20 ಶಾಲಾಕೊಠಡಿಗಳ ನಿರ್ಮಾಣಕ್ಕೆ ಚಾಲನೆ

ಚಿತ್ರದುರ್ಗ

          ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆಯ ಆವರಣವನ್ನು ಶಿಕ್ಷಣ ಕ್ಯಾಂಪಸ್ ಮಾದರಿ ರೀತಿಯಲ್ಲಿ ಮಾಡಲಾಗುತ್ತದೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ತಿಳಿಸಿದರು.

          ನಗರದ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸುಮಾರು 3 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿದ 20 ಕೊಠಡಿಗಳ ನಿರ್ಮಾಣಕ್ಕೆ ಚಾಲನೆ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ವರ್ಷದಿಂದ ವರ್ಷಕ್ಕೆ ಇಲ್ಲಿ ಕಲಿಯಲು ಬಂದು ಸೇರುವವರ ಸಂಖ್ಯೆ ಹೆಚ್ಚಾಗುತ್ತಿದೆ ಅದಕ್ಕೆ ಈ ವರ್ಷ 2 ರಿಂದ 3 ಕೊಠಡಿಯನ್ನು ನಿರ್ಮಾಣ ಮಾಡಿದರೆ ಅದು ಮುಂದಿನ ವರ್ಷ ಸಾಲದೆ ಬರುತ್ತದೆ ಇದರಿಂದ ಈ ಬಾರಿ ಪ್ರೌಢಶಾಲೆಗೆ 8 ಕಾಲೇಜಿಗೆ 12 ಕೊಠಡಿಗಳ ನಿರ್ಮಾಣ ಕಾರ್ಯಕ್ಕೆ ಮುಂದಾಗಿದೆ ಎಂದರು.

          ಈ ಕಾಲೇಜು ತುಂಭಾ ಹಳೆಯದಾಗಿದ್ದು, ಇಲ್ಲಿ ಬಡವರು ಮತ್ತು ಗ್ರಾಮಾಂತರ ಪ್ರದೇಶದಿಂದ ಓದಲು ಬರುತ್ತಾರೆ, ಇದ್ದಲ್ಲದೆ ಖಾಸಗಿ ಶಾಲೆಗಳಲ್ಲಿ ಡೋನೇಷನ್ ಹಾವಳಿಯಿಂದ ಇಲ್ಲಿಗೆ ಸೇರುವವರ ಸಂಖ್ಯೆ ಹೆಚ್ಚಳವಾಗುತ್ತದೆ. ಶಾಲೆಯ ಪಕ್ಕದಲ್ಲಿನ ರಸ್ತೆಯಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂಬ ದೂರು ಬಂದಿದೆ ಇದರಿಂದ ಈ ರಸ್ತೆಯನ್ನು ಮುಚ್ಚುವುದರ ಮೂಲಕ ಅದನ್ನು ಸಹಾ ಒಳಗಡೆ ಹಾಕಿಕೊಂಡು ಪಕ್ಕದ ಊರ್ದು ಶಾಲೆ, ಸರ್ಕಾರಿ ಶಾಲೆಯನ್ನು ಒಳಗೊಂಡಂತೆ ಮುಂದಿನ ದಿನದಲ್ಲಿ ಉತ್ತಮವಾದ ಕ್ಯಾಂಪಸ್ ಮಾದರಿಯಲ್ಲಿ ಮಾಡಲಾಗುತ್ತದೆ. ರಸ್ತೆಯನ್ನು ಪಡೆಯಲು ನಗರಸಭೆಯ ಅನುಮತಿ ಬೇಕು ಇದಕ್ಕೆ ಅಧ್ಯಕ್ಷರ ಆಯ್ಕೆಯಾದ ಮೇಲೆ ಸಭೆಯಲ್ಲಿ ವಿಷಯವನ್ನು ಪ್ರಸ್ತಾವನೆ ಮಾಡಿ ತೀರ್ಮಾನ ಪಡೆಯಲಾಗುತ್ತದೆ ಎಂದರು ಶಾಸಕರು ತಿಳಿಸಿದರು.

           ಶಾಲೆಯಲ್ಲಿ ನೀರಿನ ತೊಂದರೆ ಇದೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದರಿಂದ ಪಾರ್ಕನಿಂದ ಇಲ್ಲಿಗೆ ನೇರವಾಗಿ ಪೈಪ್ ಮೂಲಕ ಸಂಪರ್ಕವನ್ನು ನೀಡಲಾಗಿದೆ, ಇದರಿಂದ ನೀರಿನ ಸಮಸ್ಯೆ ಕಡಿಮೆಯಾಗಲಿದೆ ಅಲ್ಲದೆ 4 ಲಕ್ಷ ರೂ.ವೆಚ್ಚದಲ್ಲಿ ಮೋಟಾರ್ ಪಂಪ್‍ನ್ನು ಅಳವಡಿಕೆ ಮಾಡಿ ಬಸವ ಮಂಟಪದ ಬಳಿ ನಿರ್ಮಾಣ ವಾಗುತ್ತಿರುವ ಶಾಲಾ ಕೊಠಡಿಗಳಿಗೆ ಸಹಾ ನೀರನ್ನು ನೀಡುವಂತೆ ತಿಳಿಸಲಾಗಿದೆ ಇದರೊಂದಿಗೆ 10 ಲಕ್ಷ ರೂ ವೆಚ್ಚದಲ್ಲಿ ಶೌಚಾಲಯವನ್ನು ನಿರ್ಮಾಣ ಮಾಡಲು ಸಹಾ ಸೂಚನೆ ನೀಡಲಾಗಿದೆ ಎಂದು ಹೇಳಿದರು.

           ಶಾಲಾ ಆವರಣ ಕಸದಿಂದ ಕೂಡಿದೆ, ಶಾಲಾ ಅಭೀವೃದ್ದಿ ಸಮಿತಿಯಲ್ಲಿ ಹಣ ಇದೆ ಆದನ್ನು ಬಳಕೆ ಮಾಡಿಕೊಂಡು ಶುಚ್ಚಿತ್ವವನ್ನು ಕಾಪಾಡಿ ಹಾಗೇಯೇ ಸುತ್ತಾ-ಮತ್ತಲ್ಲಿನ ಪ್ರದೇಶದಲ್ಲಿ ಖಾಲಿ ಜಾಗ ಇದೆ ಅಲ್ಲಿ ಸಸಿಗಳನ್ನು ನಡೆವುದರ ಮೂಲಕ ಮಕ್ಕಳಿಗೆ ಓದಲು ಉತ್ತಮವಾದ ವಾತಾವರಣವನ್ನು ನಿರ್ಮಾಣ ಮಾಡುವಂತೆ ಶಿಕ್ಷಕರುಗಳಿಗೆ ಸೂಚನೆ ನೀಡಿ, ಫಲಿತಾಂಶವನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಕಾಯೋನ್ಮೂಖರಾಗುವಂತೆ ಸೂಚನೆ ನೀಡಿದರು.

            ಈ ಸಂದರ್ಭದಲ್ಲಿ ಪೌರಾಯುಕ್ತರಾದ ಚಂದ್ರಪ್ಪ, ನಿರ್ಮಿತಿ ಕೇಂದ್ರದ ಮೂಡಲಗಿರಿಯಪ್ಪ ಇಂಜಿನಿಯರ್ ರವಿಶಂಕರ್ ಸೇರಿದಂತೆ ಶಾಲೆ ಮತ್ತು ಕಾಲೇಜಿನ ಪ್ರಾಚಾರ್ಯರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link