ಮಿಡಿಗೇಶಿ
ಮಿಡಿಗೇಶಿ ಹೋಬಳಿ ವ್ಯಾಪ್ತಿಯ ಗಿರಿಯಮ್ಮನಪಾಳ್ಯದ ಮಂಜು ಎನ್ನುವವರಿಗೆ ಸೇರಿದ ಜಮೀನಿನಲ್ಲಿ ಏರ್‍ಟೆಲ್ ಕಂಪನಿಯು ಟವರ್ ಅಳವಡಿಸಿದೆ. ಸದರಿ ಏರ್‍ಟೆಲ್ ಟವರ್‍ಗೆ 24 ಬ್ಯಾಟರಿಗಳನ್ನು ಅಳವಡಿಸಲಾಗಿತ್ತು. ಅ. 20 ರಂದು ಬೆಳಗಿನ ಜಾವದಲ್ಲಿ 3.25ರಲ್ಲಿ ಟಾಟಾಸುಮೋ ವಾಹನದಲ್ಲಿ ಬಂದ ಕಳ್ಳರು, 23 ಬ್ಯಾಟರಿಗಳನ್ನು ಕದ್ದು ಪರಾರಿಯಾಗಿರುವ ಬಗ್ಗೆ ವರದಿಯಾಗಿದೆ. ಒಂದು ಬ್ಯಾಟರಿಯ ಬೆಲೆ 1.30 ಲಕ್ಷದಿಂದ 1.50 ಲಕ್ಷ ರೂ. ಎಂದು ಹೇಳಲಾಗಿದೆ.
ಏರ್‍ಟೆಲ್ ಕಂಪನಿಯು ಸೆಕ್ಯೂರಿಟಿರವರನ್ನು ನೇಮಿಸದೆ ಇರುವುದು ಈ ಕಳ್ಳತನಕ್ಕೆ ದಾರಿಯಾಗಿದೆ. ಕಂಪನಿಗೆ ಸೇರಿದ ಟೆಕ್ನಿಷಿಯನ್ ಜಗದೀಶ್ ಹಾಗೂ ಸೂಪರ್ ವೈಸರ್ ಗಿರೀಶ್ ಮಧುಗಿರಿಯಿಂದ ಪಾವಗಡ ತಾಲ್ಲೂಕಿನಲ್ಲಿರುವ ಏರ್‍ಟೆಲ್ ಟವರ್‍ಗಳ ವೀಕ್ಷಣೆಗೆ ಹೋಗಿದ್ದವರು ತಮ್ಮ ಕಾರುಗಳಲ್ಲಿ ಟವರ್ ಬಳಿ ಬಂದಿದ್ದಾರೆ. ಅದೇ ಸಮಯಕ್ಕೆ ಟಾಟಾಸುಮೋದಲ್ಲಿ ಕಳ್ಳರು ವೇಗವಾಗಿ ಹೊರಟು ಹೋಗಿರುತ್ತಾರೆ. ಈ ಬಗ್ಗೆ ಗಿರೀಶ್ ಮಿಡಿಗೇಶಿ ಪೋಲೀಸ್ ಠಾಣೆಗೆ ಲಿಖಿತ ದೂರನ್ನು ನೀಡಿದ್ದು, ಪ್ರಕರಣ ದಾಖಲಾಗಿದೆ. ಪಾವಗಡ ತಾಲ್ಲೂಕಿನ ಲಿಂಗದಹಳ್ಳಿ ಬಳಿಯ ಏರ್‍ಟೆಲ್ ಟವರ್ ನಲ್ಲಿಯೂ ಅ. 18 ರ ರಾತ್ರಿ ಬ್ಯಾಟರಿ ಕಳುವಾಗಿರುವುದಾಗಿ ವರದಿಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ