ATMಗಳಿಂದ ಸದ್ದಿಲ್ಲದೇ ನಾಪತ್ತೆಯಾದ 2000 ರೂಪಾಯಿ ನೋಟು..?

ಬೆಂಗಳೂರು

      ಕೆಲವು ಎಟಿಎಂ ಕೇಂದ್ರಗಳಲ್ಲಿ 2 ಸಾವಿರ ಮುಖ ಬೆಲೆಯ ನೋಟುಗಳು ದೊರೆಯದೇ ಇರುವುದರಿಂದ ಸದ್ದಿಲ್ಲದೆ ಎರಡು ಸಾವಿರ ನೋಟು ರದ್ದಾಗಿವೆಯಾ ಎನ್ನುವ ಅನುಮಾನಗಳು ಹುಟ್ಟಿಕೊಂಡಿದೆ.ಈಗಾಗಲೇ ಬಹುತೇಕ ಎಟಿಎಂನಲ್ಲಿ ಎರಡು ಸಾವಿರ ನೋಟು ಸಿಗುತ್ತಿಲ್ಲ ಅನ್ನುವ ಸುದ್ದಿಗಳು ಹರಿದಾಡುತ್ತಿವೆ. ಬಸವೇಶ್ವರ ನಗರ ಸರ್ಕಲ್, ಲಗ್ಗೆರೆ ಕ್ರಾಸ್, ಮತ್ತಿಕೆರೆ, ಬಸವೇಶ್ವರ ನಗರ, ಮಲ್ಲೇಶ್ವರಂ ಸೇರಿದಂತೆ ಬೆಂಗಳೂರಿನ ಹಲವು ಕಡೆ ಎಂಟಿಎಂಗಳಲ್ಲಿ ಹಣ ತೆಗೆದು ಪರಿಶೀಲಿಸಿದಾಗ ಯಾವುದರಲ್ಲೂ 2 ಸಾವಿರ ಮುಖ ಬೆಲೆಯ ನೋಟು ಲಭ್ಯವಾಗಿಲ್ಲ.

       ನಗರದ ಮೈಸೂರು ಬ್ಯಾಂಕ್ ಸರ್ಕಲ್ ಬಳಿಯೂ ಇದೇ ಪರಸ್ಥಿತಿಯಾಗಿದೆ.ಈ ಎಟಿಎಂನಲ್ಲಿ ಹಣ ಡ್ರಾ ಮಾಡಲು ಬರುವ ಗ್ರಾಹಕರ ಕೈಗೆ ಬರೀ 100, 500 ರೂ. ನೋಟುಗಳು ಮಾತ್ರ ಸಿಗುತ್ತಿವೆ. ಇದರಿಂದ ದೊಡ್ಡ ಮಟ್ಟದ ಹಣವನ್ನ ಡ್ರಾ ಮಾಡಿಕೊಂಡು ಹೋಗೋದಕ್ಕೆ ಸಮಸ್ಯೆಯಾಗುತ್ತಿದೆ ಎಂದು ಗ್ರಾಹಕರು ಹೇಳುತ್ತಿದ್ದಾರೆ.ನೋಟು ಪ್ರಿಂಟಿಂಗ್ ಏನಾದರು ಕಡಿಮೆಯಾಗಿದೆಯಾ? ಇಲ್ಲಾ 2 ಸಾವಿರ ನೋಟ್ ಏನಾದರು ರದ್ದಾಗಿವೆಯಾಎಂದು ಜನರು ಗೊಂದಲದಲ್ಲಿದ್ದು, ಮತ್ತೆ ನೋಟ್ ಬ್ಯಾನ್ ಭಯ ಜನಸಾಮಾನ್ಯರನ್ನು ಕಾಡಲು ಆರಂಭಿಸಿದೆ ಆದರೆ ಆರ್‍ಬಿಐ 2 ಸಾವಿರ ಮುಖಬೆಲೆಯ ನೋಟುಗಳ ಚಲಾವಣೆ ರದ್ದು ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link