ದಾವಣಗೆರೆ:
ಇಲ್ಲಿನ ಶ್ರೀಮದ್ ಅಭಿನವ ರೇಣುಕಾ ಮಂದಿರದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ 2 ಕೋಟಿ ರೂ. ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.ನಗರದ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಭಾನುವಾರದಿಂದ ಆರಂಭವಾಗಿರುವ ಬಾಳೆಹೊನ್ನೂರು ಶ್ರೀಮದ್ರಂಭಾಪುರಿ ಜಗದ್ಗುರು ಡಾ. ವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭsÀಗತ್ಪಾದರ 28ನೇ ವರ್ಷದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ತಂತಿ ಮೇಲೆ ನಡೆಯುತ್ತಿದ್ದೇನೆ:
ಸಮಾಜದಿಂದ ಸಮುದಾಯ ಭವನ ನಿರ್ಮಾಣಕ್ಕೆ 3 ಕೋಟಿ ರೂ. ಅನುದಾನ ನೀಡುವಂತೆ ಮನವಿ ಮಾಡಲಾಗಿದೆ. ಆದರೆ, ಈಗ ನಾನು ತಂತಿಯ ಮೇಲೆ ನಡೆಯುತ್ತಿದ್ದೇನೆ. ಯಾವುದೇ ತೀರ್ಮಾನ ಮಾಡಬೇಕಾದರೂ ಹತ್ತು ಬಾರಿ ಯೋಚಿಸಬೇಕಾಗಿದೆ. ನಮ್ಮ ತೀರ್ಮಾನ ಇತರೆ ಸಮಾಜದ ಮೇಲೆ ಪರಿಣಾಮ ಬೀರದಂತೆ ಕೈಗೊಳ್ಳಬೇಕಾಗಿದೆ. ಆದ್ದರಿಂದ ರೇಣುಕಾ ಮಂದಿರದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ 2 ಕೋಟಿ ರೂ. ಅನುದಾನವನ್ನು ಸರ್ಕಾರದಿಂದ ಒದಗಿಸಲಾಗುವುದು. ಇನ್ನುಳಿದ ಒಂದು ಕೋಟಿ ರೂ. ಹಣವನ್ನು ಸಮಾಜದಿಂದಲೇ ದೇಣಿಗೆ ರೂಪದಲ್ಲಿ ಹಾಕಿಕೊಳ್ಳಿ ಎಂದು ಸಲಹೆ ನೀಡಿದರು.
ಬಜೆಟ್‍ನಲ್ಲಿ 300 ಕೋಟಿ:
ಇಂದು ಏಕೆ ಯೋಚನೆ ಮಾಡಬೇಕಾದರೆ, ರಾಜ್ಯ ಅತಿವೃಷ್ಟಿ, ಬರಗಾಲದಿಂದ ಕಂಗಾಲಾಗಿದೆ. ಸಂಕಷ್ಟಕ್ಕೆ ಈಡಾದ ಕುಟುಂಬಗಳಿಗೆ ಒಂದು ಲಕ್ಷಕ್ಕೂ ಹೆಚ್ಚು ಮನೆ ನಿರ್ಮಿಸಿ ಕೊಡಬೇಕಿದೆ. ಇದಕ್ಕಾಗಿ 30ರಿಂದ 40 ಸಾವಿರ ಕೋಟಿ ರೂ. ಹಣ ಬೇಕಾಗುತ್ತದೆ. ಈಗಾಗಲೇ 3 ಸಾವಿರ ಕೋಟಿ ರಾಜ್ಯದಿಂದ ಬಿಡುಗಡೆ ಮಾಡಿದ್ದೇವೆ. ಎಲ್ಲಾ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಮುಂದಿನ ಬಜೆಟ್‍ನಲ್ಲಿ 250ರಿಂದ 300 ಕೋಟಿ ರೂ. ಮೀಸಲಿಡುತ್ತೇನೆ ಎಂದು ಘೋಷಿಸಿದರು.
ಗುಟ್ಕಾ ನಿಷೇಧಕ್ಕೆ ಕ್ರಮ:
ಅಡಕೆ ಬೆಳೆಗಾರರ ಸಂಕಷ್ಟ ಮತ್ತು ಗುಟ್ಕಾ ಸೇವಿಸುವವರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ಹಂತ, ಹಂತವಾಗಿ ಗುಟ್ಕಾ ನಿಷೇಧಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಮೇರಿಕದ ವಾರ್ಷಿಂಗ್‍ಟನ್‍ನಲ್ಲಿ ನಡೆದ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಅಧ್ಯಕ್ಷ ಟ್ರಂಪ್ ಭಾಗವಹಿಸಿದ್ದರು. ಆ ಕಾರ್ಯಕ್ರಮದಲ್ಲಿ ಮೋದಿ ಮಾನವ ಜಗತ್ತಿಗೆ ಜಯವಾಗಲಿ ಎಂದು ಆಶಿಸಿದ್ದರು. ರೇಣುಕಾಚಾರ್ಯರು ಸಹ ಮಾನವ ಜನಾಂಗಕ್ಕೆ ಜಯವಲಿ ಎಂದಿದ್ದಾರೆ. ಈಗ ದೇಶದಲ್ಲಿ ಒಳ್ಳೆಯ ಕೆಲಸ ಮಾಡುವ ವಾತಾವರಣ ಸೃಷ್ಟಿಯಾಗುತ್ತಿದೆ. ಇಂತಹ ಮಹಾನ್ ವ್ಯಕ್ತಿ ನೇತೃತ್ವದಲ್ಲಿ ದೇಶ ಮುನ್ನಡೆಯುತ್ತಿದೆ ಎಂದರು.
ಮಕ್ಕಳಿಗೆ ಸರಿಯಾದ ತರಬೇತಿ ನೀಡಿದರೆ ಎಷ್ಟು ಎತ್ತರಾಕ್ಕಾದರೂ ಬೆಳೆಯುತ್ತಾರೆ. ಪೋಷಕರು ಮಕ್ಕಳ ಪ್ರತಿಭೆಗೆ ನೀರೆರೆಯಬೇಕು. ಅಲ್ಲದೇ, ಅಂತಹ ಧಾರ್ಮಿಕ ಕಾರ್ಯಕ್ರಮಗಳಿಗೆ ಮಕ್ಕಳನ್ನು ಕರೆದುಕೊಂಡು ಬರಬೇಕೆಂದು ಸಲಹೆ ನೀಡಿದರು.
ರಾಜ್ಯ ರೈಲ್ವೆ ಖಾತೆ ಸಚಿವ ಸುರೇಶ್ ಅಂಗಡಿ ಮಾತನಾಡಿ, ರೈಲ್ವೆ ಇಲಾಖೆಯಲ್ಲಿ ಸಾಕಷ್ಟು ಅವಕಾಶಗಳಿದ್ದು, ಯುವಕರು ಇದರ ಸದುಪಯೋಗ ಪಡೆದುಕೊಂಡು ಉದ್ಯಮಶೀಲರಾಗಬೇಕು. ರೈಲ್ವೆ ಇಲಾಖೆಯಿಂದ 50 ಲಕ್ಷ ಕೋಟಿ ಬಂಡವಾಳ ತೊಡಗಿಸಲು ಕೇಂದ್ರ ಸರ್ಕಾರ ಸಿದ್ಧವಿದೆ. ಅದನ್ನು ಈ ಭಾಗದ ಜನತೆ ಸದುಪಯೋಗ ಪಡೆಸಿಕೊಳ್ಳಬೇಕೆಂದು ಹೇಳಿದರು.
ಬಾಳೆಹೊನ್ನೂರು ಶ್ರೀರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಮಾತನಾಡಿ, ಭಾರತೀಯ ಸಂಸ್ಕøತಿಯಲ್ಲಿ ಶರನ್ನವರಾತ್ರಿ ದಸರಾ ನಾಡಹಬ್ಬಕ್ಕೆ ವಿಶೇಷ ಮಹತ್ವವಿದೆ. ನವರಾತ್ರಿಯು ಶಕ್ತಿಯನ್ನು ಆರಾಧಿಸುವ ಬಹು ದೊಡ್ಡ ಹಬ್ಬವಾಗಿದೆ. ಜೀವನ ಮೌಲ್ಯಗಳ ಪುನರುತ್ಥಾನದಿಂದ ಶ್ರೇಯಸ್ಸು ಕಾಣಲು ಸಾಧ್ಯ. ಮೂಲ ನಂಬಿಕೆಗಳನ್ನು ಜಾಗೃತಗೊಳಿಸಿ ಧರ್ಮ ಸಂಸ್ಕøತಿ ಮತ್ತು ಆದರ್ಶ ಪರಂಪರೆ ಬೆಳೆಸುವುದೇ ದಸರಾ ಮಹೋತ್ಸವದ ಮೂಲ ಗುರಿಯಾಗಿದೆ ಎಂದು ಹೇಳಿದರು.
ಮನಸ್ಸು ಬುದ್ಧಿ ಮತ್ತು ಸದ್ವಿಚಾರಗಳು ಹುಲುಸಾಗಿ ಬೆಳೆದಾಗ ಶ್ರೇಯಸ್ಸು ಕಟ್ಟಿಟ್ಟ ಬುತ್ತಿಯಾಗಲಿದೆ. ದುಷ್ಟರ ಸಂಹಾರ ಶಿಷ್ಟರ ಸಂರಕ್ಷಣೆಗಾಗಿ ಆದಿಶಕ್ತಿಯ ಆವಿರ್ಭಾವವಾಗಿದೆ. ಸಮಾಜದಲ್ಲಿ ಸಾತ್ವಿಕ ಶಕ್ತಿಗಳು ಬೆಳೆಯಬೇಕೆಂಬುದು ನವರಾತ್ರಿಯ ಮೂಲ ಉದ್ದೇಶವಾಗಿದೆ. ದುಷ್ಟರಾದ ಮಧುಕೈಟವ, ರಕ್ತಬೀಜಾಸುರ, ಚಂಡಮುಂಡ, ಮಹಿಷಾಸುರ, ಶುಂಭ-ನಿಶುಂಭ ಮೊದಲಾದ ರಾಕ್ಷಸರನ್ನು ಸಂಹಾರ ಮಾಡಿ ದೇವತೆಗಳಿಗೆ ನೆಮ್ಮದಿ ತಂದು ಕೊಟ್ಟ ಪರ್ವಕಾಲವೇ ನವ ರಾತ್ರಿಯಾಗಿದೆ ಎಂದು ವಿಶ್ಲೇಷಿಸಿದರು.
ಪೂರ್ವಕಾಲದಲ್ಲಿ ರಾಜ ಮಹಾರಾಜರು ಪ್ರಜೆಗಳ ನಾಡಿನ ಹಿತಕ್ಕಾಗಿ ಶಕ್ತಿಯನ್ನು ಆರಾಧಿಸಿಕೊಂಡುಬಂದ ಸಂಪ್ರದಾಯವಿದೆ.
ಕರ್ನಾಟಕದಲ್ಲಿ ವಿಜಯನಗರ ಅರಸರು ಹಾಗೂ ಮೈಸೂರಿನ ರಾಜರು ನಾಡಹಬ್ಬವನ್ನು ಅತ್ಯಂತ ವೈಭವದಿಂದ ಆಚರಿಸುತ್ತಿದ್ದರೆಂಬುದನ್ನು ಇತಿಹಾಸದಿಂದ ಅರಿಯುತ್ತೇವೆ. ರಂಭಾಪುರಿ ಜಗದ್ಗುರು ಪೀಠದ ಪೂರ್ವದ ಮಹಾಚಾರ್ಯರು ಭಕ್ತ ಸಂಕುಲದ ಕಲ್ಯಾಣಕ್ಕಾಗಿ ಮೂಲಪೀಠದಲ್ಲಿ ಆಚರಿಸಿಕೊಂಡು ಬರುತ್ತಿದ್ದ ಇತಿಹಾಸವಿದೆ ಎಂದು ಸ್ಮರಿಸಿದರು.
ಕೊಲ್ಲಿಪಾಕಿ ಕ್ಷೇತ್ರ ದರ್ಶನ ಕೃತಿ ಬಿಡುಗಡೆ ಮಾಡಿದ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಹಾಗೂ ಶಾಸಕ ಡಾ|| ಶಾಮನೂರು ಶಿವಶಂಕರಪ್ಪ ಮಾತನಾಡಿ, ವೀರಶೈವ ಧರ್ಮದಲ್ಲಿ ಶ್ರೀಜಗದ್ಗುರು ರೇಣುಕಾಚಾರ್ಯರ ಕ್ರಾಂತಿ ಅದ್ಭುತವಾಗಿರುವುದನ್ನು ಕಾಣುತ್ತೇವೆ. ರಂಭಾಪುರಿ ಪೀಠವು ವೀರಶೈವ ಧರ್ಮದ ಆದರ್ಶ ಮೌಲ್ಯಗಳನ್ನು ಬೋಧಿಸಿ ಸರ್ವರನ್ನೂ ಸಂಸ್ಕಾರವಂತರನ್ನಾಗಿ ಮಾಡುತ್ತಾ ಬಂದಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಶಾಸಕರಾದ ಎಸ್.ಎ.ರವೀಂದ್ರನಾಥ್, ಎಸ್.ವಿ.ರಾಮಚಂದ್ರಪ್ಪ, ಮಾಡಾಳ್ ವಿರೂಪಾಕ್ಷಪ್ಪ, ಪ್ರೊ.ಎನ್.ಲಿಂಗಣ್ಣ, ವಿ.ಆರ್.ಎಲ್. ಚೇರ್ಮನ್ ಡಾ. ವಿಜಯ ಸಂಕೇಶ್ವರ, ಅ.ಭಾ.ವೀ.ಮ.ಸಭಾ ಉಪಾಧ್ಯಕ್ಷ ಅಥಣಿ ವೀರಣ್ಣ, ಮಾಜಿ ಶಾಸಕ ಬಿ.ಪಿ.ಹರೀಶ, ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್, ಉದ್ಯಮಿ ಅಣಬೇರು ರಾಜಣ್ಣ ಮತ್ತಿತರರು ಉಪಸ್ಥಿತರಿದ್ದರು.
ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು ಹಿರೇಮಠ ಬಿಳಕಿ, ಕೇದಾರ ಶಿವಶಾಂತವೀರ ಶಿವಾಚಾರ್ಯ ಸ್ವಾಮಿಗಳು ಹಿರೇಮಠ ಚನ್ನಗಿರಿ, ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಜಕ್ಕಲಿ-ಹಾರನಹಳ್ಳಿ ಇವರಿಗೆ ಗೌರವ ಶ್ರೀ ರಕ್ಷೆ ನೀಡಲಾಯಿತು . ಡಾ.ಎನ್.ಎ.ಚರಂತಿಮಠ, ಕೆ.ಎಂ. ಇಮಾಮ್, ರಾಜನಹಳ್ಳಿ ರಮೇಶ್‍ಬಾಬು, ದಿನೇಶ್ ಕೆ. ಶೆಟಿ ಡಾ.ಎಸ್.ಆರ್.ಹೆಗಡೆ, ರಾಹುಲ್ ಸಂಕನೂರು, ಬಿ.ಕೆ. ಸುಭಾಷ್‍ಚಂದ್ರ, ಜಯಪ್ರಕಾಶ್ ಅಂಬರಕರ್, ವಾಗೀಶ ವಿಶ್ವನಾಥಸ್ವಾಮಿ ಹಿರೇಮಠ, ಡಾ|| ಡಿ.ಆರ್.ಮಂಜುನಾಥ, ನಂದಾ ಜಗದೀಶ್ ಉಪ್ಪಿನ್, ಅಂಬಿಕಾದೇವಿ ಬಂಕಾಪುರ ಶಿವಣ್ಣನವರ್, ವಾಣಿ ಡಾ. ಸೋಮಶೇಖರ್, ಶೈಲಾ ಮಹಾಬಲೇಶ್ ಘಟ್ಟದ, ಎಸ್.ವಿ.ನಾಗರಾಜಪ್ಪ, ಪಟೇಲ್ ಶಿವಕುಮಾರ್ ಇವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರು ರಕ್ಷೆ ನೀಡಿ ಆಶೀರ್ವದಿಸಿದರು.
ಲಕ್ಷ್ಮೇಶ್ವರದ ಡಾ|| ಜಯಶ್ರೀ ಮಲ್ಲಿಕಾರ್ಜುನ ಹೊಸಮನಿ ನವರಾತ್ರಿಯಲ್ಲಿ ಶಕ್ತಿ ಆರಾಧನೆ ಮಹತ್ವ ವಿಷಯದ ಕುರಿತು ಉಪನ್ಯಾಸ ನೀಡಿದರು.
ಹರಪನಹಳ್ಳಿ ತೆಗ್ಗಿನಮಠದ ವರಸದ್ಯೋಜಾತ ಶಿವಾಚಾರ್ಯ ಸ್ವಾಮಿಗಳು ಉಪದೇಶಾಮೃತ ನೀಡಿದರು. ಹಾಸನದ ಗಾನವಿ ವೀರಭದ್ರಪ್ಪ ಇವರಿಂದ ಆಕರ್ಷಕ ಭರತ ನಾಟ್ಯ ಜರುಗಿತು. ಬಾಳೆಹೊನ್ನೂರು ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದವರು ವೇದಘೋಷ ನಡೆಸಿಕೊಟ್ಟರು. ಅ.ಭಾ.ವೀ.ಮಹಾಸಭಾ ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷ ದೇವರಮನಿ ಶಿವಕುಮಾರ ಸ್ವಾಗತಿಸಿದರು. ಶಿವಮೊಗ್ಗದ ಶಾಂತಾ ಆನಂದ್ ನಿರೂಪಿಸಿದರು. ರಾಜ್ಯ ಪ್ರಶಸ್ತಿ ಪುರಸ್ಕøತ ಗಾನಭೂಷಣ ವೀರೇಶ ಕಿತ್ತೂರ ಸಂಗೀತ ಸೇವೆ ಸಲ್ಲಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ