ತುಮಕೂರು
ಬೆಂಗಳೂರು ವಿಭಾಗ ಮತ್ತು ಎಸ್. ನಾಗರಾಜಪ್ಪ ಅಬಕಾರಿ ಉಪ ಆಯುಕ್ತರು, ತುಮಕೂರು ಜಿಲ್ಲೆರವರ ಮಾರ್ಗದರ್ಶನದಲ್ಲಿ, ತುಮಕೂರು ಉಪ ವಿಭಾಗ ಮತ್ತು ಮೂರು ವಲಯದ ನಿರೀಕ್ಷಕರು ಮತ್ತು ಸಿಬ್ಬಂದಿ ಒಟ್ಟು 683 ಕಡೆ ಅಕ್ರಮ ಮದ್ಯ ಮಾರಾಟ ಕೇಂದ್ರಗಳ ಮೇಲೆ ದಾಳಿ ಮಾಡಿ 203 ಆರೋಪಿಗಳನ್ನು ಬಂಧಿಸಿದ್ದಾರೆ.
ಅಬಕಾರಿ ಕಾನೂನುಗಳನ್ನು ಉಲ್ಲಂಘಿಸಿದ ಸನ್ನದುಗಳ ಮೇಲೆ ದಾಖಲಿಸಿದ ಮೊಕದ್ದಮೆಗಳು ಸೇರಿದಂತೆ ಒಟ್ಟು 292 ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ಹಳ್ಳಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲು ಸಾಗಾಣಿಕೆ ಮಾಡಲಾಗುತ್ತಿದ್ದ ಎರಡು ಕಾರುಗಳು ಮತ್ತು 12 ದ್ವಿಚಕ್ರ ವಾಹನಗಳನ್ನು ರಸ್ತೆಗಸ್ತಿನ ಮೂಲಕ ಪತ್ತೆ ಮಾಡಿ, 502 ಲೀಟರ್ ಮದ್ಯ, 45 ಲೀಟರ್ ಬಿಯರ್ ಹಾಗೂ 600 ಗ್ರಾಂ ಗಾಂಜಾವನ್ನು ಇಲಾಖೆಗೆ ವಶಪಡಿಸಿಕೊಂಡು ಇಲ್ಲಿಯವರೆಗೆ ಒಟ್ಟು 25,25,000 ರೂ.ಗಳ ದಂಡವನ್ನು ವಸೂಲಿ ಮಾಡಿ ಸರ್ಕಾರಕ್ಕೆ ಪಾವತಿಸಿದೆ.
ಮುಂದೆಯೂ ಸಹ ಹಳ್ಳಿಗಳಲ್ಲಿ, ಪೆಟ್ಟಿಗೆ ಅಂಗಡಿಗಳಲ್ಲಿ ಮತ್ತು ಮಾಂಸಾಹಾರ ಹೋಟೆಲ್‍ಗಳಲ್ಲಿ ಅಕ್ರಮ ಮದ್ಯ ಸಂಗ್ರಹಣೆ ಹಾಗೂ ಮಾರಾಟದಂತಹ ಸ್ಥಳಗಳ ಮೇಲೆ ನಿರಂತರವಾಗಿ ದಾಳಿ ಮಾಡಿ ಅಬಕಾರಿ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಸಾರ್ವಜನಿಕರು ಅಬಕಾರಿ ಅಕ್ರಮಗಳ ಬಗ್ಗೆ ಮಾಹಿತಿ ನೀಡುವುದರೊಂದಿಗೆ ಇಲಾಖೆಗೆ ಸಹಕರಿಸಲು ಕೋರಿದೆ. ಮದ್ಯ ಪಾನೀಯರು ಅಗತ್ಯವಿದ್ದಾಗ ಅಧಿಕೃತ ಸನ್ನದು ಹೊಂದಿರುವ ಮದ್ಯದಂಗಡಿಗಳಲ್ಲಿಯೇ ಮದ್ಯವನ್ನು ಖರೀದಿಸಿ ಉಪಯೋಗಿಸಲು ಇಲಾಖೆಯು ಮನವಿ ಮಾಡಿಕೊಳ್ಳುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ