ಪಾವಗಡ
ತಾಲ್ಲೂಕಿನ ರಾಚರ್ಲ್ಲು ಗ್ರಾಮದಲ್ಲಿ ಇಂದು ಬೆಳ್ಳಿಗ್ಗೆ 10:30ರ ಸುಮಾರಿಗೆ ನರಿಯೊಂದು ದಾಳಿ ಮಾಡಿ ಪೂಜಾರ್ ರಾಜಪ್ಪ ಎಂಬುವವರಿಗೆ ಸೇರಿದ ಸುಮಾರು 20 ಕುರಿಗಳನ್ನು ಕೊಂದಿರುವ ಘಟನೆ ವರದಿಯಾಗಿದೆ .
ಕುರಿಗಳನ್ನು ಮೇವಿಗೆ ಹೊಡೆದುಕೊಂಡು ಹೋದ ಸಮಯದಲ್ಲಿ ಹಟ್ಟಿಯಲ್ಲಿ ಇದ್ದ 15 ಕುರಿಮರಿಗಳು ಹಾಗೂ 5 ಕುರಿಗಳ ಮೇಲೆ ದಾಳಿ ಮಾಡಿದ ನರಿ ಅವುಗಳನ್ನು ಸಾಯಿಸಿದೆ ಇದರಿಂದಾಗಿ ನಮಗೆ ಸುಮಾರು 90 ಸಾವಿರದಷ್ಟು ನಷ್ಟವಾಗಿದೆ ಎಂದು ಮಾಲೀಕ ಅಳಲು ತೊಡಿಕೊಂಡಿದ್ದಾರೆ.ಸಂಬಂಧಪಟ್ಟ ಅಧಿಕಾರಿಗಳು ಇನ್ನು ಸ್ಥಳಕ್ಕೆ ಆಗಮಿಸದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ತಿಳಿಸಿದ್ದಾರೆ.