತಿದ್ದರು.

     ದುರ್ಘಟನೆ ನಡೆಯುವಾಗ ತಂದೆ ತಾಯಿ ಮನೆಯ ಹೊರಗಿದ್ದರು ಎನ್ನಲಾಗಿದೆ. ದುರ್ಘಟನೆಯ ಬಳಿಕ ಗಂಭೀರ ಗಾಯಗೊಂಡ ಮಕ್ಕಳನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮಕ್ಕಳು ಮೃತಪಟ್ಟರು. ಕಂಕನಾಡಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Recent Articles

spot_img

Related Stories

Share via
Copy link