ಬೆಂಗಳೂರು
ದ್ವಿತೀಯ ಪಿಯುಸಿ ತರಗತಿಗಳನ್ನು ರಾಜ್ಯಸರ್ಕಾರ ಮೇ 6ರ ಬದಲು ಮೇ 20 ರಿಂದ ಆರಂಭಿಸಲು ನಿರ್ಧರಿಸಿದೆ.
ಉಪನ್ಯಾಸಕರ ಒತ್ತಾಯಕ್ಕೆ ಮಣಿದಿರುವ ರಾಜ್ಯ ಸರ್ಕಾರ ಮೇ 20ಕ್ಕೆ ತರಗತಿ ಆರಂಭಿಸಲು ಮುಂದಾಗಿದ್ದು ಈ ಶೈಕ್ಷಣಿಕ ಸಾಲಿನ ದಾಖಲಾತಿ ಮತ್ತು ಶೈಕ್ಷಣಿಕ ಚಟುವಟಿಕೆಗಳ ಮಾರ್ಗಸೂಚಿಯನ್ವಯ ಮಾ. 19 ಕರ್ತವ್ಯದ ಕೊನೆ ದಿನವಾಗಿದ್ದು, ಮಾ. 20 ರಿಂದ ಮೇ 19ರವರೆಗೆ ಬೇಸಿಗೆ ರಜೆ ಘೋಷಿಸಲಾಗಿದೆ.
ಮೇ 20 ರಿಂದ ಪ್ರಸಕ್ತ ಸಾಲಿನ ಪಿಯುಸಿ ಶೈಕ್ಷಣಿಕ ತರಗತಿಗಳು ಆರಂಭವಾಗಲಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.ವಿಧಾನ ಪರಿಷತ್ ಸದಸ್ಯರು ಮತ್ತು ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕರ ಒತ್ತಡಕ್ಕೆ ಮಣಿದ ಸರ್ಕಾರ, ಮೇ 6ರ ಬದಲು ಮೇ 20 ರಿಂದ ದ್ವಿತೀಯ ಪಿಯು ತರಗತಿ ಆರಂಭಿಸಲು ತೀರ್ಮಾನಿಸಿದ್ದು, ಉಪನ್ಯಾಸಕರುಗಳ ಹೋರಾಟದ ಎಚ್ಚರಿಕೆ ನಂತರ ಸರ್ಕಾರ ಇಂತಹ ನಿರ್ಧಾರ ತೆಗೆದುಕೊಂಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ