ತುಮಕೂರು
ಸ್ವಯಂ ರಕ್ಷಣೆಗಾಗಿ ಎಲ್ಲಾ ಮಕ್ಕಳು ಕರಾಟೆ ಕಲಿಯಬೇಕು, ವಿಶೇಷವಾಗಿ ಹೆಣ್ಣುಮಕ್ಕಳು ಕರಾಟೆಯಲ್ಲಿ ಪ್ರಾವಿಣ್ಯತೆ ಸಾಧಿಸಿದರೆ ತಮ್ಮನ್ನು ತಾವೇ ರಕ್ಷಣೆ ಮಾಡಿಕೊಳ್ಳಲು ಸಹಾಯವಾಗುತ್ತದೆ ಎಂದು ಶಾಸಕ ಜಿ ಬಿ ಜ್ಯೋತಿಗಣೇಶ್ ಸಲಹೆ ಮಾಡಿದರು.
ನಗರದ ಸಿದ್ದಿವಿನಾಯಕ ಸಮುದಾಯ ಭಾವನದಲ್ಲಿ ಕರ್ನಾಟಕ ಲಯನ್ಸ್ ಅಕಾಡೆಮಿ ಏರ್ಪಡಿಸಿರುವ ಎರಡು ದಿನಗಳ ರಾಜ್ಯಮಟ್ಟದ ಕರಾಟೆ ಚಾಂಪಿಯನ್‍ಶಿಪ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ಕರಾಟೆಯಂತಹ ಕ್ರೀಡೆಯನ್ನು ತುಮಕೂರಿನಲ್ಲಿ ಆಯೋಜಿಸಿ ಹೆಚ್ಚು ಜನರಲ್ಲಿ ಕರಾಟೆ ಬಗ್ಗೆ ಆಸಕ್ತಿ ಬೆಳೆಸಲು ಈ ಕಾರ್ಯಕ್ರಮ ಸಹಕಾರಿ ಎಂದರು.
ಓದಿನ ಜೊತೆಗೆ ಮಕ್ಕಳು ಯಾವುದಾದರೂ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು, ದೈಹಿಕ, ಮಾನಸಿಕ ಸದೃಢತೆಗೆ ಕ್ರೀಡೆ ಸಹಕಾರಿ, ಪೋಷಕರೂ ಮಕ್ಕಳಲ್ಲಿ ಕ್ರೀಡಾಸಕ್ತಿ ಬೆಳೆಸಲು ಆಸಕ್ತಿ ವಹಿಸಬೇಕು ಎಂದು ಹೇಳಿದರು.
ಟಿಎಂಸಿಸಿ ಬ್ಯಾಂಕ್ ಅಧ್ಯಕ್ಷ ಎನ್ ಎಸ್ ಜಯಕುಮಾರ್ ಮಾತನಾಡಿ, ಇಂದಿನ ದಿನದಲ್ಲಿ ಹೆಣ್ಣುಮಕ್ಕಳಿಗೆ ಸ್ವಯಂ ರಕ್ಷಣೆ ಅಗತ್ಯವಾಗಿದೆ, ಅದಕ್ಕಾಗಿ ಎ ಕರಾಟೆಯಂತಹ ಕ್ರೀಡೆ ಕಲಿತಿ ಸಾಮಥ್ರ್ಯ, ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು ಎಂದರು.
ಮಹಿಳೆಯರು, ಹೆಣ್ಣು ಮಕ್ಕಳು ರಕ್ಷಣಾ ಕಲೆ ಬೆಳೆಸಿಕೊಳ್ಳಬೇಕು ಎಂದ ಅವರು, ಪೋಷಕರು ತಮ್ಮ ಮಕ್ಕಳು ಕರಾಟೆ ಕಲಿಯಲು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ನಗರಪಾಲಿಕೆ ಮೇಯರ್ ಲಲಿತಾ ರವೀಶ್, ಉಪಮೇಯರ್ ರೂಪಶ್ರೀ ಶೆಟ್ಟಾಳಯ್ಯ ಅವರು, ಹೆಣ್ಣು ಮಕ್ಕಳ ರಕ್ಷಣೆ ಬಗ್ಗೆ ಪೋಷಕರು ಎಚ್ಚರ ವಹಿಸಬೇಕು, ತಪ್ಪದೆ ಕರಾಟೆಯಂತಹ ಕ್ರೀಡೆಯಲ್ಲಿ ಮಕ್ಕಳು ತರಬೇತಿ ಪಡೆಯಲು ನೆರವಾಗಬೇಕು ಎಂದರು.ಚಿತ್ರ ನಟಿ ಸಿಂಧೂ ಲೋಕನಾಥ್, ರಾಜ್ಯ ಕರಾಟೆ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಜಿ ಕೆ ಕೀರ್ತಿ, ಜಿಲ್ಲಾಧ್ಯಕ್ಷ ಮಾಲತೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಭಿಷೇಕ್, ರಾಜ್ಯ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ನಿತ್ಯಾನಂದ ಕೆಮ್ಮಣ್, ಅಂತರಾಷ್ಟ್ರೀಯ ಕರಾಟೆ ತೀರ್ಪುಗಾರರಾದ ಡ್ಯಾಮಿಕ್ ಸಾವಿಯೋ, ಡೊನಾಲ್ಡ್, ನಗರಪಾಲಿಕೆ ಸದಸ್ಯ ವಿಷ್ಣು, ಕನ್ನಡ ಸೇನೆ ಜಿಲ್ಲಾಧ್ಯಕ್ಷ ದನಿಯಾಕುಮಾರ್, ಮುಖಂಡರಾದ ನೇತಾಜಿ ಶ್ರೀದರ್, ಡಾ. ಸಂಜಯ್ ನಾಯಕ್, ರಾಯಸಂದ್ರ ರವಿಕುಮಾರ್, ಮಹೇಶ್ ಮೊದಲಾದವರು ಭಾಗವಹಿಸಿದ್ದರು.
ಎರಡು ದಿನಗಳ ಈ ಕರಾಟೆ ಚಾಂಪಿಯನ್‍ಶಿಪ್ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 800 ಕರಾಟೆಪಟುಗಳು ಆಗಮಿಸಿದ್ದಾರೆ. ವಿವಿಧ ವಿಭಾಗದ 5ರಿಂದ 30 ವರ್ಷ ವಯೋಮಿತಿಯ ಕರಾಟೆಪಟುಗಳು ತಮ್ಮ ಸಾಮಥ್ರ್ಯ ತೋರಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
