ತುಮಕೂರು
ವಿಷಯುಕ್ತ ನೀರು ಸೇವಿಸಿ 23 ಕುರಿಗಳು ಸ್ಥಳದಲ್ಲೇ ಅಸು ನೀಗಿರುವ ಘಟನೆ ತುಮಕೂರು ತಾಲ್ಲೂಕು ವಸಂತ ನರಸಾಪುರದ ಬಳಿ ಭಾನುವಾರ ಸಂಜೆ ವರದಿಯಾಗಿದೆ.
ತರೂರು ಬ್ರಹ್ಮಸಂದ್ರ, ಚಿಕ್ಕದಾಸರ ಹಳ್ಳಿಯ ಶಿವಣ್ಣ, ಗಂಗಮ್ಮ ಹಾಗು ಸಿದ್ದಗಂಗಮ್ಮ ಎಂಬುವರಿಗೆ ಸೇರಿದ ಕುರಿಗಳು ಇವುಗಳಾಗಿದ್ದು ಇನ್ನು ಕೆಲವು ಕುರಿಗಳು ಅಸ್ವಸ್ಥತೆಗೆ ಒಳಗಾಗಿವೆ. ವಸಂತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಸಾಕಷ್ಟು ನೀರು ಮೇವು ಇದೆ. ಆದಕಾರಣ ಸಾಮಾನ್ಯವಾಗಿ ಕುರಿಗಾಹಿಗಳು ಈ ಪ್ರದೇಶಕ್ಕೆ ತಮ್ಮ ಕುರಿ ಮತ್ತು ದನ ಕರುಗಳನ್ನು ಮೇಯಿಸಲು ಬರುವುದು ರೂಢಿ. ಎಂದಿನಂತೆ ಮೇಲ್ಕಂಡ ಕುರಿಗಾಹಿಗಳು ಕುರಿಗಳನ್ನು ಮೇಯಿಸಲು ಈ ಪ್ರದೇಶಕ್ಕೆ ªಬಂದಿದ್ದಾರೆ. ವಾಪಸ್ ಹೋಗುವಾಗ ಅಲ್ಲಿರುವ ಸಣ್ಣ ಸಣ್ಣ ಕಟ್ಟೆಗಳಲಿ ನೀರು ಕುಡಿದಿವೆ. ಕ್ರಮೇಣ ಗಂಟಲು ತೊಂದರೆ ಉಂಟಾಗಿ 23 ಕುರಿಗಳು ಸ್ಥಳದಲ್ಲೇ ಅಸು ನೀಗಿವೆ.
ಕುರಿಗಳನ್ನು ಕಳೆದುಕೊಂಡ ಕುರಿಗಾಹಿಗಳು ಮಮ್ಮಲ ಮರುಗುತ್ತಿದ್ದ ದೃಶ್ಯ ಅಲ್ಲಿದ್ದವರ ಹೃದಯ ಕಲಕುವಂತಿತ್ತು. ಇಷ್ಟು ದಿನಗಳ ಕಾಲ ಕಷ್ಟಪಟ್ಟು ಈ ಕುರಿಗಳನ್ನು ಸಾಕಿದ್ದೇವೆ. ಈಗ ದಢೀರ್ ಎಂದು ಒಂದೇ ಬಾರಿಗೆ ಇಷ್ಟು ಕುರಿಗಳು ಸತ್ತು ಹೋದರೆ ಏನು ಮಾಡಬೇಕು ಎಂದು ಶಿವಣ್ಣ ಅಸಹಾಯಕತೆ ವೈಕ್ತ ಪಡಿಸಿದ.
ಸ್ಥಳಕ್ಕೆ ಕೋರಾ ಠಾಣೆಯ ಸಬ್ ಇನ್ಸ ಪೆಕ್ಟರ್ ಹರೀಶ್ ಕುಮಾರ್ ಹಾಗು ಸಿಬ್ಬಂದಿ ಭೇಟಿ ನೀಡಿದ್ದರು. ಪಶು ವೈದ್ಯರಾದ ಡಾ. ಲೋಕೇಶ್, ಹಾಗು ಶ್ರೀಧರ್ ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿದರು. ಈ ಸಂದರ್ಭದಲ್ಲಿ ಆ ಸುತ್ತಮುತ್ತಲ ಗ್ರಾವiದ ಹಲವಾರು ಜನ ಸೇರಿದ್ದರು.
ಪತ್ರಿಕೆಯೊಂದಿಗೆ ಮಾತನಾಡಿದ ಭಾರತೀಯ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಕೋಡಿಹಳ್ಳಿ ಜಗದೀಶ್ ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಲವು ಕಾರ್ಖನೆಗಳು ವಿಷಕಾರಿಯಾಗಿರುವ ಲವಣಾಂಶಗಳನ್ನು ಹೊರಹಾಕುತ್ತಿವೆ. ಕೆಲವು ಕಡೆ ಮಣ್ಣಿನೊಳಗೆ ಹೊತು ಹೋಗುತ್ತಿದ್ದರೆ ಇನ್ನು ಕೆಲವು ಕಡೆ ನೀರು ನೇರವಾಗಿ ಅಲ್ಲಿಯೇ ಇರುವ ಸಣ್ಣ ಸಣ್ಣ ಕಟ್ಟೆಗಳಿಗೆ ಹರಿದು ಹೋಗುತ್ತದೆ. ವಿಷಕಾರಿ ಲವಣಾಂಶ ಇರುವ ಇಂತಹ ನೀರು ಕುಡಿದೇ ಕುರಿಗಳು ಸತ್ತು ಹೋಗಿವೆ. ವಿಷಯುಕ್ತ ನೀರು ಭೂಮಿಯೊಳಗೆ ಸೇರುತ್ತಿರುವುದರಿಂದ ಮನುಷ್ಯರಿಗೂ ಅಪಾಯವಿದೆ. ಇಲ್ಲಿನ ಕಾರ್ಖನೆಗಳು ನೈರ್ಮಲ್ಯ ಕಾಪಾಡುವ ಹೊಣೆ ಹೊತ್ತಂತೆ ಕಾಣುತ್ತಿಲ್ಲ. ಮುಂದಿನ ದಿನಗಳ್ಲಿ ಇದು ಮತ್ತಷ್ಟು ಅಪಾಯ ತಂದೊಡ್ಡಲಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ