ತುಮಕೂರು:
ಅಪರಿಚಿತ ವ್ಯಕ್ತಿಯೊಬ್ಬರು ಮಹಿಳೆಯೊಬ್ಬರ ಎಟಿಎಂ ಕಾರ್ಡ್‍ನಿಂದ 20 ಸಾವಿರ ರೂ.ಗಳನ್ನು ಪಡೆದು ವಂಚಿಸಿರುವ ಪ್ರಕರಣ ಮಧುಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ವಂಚನೆಗೊಳಗಾದ ಮಹಿಳೆಯನ್ನು ಕಸಬಾ ಹೋಬಳಿಗೆ ಸೇರಿದ ಮರಿತಿಮ್ಮನಹಳ್ಳಿಯ ರೂಪಾ ಎಂದು ತಿಳಿದು ಬಂದಿದೆ.
ಈಕೆ ಬಾಣಂತಿಯಾಗಿದ್ದರಿಂದ ಓಡಾಡಲು ಆಗದ ಕಾರಣ ಆಕೆಯ ಹಣದ ಬಾಬ್ತು ಬಡವನಹಳ್ಳಿ ಎಸ್.ಬಿ.ಐ. ಬ್ಯಾಂಕಿನ ಅಕೌಂಟ್ ಇತ್ತು. ಗಂಡ ನರಸಪ್ಪ ಅವರು ಮಧುಗಿರಿಗೆ ಆ.30 ರ ಬೆಳಗ್ಗೆ 11.40ರಲ್ಲಿ ಮಧುಗಿರಿ ಎಸ್‍ಬಿಐ ಬ್ಯಾಂಕಿನ ಎಟಿಎಂ ಸೆಂಟರ್‍ಗೆ ಹೋಗಿ ನನ್ನ ಮಗಳ ಎಟಿಎಂ ಕಾರ್ಡ್ ಬಳಸಿ ಹಣ ಡ್ರಾ ಮಾಡಲು ಹೋದಾಗ ಅದೇ ಸಮಯಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ಅಲ್ಲಿಗೆ ಬಂದು ಎಟಿಎಂ ಕಾರ್ಡ್‍ನ್ನು ಮೆಷಿನ್ ಒಳಗೆ ಹಾಕುತ್ತಿದ್ದನು. ಆಗ ನಾನು ನನ್ನ ಎಟಿಎಂ ಕಾರ್ಡ್‍ನ್ನು ಆತನಿಗೆ ಕೊಟ್ಟು ಹಣ ಡ್ರಾ ಮಾಡಿಕೊಡುವಂತೆ ಕೇಳಿಕೊಂಡಾಗ ಸದರಿ ವ್ಯಕ್ತಿಯು ಆತನ ಬಳಿ ಇದ್ದ ನನ್ನ ಯಾವುದೋ ಕಾರ್ಡ್‍ನ್ನು ಎಟಿಎಂ ಮಿಷಿನ್‍ನಲ್ಲಿ ಹಾಕಿ ಈಗ ಹಣ ಬರುತ್ತದೆ ತೆಗೆದುಕೊಳ್ಳಿ ಎಂದೇಳಿ ಅಲ್ಲಿಂದ ಹೊರಟು ಹೋದ.
ನಂತರ ನನ್ನ ಮಗಳ ಮೊಬೈಲ್ ನಂಬರ್‍ಗೆ 20 ಸಾವಿರ ರೂ. ಹಣ ಪೆಟ್ರೋಲ್ ಬಂಕ್‍ನಲ್ಲಿ ಡ್ರಾ ಆಗಿರುವ ಬಗ್ಗೆ ಮೆಸೇಜ್ ಬಂದಿತು. ಹಣ ಡ್ರಾ ಮಾಡಿದ ವ್ಯಕ್ತಿ ಯಾರೆಂದು ಗೊತ್ತಿಲ್ಲ. ಆದ್ದರಿಂದ ನನಗೆ ಮೊಸ ಮಾಡಿರುವ ವ್ಯಕ್ತಿಯನ್ನು ಪತ್ತೆ ಹಚ್ಚುವಂತೆ ನಾಗರತ್ನಮ್ಮ ಎಂಬುವರು ಮಧುಗಿರಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
