ಬಿಜೆಪಿ ಸೇರಿದ 20ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು

ಎಂ ಎನ್ ಕೋಟೆ :

      ಸುಮಾರು 20ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು ಟಿಎಪಿಎಂಸಿ ಅಧ್ಯಕ್ಷ ಕಿಡಿಗಣ್ಣಪ್ಪ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಶಾಸಕ ಜೆ.ಸಿ. ಮಾಧುಸ್ವಾಮಿ ಕಿಡಿಗಣ್ಣಪ್ಪನವರನ್ನು ಬಿಜೆಪಿ ಪಕ್ಷಕ್ಕೆ ಬರಮಾಡಿಕೊಂಡರು.

      ಗುಬ್ಬಿ ತಾಲ್ಲೂಕಿನ ಮುದ್ದಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಶಾಸಕರು ಅವರು ನಮ್ಮ ಜಿಲ್ಲೆಗೆ ಹೊರಗಿನಿಂದ ಬಂದವರಿಗೆ ರಾಜಕಾರಣ ಮಾಡಲು ನಾವು ಬಿಡುವುದಿಲ್ಲ ಎಂದರು.

         ದೇವೆಗೌಡರು ಕುಂಟುಂಬ ರಾಜಕಾರಣ ಆಗಿದೆ. ಮಕ್ಕಳು ಮೊಮ್ಮಕಳನ್ನು ಚುನಾವಣೆಯಲ್ಲಿ ನಿಲ್ಲಿಸಿಕೊಂಡು ನಮ್ಮ ದೇಶವನ್ನು ಹಾಳು ಮಾಡಲು ಹೊರಟಿದ್ದಾರೆ. ದೇವೆಗೌಡರನ್ನು ಯಾವುದೇ ಕಾರಣ್ಣೂಕೂ ಗೆಲ್ಲಲು ನಾವು ಬಿಡಬರದು ಎಂದರು. ತುಮಕೂರು ಜಿಲ್ಲೆಯಲ್ಲಿ ದೇವೇಗೌಡರನ್ನು ಗೆಲ್ಲಿಸಿದರೆ ನಮ್ಮ ದೇಶವನ್ನೆ ಹಾಳು ಮಾಡುತ್ತಾರೆ. ಎಂದರು.

        ಅಧಿಕಾರದ ಆಸೆಗಾಗಿ ನಮ್ಮ ಜಿಲ್ಲೆಗೆ ವಲಸೆ ಬಂದಿದ್ದಾರೆ ಅವರನ್ನು ಮತ್ತೆ ನಾವು ವಾಪಸ್ ಕಳಿಸುವ ಕೆಲಸವನ್ನು ನಮ್ಮ ಮತದಾರರು ಮಾಡಬೇಕು ಎಂದರು. ಅಧಿಕಾರದ ದಾಹಕ್ಕಾಗಿ ಜಿಲ್ಲೆಗೆ ಬಂದಿರುವ ದೇವೇಗೌಡರಿಗೆ ನಮ್ಮ ಜಿಲ್ಲೆಯ ಜನರೇ ತಕ್ಕ ಪಾಠವನ್ನು ಕಲಿಸುತ್ತಾರೆ ಎಂದರು.

        ನಮ್ಮಲ್ಲಿ ಏನೇ ಇದ್ದರೂ ಸಹ ನಾವು ಬಗೆಹರಿಸಿಕೋಳಬಹುದು ಈ ಸಮಯದಲ್ಲಿ ನಾವು ಏನಾದರೂ ಕೈಕೊಟ್ಟಿದ್ದಾರೆ ಮುಂದೆ ದೊಡ್ಡ ದುರಂತವನ್ನೇ ಎದರಿಸಬೇಕಾಗುತ್ತದೆ.ಆದ್ದರಿಂದ ಕಾರ್ಯಕರ್ತರು ಶಕ್ತಿ ಮೀರಿ ಕೆಲಸವನ್ನು ಮಾಡಬೇಕು ಎಂದು ತಿಳಿಸಿದರು.

        ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಎಸ್ ಡಿ ಧಿಲೀಪ್ ಕುಮಾರ್ , ಬಿಜೆಪಿ ತಾಲ್ಲೂಕ್ ಅಧ್ಯಕ್ಷ ಅ.ನ. ಲಿಂಗಪ್ಪ , ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯದೇವಪ್ಪ , ತಾಲ್ಲೂಕ್ ಪಂಚಾಯಿತಿ ಸದಸ್ಯ ಸಿಂಗದಹಳ್ಳಿ ರಾಜ್ ಕುಮಾರ್ , ಜಿಲ್ಲಾ ಪಂಚಾಯಿತಿ ಸದಸ್ಯೆ ಯಶೋಧಮ್ಮ , ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಾಗರನಹಳ್ಳಿ ವಿಜಯ್ ಕುಮಾರ್ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

        ಟಿಎಪಿಎಂಸಿ ಅಧ್ಯಕ್ಷ ಹಾಗೂ ಜೆಡಿಎಸ್ ಮುಖಂಡ ಕಿಡಿಗಣ್ಣಪ್ಪ ಮಾತನಾಡಿ ಜೆಡಿಎಸ್ ನಲ್ಲಿ ಬೇಸತ್ತು ದೇಶಕ್ಕೆ ದುಡಿಯುವಂತಹ ನರೇಂದ್ರ ಮೋಧಿಯವರ ಪರವಾಗಿ ಕೆಲಸಮಾಡಲು ನಾನು ಬಿಜೆಪಿಗೆ ಸೇರ್ಪಡೆಯಾಗಿದ್ದಾನೆ ಎಂದರು.

         ಸುಮಾರು ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಟಿಎಪಿಎಂಸಿ ಅಧ್ಯಕ್ಷ ಕಿಡಿಗಣ್ಣಪ್ಪ  ನವರು ಧೀಡಿರ್ ಬಿಜೆಪಿಗೆ ಸೇರ್ಪಡೆಯಾಗಿರುವುದು ಎಲ್ಲರೂ ಕುತುಹೂಲ ಮೂಡಿಸಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap