ಕೊವಿಡ್ ಹೆಸರಿನಲ್ಲಿ 2000 ಕೋಟಿ ನುಂಗಿದ ಸರ್ಕಾರ : ಮುರುಳೀಧರ್ ಹಾಲಪ್ಪ

ಚಿಕ್ಕನಾಯಕನಹಳ್ಳಿ:

      ರಾಜ್ಯ ಸರ್ಕಾರ ಕೋವಿಡ್ 19 ಖರ್ಚಿನಲ್ಲಿ ಎರಡು ಸಾವಿರ ಕೋಟಿ ಹಣ ಬ್ರಷ್ಟಾಚಾರ ಮಾಡಿದೆ ಎಂದು ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರುಳಿಧರ ಹಾಲಪ್ಪ ಆರೋಪಿಸಿದ್ದಾರೆ. ಶ್ರಾವಣ ಮಾಸದ ಅಂಗವಾಗಿ ಕುಪ್ಪೂರು ಗದ್ದಿಗೆ ಮಠಕ್ಕೆ ಆಗಮಿಸಿದ್ದರವರು ಪೂಜೆ ಸಲ್ಲಿಸಿ ಮಠದ ಆವರಣದಿಂದ ಹೊರಬಂದು ಸುದ್ದಿಗಾರೊಂದಿಗೆ ಮಾತನಾಡಿ ರಾಜ್ಯ ಸರ್ಕಾರ ಕೋವಿಡ್ ಗೆ ಸಂಬಂಧ ಪಟ್ಟ ಆಗಿರುವ ನಿಜವಾದ ಖರ್ಚು 1800ಕೋಟಿ ಆಗಿದೆ.

      ಕಾಂಗ್ರೆಸ್ ಪಕ್ಷಕ್ಕೆ ಮಾಧ್ಯಮ ಹಾಗೂ ಅಧಿಕಾರಿಗಳಿಂದ ಈ ಮಾಹಿತಿ ತಿಳಿದು ಬಂದಿದೆ. ಆದರೆ ಬಿಜೆಪಿ ಸರ್ಕಾರ ನಾಲ್ಕು ಸಾವಿರ ಕೋಟಿಯ ಖರ್ಚನ್ನು ತೋರಿಸುತ್ತಿದೆ ಈ ನಿಟ್ಟಿನಲ್ಲಿ ಎರಡು ಸಾವಿರಕ್ಕೂ ಹೆಚ್ಚು ಭ್ರಷ್ಟಾಚಾರ ಆಗಿರುವುದು ಕಂಡುಬರುತ್ತಿದೆ. ರಾಜ್ಯ ಕಾಂಗ್ರೆಸ್ ಪಕ್ಷ ಖರ್ಚಿನ ಲೆಕ್ಕವನ್ನು ಸರ್ಕಾರವನ್ನು ಕೇಳಿದರೆ ಸರ್ಕಾರ ಉತ್ತರ ಕೊಡುವ ಬದಲು ಬಿಜೆಪಿ ಪಕ್ಷದ ಪದಾಧಿಕಾರಿಯೊಬ್ಬರು ನಮ್ಮ ಪಕ್ಷಕ್ಕೆ ನೋಟೀಸ್ ಕಳಿಸಿದ್ದಾರೆ ಇದು ಯಾವ ನ್ಯಾಯ ನಾವು ಸರ್ಕಾರವನ್ನು ಪ್ರಶ್ನಿಸಿದರೆ ಭಾಜಪ ಪಕ್ಷ ನೋಟೀಸು ನೀಡುತ್ತದೆ ಇದನ್ನು ಕಾಂಗ್ರೇಸ್ ಪಕ್ಷ ಖಂಡಿಸುತ್ತದೆ ಎಂದರು.

      ಒಬ್ಬ ಉಪ ಮುಖ್ಯಮಂತ್ರಿ ಸೇರಿದಂತೆ ಆರೋಗ್ಯ ಇಲಾಖೆಯನ್ನು ಐದು ಜನ ಮಂತ್ರಿಗಳು ನಿರ್ವಹಣೆ ಮಾಡುತ್ತಿದ್ದರು ಆಸ್ಪತ್ರೆಗಳು ನಿಯಂತ್ರಣ ಕಳೆದು ಕೊಂಡಿದ್ದು ಕೊರೋನ ಸೊಂಕು ತಗುಲಿದ ವ್ಯಕ್ತಿಗಳು ಪರದಾಡುವ ಸ್ಥಿತಿ ಉಂಟಾಗಿದೆ.ಕಾಂಗ್ರೆಸ್ ಪಕ್ಷ ಇದನ್ನು ಸಹಿಸುವುದಿಲ್ಲ .

     ನಮ್ಮ ಪಕ್ಷದಿಂದ ರಾಜ್ಯದಲ್ಲಿರುವ ಎಲ್ಲಾ ಪಂಚಾಯ್ತಿಗಳಲ್ಲೂ ಇಬ್ಬರಂತೆ ಕಾಂಗ್ರೆಸ್ ಕಾರ್ಯಕರ್ತರನ್ನು ಕೊರೋನ ವಾರಿಯರ್ಸ್ ಗಳನ್ನಾಗಿ ಆಯ್ಕೆ ಮಾಡಿ ಅವರಿಗೆ ಸೂಕ್ತ ಮಾರ್ಗದರ್ಶನವನ್ನು ನೀಡಿ ಸೊಂಕು ತಗಲಿದ ವ್ಯಕ್ತಿಗಳ ಬಗ್ಗೆ ನಿಗಾ ವಹಿಸುವಂತೆ ಹಾಗೂ ಅವರಿಗೆ ವ್ಯವಸ್ಥಿತ ಸಹಾಯಕ್ಕೆ ಅನುಗುಣವಾಗಿ ಸ್ಪಂದಿಸುವಂತೆ ಕೆಲಸ ನಿರ್ವಹಿಸಲಿದ್ದಾರೆ ಎಂದರು ಹೀಗೆ ಕೆಲಸ ಮಾಡಿದ ವಾರಿಯರ್ಸ್ ಗಳಿಗೆ ಪಕ್ಷದಿಂದ ಸೇವಾ ಪ್ರಮಾಣ ಪತ್ರವನ್ನು ನೀಡಲಾಗುವುದು ಎಂದರು. ರಾಜ್ಯ ಸರ್ಕಾರ ಕೋವಿಡ್ ವಿಚಾರದಲ್ಲಿ ಕೆಲವು ಕಸುಬು ಆಧಾರಿತ ವರ್ಗದ ಜನರಿಗೆ ಘೋಷಣೆ ಮಾಡಿದ್ದ ಐದು ಸಾವಿರ ರೂ ಇನ್ನೂ ಫಲಾನುಭವಿಗಳಿಗೆ ಜಮಾ ಆಗಿಲ್ಲ ಸುಳ್ಳು ಭರವಸೆಗಳನ್ನು ನೀಡಿ ರಾಜ್ಯದ ಜನರಿಗೆ ಅನ್ಯಾಯ ಮಾಡುತ್ತಿರುವ ರಾಜ್ಯ ಬಿಜೆಪಿ ಸರ್ಕಾರದ ನ್ಯೂನತೆಗಳನ್ನು ನಮ್ಮ ಪಕ್ಷ ಎತ್ತಿಹಿಡಿದು ಬ್ರಷ್ಟಾಚಾರದ ವಿರುದ್ದ ಹೋರಾಡಲು ಕಾಂಗ್ರೆಸ್ ಪಕ್ಷ ಮುಂದಾಗುತ್ತದೆ ಎಂದರು.

      ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ರಾಮಕೃಷ್ಣಪ್ಪ ಮಾತನಾಡಿ ದೇಶದಲ್ಲಿ ಕೋರೋನ ದಿಂದ ಜನರು ಸಂಕಷ್ಟ ಪಡುತಿದ್ದರೆ ಬಿಜೆಪಿ ಪಕ್ಷವು ತುರ್ತು ಪರಿಸ್ಥಿತಿಯನ್ನು ಅರಿಯದೆ ಅಧಿಕಾರದ ಆಸೆಗಾಗಿ ರಾಜಕೀಯ ಮಾಡಿ ಮಧ್ಯಪ್ರದೇಶದಲ್ಲಿ ಸರ್ಕಾರವನ್ನು ಉರಳಿಸಿದ್ದು ಅಲ್ಲದೆ ಮಹಾರಾಷ್ಟ್ರ ಹಾಗೂ ರಾಜಸ್ಥಾನದಲ್ಲಿ ಸರ್ಕಾರವನ್ನು ಉರಳಿಸಲು ಯತ್ನಿಸುತ್ತಿದೆ ಎಂದರವರು. ರಾಜ್ಯ ಸರ್ಕಾರ ಕೋವಿಡ್ 19ನ್ನು ಕೆರಳಮಾದರಿಯಲ್ಲಿ ಹೆದರಿಸಲು ಮುಂದಾಗಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಬಿ.ಲಕ್ಕಪ್ಪ ಬ್ಲಾಕ್ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಬ್ರಹ್ಮಾನಂದ್ ಜಿ.ಪಂ.ಸದಸ್ಯ ವೈ.ಸಿ. ಸಿದ್ದರಾಮಯ್ಯ  ಮಾಜಿ ಪುರಸಭಾಧ್ಯಕ್ಷ ಸಿ.ಡಿ.ಚಂದ್ರಶೇಖರ್ಪ ಪಕ್ಷದ ವಕ್ತಾರ ಕೆ.ಜಿ.ಕೃಷ್ಣೇಗೌಡ ಮುಖಂಡರಾದ ಎಮ್ಮೆದೊಡ್ಡಿ ಜಯಣ್ಣ ಸಾಸಲು ಮಂಜುನಾಥ್ಜ ಜಯರಾಮ್ ಸೇರಿದಂತೆ ಮುಂತಾದವರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap