ತುಮಕೂರು : ನಗರದಲ್ಲಿ 12 ದಿನಗಳಲ್ಲಿ 20 ಲಕ್ಷ ದಂಡ ಸಂಗ್ರಹ

ತುಮಕೂರು
ವಿಶೇಷ ವರದಿ:ಆರ್.ಎಸ್.ಅಯ್ಯರ್
    ಟ್ರಾಫಿಕ್ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಹೊಸ ದಂಡ ವಿಧಿಸುವ ಪ್ರಕ್ರಿಯೆ ತುಮಕೂರು ನಗರದಲ್ಲಿ ಸೆ.6 ರಿಂದ ಆರಂಭವಾಗಿದ್ದು, ಅಂದಿನಿಂದ ಸೆ.17 ರವರೆಗಿನ 12 ದಿನಗಳ ಅವಧಿಯಲ್ಲಿ ತುಮಕೂರು ನಗರದಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆಯ 2,065 ಪ್ರಕರಣಗಳು ದಾಖಲಾಗಿದ್ದು, ಒಟ್ಟು 20,30,100 ರೂ. ದಂಡ ಸಂಗ್ರಹವಾಗಿದೆ. 
    ತುಮಕೂರು ನಗರದ ಟ್ರಾಫಿಕ್ ಪೂರ್ವ ಮತ್ತು ಪಶ್ಚಿಮ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸ್ಥಳದಂಡದ ರೂಪದಲ್ಲಿ ಹಾಗೂ ಕೆಲವು ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ದಂಡವು ವಿಧಿಸಲ್ಪಟ್ಟಿದೆ.ಟ್ರಾಫಿಕ್ ಪೂರ್ವ ಪೊಲೀಸ್ ಠಾಣೆಯಲ್ಲಿ 790 ಪ್ರಕರಣಗಳು ದಾಖಲಿಸಲ್ಪಟ್ಟಿದ್ದು, 7,81,100 ರೂ. ದಂಡ ಸಂಗ್ರಹಿಸಲ್ಪಟ್ಟಿದೆ. ಟ್ರಾಫಿಕ್ ಪಶ್ಚಿಮ ಪೊಲೀಸ್ ಠಾಣೆಯಲ್ಲಿ 1265 ಪ್ರಕರಣಗಳು ದಾಖಲಿಸಲ್ಪಟ್ಟಿದ್ದು, 11,22,000 ರೂ. ದಂಡ ಸಂಗ್ರಹವಾಗಿದೆ.
     ಇವೆರಡು ಠಾಣೆಗಳಿಂದ ಒಟ್ಟು 2055 ಪ್ರಕರಣಗಳು ದಾಖಲಾಗಿದ್ದು, ಒಟ್ಟು 19,03,100 ರೂ. ಸ್ಥಳದಂಡ ಸಂಗ್ರಹಗೊಂಡಿದೆ. ಇದರೊಂಡಿಗೆ ನ್ಯಾಯಾಲಯದಲ್ಲಿ 10 ಪ್ರಕರಣಗಳಿಗೆ ಸಂಬಂಧಿಸಿದಂತೆ 1,27,000 ರೂ. ದಂಡ ವಿಧಿಸಲ್ಪಟ್ಟಿದೆ.
ಅತಿಹೆಚ್ಚು ದಂಡದ 
ಪ್ರಕರಣಗಳು
     ಟ್ರಾಫಿಕ್ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಅತಿ ಹೆಚ್ಚು ದಂಡ ವಿಧಿಸಲ್ಪಟ್ಟಿರುವ ಪ್ರಕರಣಗಳು ಗಮನ ಸೆಳೆಯುತ್ತಿದೆ.
ಟ್ರಾಫಿಕ್ ಪೂರ್ವ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅಪ್ರಾಪ್ತ ವಯಸ್ಸಿನ ವಾಹನ ಚಾಲನೆಯ (ಮೈನರ್ ಡ್ರೈವಿಂಗ್) 20 ಪ್ರಕರಣಗಳಿಂದ 1 ಲಕ್ಷ ರೂ. ದಂಡ ಸಂಗ್ರಹವಾಗಿದೆ.
     ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಾಲನೆಯ 330 ಪ್ರಕರಣಗಳಿಂದ 3,25,500 ರೂ.; ಸಂಚಾರ ತೊಡಕಿಗೆ ಸಂಬಂಧಿಸಿದ 159 ಪ್ರಕರಣಗಳಿಂದ 77,900 ರೂ.; ಡ್ರೈವಿಂಗ್ ಲೈಸೆನ್ಸ್ ಇಲ್ಲದ ದ್ವಿಚಕ್ರ ವಾಹನ ಚಾಲನೆಯ 17 ಪ್ರಕರಣಗಳಿಂದ 80,300 ರೂ.; ವಾಹನದ ಇನ್‍ಶೂರೆನ್ಸ್ ಇಲ್ಲದ 15 ಪ್ರಕರಣಗಳಿಂದ 30,000 ರೂ.; ವಾಹನ ಚಾಲನೆ ಸಂದರ್ಭದಲ್ಲಿ ಮೊಬೈಲ್ ಫೋನ್ ಬಳಕೆಯ 5 ಪ್ರಕರಣಗಳಿಂದ 25,000 ರೂ.; ಸೀಟ್‍ಬೆಲ್ಟ್ `Àರಿಸದ 28 ಪ್ರಕರಣಗಳಿಂದ 28,000 ರೂ. – ಹೀಗೆ ಇನ್ನೂ ಹತ್ತಾರು ಪ್ರಕರಣಗಳಲ್ಲಿ ದಂಡ ಸಂಗ್ರಹವಾಗಿದೆ.
       ಟ್ರಾಫಿಕ್ ಪಶ್ಚಿಮ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಒನ್ ವೇ ಉಲ್ಲಂಘನೆಯ 46 ಪ್ರಕರಣಗಳಿಂದ 21,000 ರೂ.; ಟ್ರಾಫಿಕ್ ಸಿಗ್ನಲ್ ಜಂಪ್‍ನ 17 ಪ್ರಕರಣಗಳಿಂದ 6,900 ರೂ.; ಅಪ್ರಾಪ್ತ ವಯಸ್ಸಿನ ಚಾಲನೆಯ (ಮೈನರ್ ಡ್ರೈವಿಂಗ್) 7 ಪ್ರಕರಣಗಳಿಂದ 35,000 ರೂ.; ದಾಖಲಾತಿ ಒದಗಿಸದಿರುವ 215 ಪ್ರಕರಣಗಳಿಂದ 42,700 ರೂ.; ಸೀಟ್ ಬೆಲ್ಟ್ `Àರಿಸದಿರುವ 57 ಪ್ರಕರಣಗಳಿಂದ 49,800 ರೂ.; ಸಂಚಾರಕ್ಕೆ ಅಡಚಣೆ ಉಂಟುಮಾಡಿದ  163 ಪ್ರಕರಣಗಳಿಂದ 62,700 ರೂ.; ಹೆಲ್ಮಟ್ ಇಲ್ಲದ ಚಾಲನೆಯ 384 ಪ್ರಕರಣಗಳಿಂದ 3,62,400 ರೂ.; ಮೂರು ಜನರ ಸವಾರಿಯ   13 ಪ್ರಕರಣಗಳಿಂದ 13,000 ರೂ.; ಮೊಬೈಲ್ ಫೋನ್ ಬಳಕೆಯ 26 ಪ್ರಕರಣಗಳಿಂದ 1,18,000 ರೂ.; ಇನ್‍ಶೂರೆನ್ಸ್ ಇಲ್ಲದಿರುವ 28 ಪ್ರಕರಣಗಳಿಂದ 53,000 ರೂ.; ಡ್ರೈವಿಂಗ್ ಲೈಸೆನ್ಸ್ ಇಲ್ಲದ 21 ಪ್ರಕರಣಗಳಿಂದ 69,000 ರೂ.; ಡ್ರೈವಿಂಗ್ ಲೈಸೆನ್ಸ್ ಇಲ್ಲದ (ದ್ವಿಚಕ್ರ ವಾಹನ) 39 ಪ್ರಕರಣಗಳಿಂದ 1,33,900 ರೂ.; ಸಮವಸ್ತ್ರ `Àರಿಸದ 68 ಪ್ರಕರಣಗಳಿಂದ 32,000 ರೂ.- ಹೀಗೆ ಹಲವು ಪ್ರಕರಣಗಳಿಂದ ದಂಡವನ್ನು ಸಂಗ್ರಹಿಸಲಾಗಿದೆ.
ಎಂದು -ಎಷ್ಟು ಸಂಗ್ರಹ?
       ನಗರದ ಟ್ರಾಫಿಕ್ ಪೂರ್ವ ಪೆÇಲೀಸ್ ಠಾಣೆಯಲ್ಲಿ ಸೆ.6 ರಂದು 27 ಪ್ರಕರಣಗಳಿಂದ 5,100 ರೂ.; ಸೆ.7 ರಂದು 15 ಪ್ರಕರಣಗಳಿಂದ 14,000 ರೂ.; ಸೆ.8 ರಂದು 24 ಪ್ರಕರಣಗಳಿಂದ 14,500 ರೂ.; ಸೆ.9 ರಂದು 106 ಪ್ರಕರಣಗಳಿಂದ 85,300 ರೂ.; ಸೆ.10 ರಂದು 88 ಪ್ರಕರಣಗಳಿಂದ 75,600 ರೂ.; ಸೆ.11 ರಂದು 88 ಪ್ರಕರಣಗಳಿಂದ 75,600 ರೂ.; ಸೆ.12 ರಂದು 95 ಪ್ರಕರಣಗಳಿಂದ 1,76,500 ರೂ.; ಸೆ. 13 ರಂದು 125 ಪ್ರಕರಣಗಳಿಂದ 1,37,900 ರೂ.; ಸೆ.14 ರಂದು 19 ಪ್ರಕರಣಗಳಿಂದ 11,100 ರೂ.; ಸೆ.15 ರಂದು 14 ಪ್ರಕರಣಗಳಿಂದ 14,800 ರೂ.; ಸೆ.16 ರಂದು 89 ಪ್ರಕರಣಗಳಿಂದ 82,900 ರೂ.; ಸೆ.17 ರಂದು 41 ಪ್ರಕರಣಗಳಿಂದ 35400 ರೂ. ದಂಡವನ್ನು ಸಂಗ್ರಹಿಸಲಾಗಿದೆ. 
       ಟ್ರಾಫಿಕ್ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಸೆ.6 ರಂದು 128 ಪ್ರಕರಣಗಳಿಂದ 19,000 ರೂ.; ಸೆ.7 ರಂದು 80 ಪ್ರಕರಣಗಳಿಂದ 30,000 ರೂ.; ಸೆ. 8 ರಂದು 58 ಪ್ರಕರಣಗಳಿಂದ 45,500 ರೂ.; ಸೆ.9 ರಂದು 73 ಪ್ರಕರಣಗಳಿಂದ 73,200 ರೂ.; ಸೆ.10 ರಂದು 127 ಪ್ರಕರಣಗಳಿಂದ 1,19,900 ರೂ.; ಸೆ.11 ರಂದು 162 ಪ್ರಕರಣಗಳಿಂದ 1,54,700 ರೂ.; ಸೆ.12 ರಂದು 196 ಪ್ರಕರಣಗಳಿಂದ 2,31,500 ರೂ.; ಸೆ.13 ರಂದು 147 ಪ್ರಕರಣಗಳಿಂದ 1,45,000 ರೂ.; ಸೆ.14 ರಂದು 23 ಪ್ರಕರಣಗಳಿಂದ 14,500 ರೂ.; ಸೆ.15 ರಂದು 85 ಪ್ರಕರಣಗಳಿಂದ 99,200 ರೂ.; ಸೆ.16 ರಂದು 132 ಪ್ರಕರಣಗಳಿಂದ 1,08,400 ರೂ.; ಸೆ.17 ರಂದು 54 ಪ್ರಕರಣಗಳಿಂದ 81,100 ರೂ. ದಂಡವನ್ನು ಸಂಗ್ರಹಿಸಲಾಗಿದೆ ಎನ್ನುತ್ತಿವೆ ಪೊಲೀಸ್ ಅಂಕಿಅಂಶಗಳು. 

Recent Articles

spot_img

Related Stories

Share via
Copy link