ತುಮಕೂರು
ಭಾನುವಾರ ಜಿಲ್ಲೆಯಲ್ಲಿ 267 ಜನರಿಗೆ ಸೋಂಕು ಖಚಿತವಾದ ವರದಿಯಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 5775ಕ್ಕೆ ಏರಿಕೆಯಾಗಿದೆ. ಜೊತೆಗೆ ಸೋಂಕು ತಗುಲಿದ ಇಬ್ಬರು ಮೃತಪಟ್ಟಿದ್ದಾರೆ.ಕೊರೊನಾ ಸೋಂಕಿತರು ಚಿಕಿತ್ಸೆ ಪಡೆದು ಗುಣಮುಖರಾಗಿ ಭಾನುವಾರ 174 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ 4080 ಮಂದಿ ಗುಣಮುಖರಾದಂತಾಗಿದೆ. ಆದರೆ, ಜಿಲ್ಲೆಯಲ್ಲಿ 1533 ಸೋಂಕು ಸಕ್ರಿಯ ಪ್ರಕರಣಗಳಿವೆ. ಪಾವಗಡದ ರೆಡ್ಡಿ ಬಡಾವಣೆಯ 65 ವರ್ಷದ ಪುರುಷ ಹಾಗೂ ಕುಣಿಗಲ್ ತಾಲ್ಲೂಕು ಎಡೆಯೂರು ಬಳಿಯ ಕಿತ್ತಘಟ್ಟ ಗ್ರಾಮದ 55 ವರ್ಷದ ಗಂಡಸಿಗೆ ಕೋವಿಡ್ ಸೋಂಕು ಖಚಿತವಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಚಿಕಿತ್ಸೆ ವಿಫಲವಾಗಿ ಮೃತರಾಗಿದ್ದಾರೆ.
ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನ ಸೋಂಕಿನಿಂದ ಮೃತರಾದವರ ಸಂಖ್ಯೆ 162ಕ್ಕೆ ಏರಿದೆ. ಇವರಲ್ಲಿ ತುಮಕೂರು ತಾಲ್ಲೂಕಿನ 99 ಜನ ಸೇರಿದ್ದಾರೆ.ಭಾನುವಾರ ವರದಿಯಾದ 267 ಪ್ರಕರಣಗಳಲ್ಲಿ ತುಮಕೂರು ತಾಲ್ಲೂಕಿನ 63 ಜನರಿಗೆ ಸೋಂಕು ಖಚಿತವಾಗಿದೆ. ಗುಬ್ಬಿ ತಾಲ್ಲೂಕಿನಲ್ಲಿ 54 ಜನರಿಗೆ, ತುರುವೇಕೆರೆ ತಾಲ್ಲೂಕಿನಲ್ಲಿ 34, ಶಿರಾ ತಾಲ್ಲೂಕಿನಲ್ಲಿ 34, ತಿಪಟೂರು ತಾಲ್ಲೂಕಿನ 29 ಮಂದಿಗೆ ಪಾಸಿಟಿವ್ ಇರುವ ವರದಿ ಬಂದಿದೆ. ಕುಣಿಗಲ್ ತಾಲ್ಲೂಕಿನ 19, ಮಧುಗಿರಿ ತಾಲ್ಲೂಕಿನ 13, ಪಾವಗಡ ತಾಲ್ಲೂಕಿನ 11, ಕೊರಟಗೆರೆ ತಾಲ್ಲೂಕಿನ 6, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 4 ಜನರಿಗೆ ಕೊರೊನಾ ಸೋಂಕು ಖಚಿತವಾಗಿದೆ. ಇವರಲ್ಲಿ 138 ಪುರುಷರು, 129 ಮಹಿಳೆಯರು, 60 ವರ್ಷ ಮೇಲ್ಪಟ್ಟ 60 ಜನರಿದ್ದಾರೆ.
ಇದೂವರೆಗೆ ಜಿಲ್ಲೆಯಲ್ಲಿ ವರದಿಯಾಗಿರುವ ಒಟ್ಟು 5775 ಸೋಂಕು ಪ್ರಕರಣಗಳಲ್ಲಿ ತುಮಕೂರು ತಾಲ್ಲೂಕಿನಲ್ಲಿ 2107, ಕುಣಿಗಲ್ ತಾ. 500, ಪಾವಗಡ ತಾ. 496, ತಿಪಟೂರು ತಾ. 461, ಗುಬ್ಬಿ ತಾ. 416, ಶಿರಾ ತಾ. 405, ಮಧುಗಿರಿ ತಾ. 393, ತುರುವೇಕೆರೆ ತಾ. 346, ಚಿಕ್ಕನಾಯಕನಹಳ್ಳಿ ತಾ. 338, ಕೊರಟಗೆರೆ ತಾ. 313 ಪ್ರಕರಣ ವರದಿಯಾಗಿವೆ.
ಈವರೆಗೂ ಕೊರೊನಾ ಸೋಂಕು ತಗುಲಿದ 5775 ಜನರಲ್ಲಿ 162 ಜನ ಮೃತಪಟ್ಟಿದ್ದಾರೆ. ತುಮಕೂರು ತಾಲ್ಲೂಕಿನ 99, ಕುಣಿಗಲ್ ತಾಲ್ಲೂಕಿನಲ್ಲಿ 10, ಪಾವಗಡ ತಾಲ್ಲೂಕಿನ 10, ಗುಬ್ಬಿ ತಾಲ್ಲೂಕಿನಲ್ಲಿ 9, ಶಿರಾ ತಾಲ್ಲೂಕಿನ 7, ತಿಪಟೂರು ತಾಲ್ಲೂಕಿನ 6, ಕೊರಟಗೆರೆ ತಾಲ್ಲೂಕಿನಲ್ಲಿ 6, ಮಧುಗಿರಿ ತಾಲ್ಲೂಕಿನಲ್ಲಿ 6, ತುರುವೇಕೆರೆ ತಾಲ್ಲೂಕು 4, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 4 ಮಂದಿ ಕೋವಿಡ್‍ಗೆ ಬಲಿಯಾಗಿದ್ದಾರೆ.
ಸೋಂಕಿತರಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ಇದೂವರೆಗೆ 5775 ಮಂದಿಗೆ ಸೋಂಕು ತಗುಲಿದೆ, ಇವರಲ್ಲಿ 4080 ಮಂದಿ ಗುಣಮುಖರಾಗಿದ್ದಾರೆ..
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ