ತುಮಕೂರು : ಹೊಸದಾಗಿ 25 ಸೋಂಕು ಪತ್ತೆ..!

ತುಮಕೂರು

     ಜಿಲ್ಲೆಯಲ್ಲಿ ಭಾನುವಾರ 25 ಕೊರೊನ ಸೋಂಕು ಪ್ರಕರಣ ವರದಿಯಾಗಿವೆ. ಇದರಲ್ಲಿ ತುಮಕೂರು ನಗರದ 11 ಜನರಲ್ಲಿ ಕೋವಿಡ್ ವೈರಸ್ ಖಚಿತವಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಪಾಸಿಟೀವ್ ದೃಢಪಟ್ಟವರ ಸಂಖ್ಯೆ 478ಕ್ಕೆ ಏರಿದೆ. ಮಧುಗಿರಿ ತಾಲ್ಲೂಕಿನ ಒಬ್ಬರು ಮೃತಪಟ್ಟು, ಜಿಲ್ಲೆಯಲಿ ಕೊರೊನಾ ಸೋಂಕಿನಿಂದ ಸಾವಿಗೀಡಾದವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.

     ತುಮಕೂರು ತಾಲ್ಲೂಕಿನಲ್ಲಿ 11, ತುರುವೇಕೆರೆ ತಾಲ್ಲೂಕಿನಲ್ಲಿ 7, ಪಾವಗಡ ತಾಲ್ಲೂಕಿನಲ್ಲಿ 3, ಕುಣಿಗಲ್ ತಾಲ್ಲೂಕಿನಲ್ಲಿ 2, ಮಧುಗಿರಿ ಹಾಗೂ ಕೊರಟಗೆರೆ ತಾಲ್ಲೂಕಿನಲ್ಲಿ ತಲಾ ಒಂದು ಪಾಸಿಟೀವ್ ಪ್ರಕರಣ ವರದಿಯಾಗಿವÉ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.

     ಚಿಕಿತ್ಸೆ ಪಡೆಯುತ್ತಿರುವವರಲ್ಲಿ 313 ಜನರಲ್ಲಿ ಸೋಂಕು ಸಕ್ರಿಯವಾಗಿದೆ, ಕೊರೊನಾ ಸೋಂಕಿನಿಂದ ಇದೂವರೆಗೆ 11 ಜನ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.

    ಈವರೆಗೆ ಜಿಲ್ಲೆಯಲ್ಲಿ ಒಟ್ಟು 478 ಸೋಂಕು ಪ್ರಕರಣ ವರದಿಯಾಗಿದ್ದು, ತುಮಕೂರು ತಾಲ್ಲೂಕಿನಲ್ಲಿ ಅತಿಹೆಚ್ಚು ಪ್ರಕರಣಗಳಿವೆ, ಇದೂವರೆಗೆ ತುಮಕೂರು ತಾ. 176, ಪಾವಗಡ ತಾ. 57, ಶಿರಾ 50, ಮಧುಗಿರಿ ತಾ. 44, ಕೊರಟಗೆರೆ ತಾ. 34, ಗುಬ್ಬಿ ತಾ. 28. ಚಿಕ್ಕನಾಯಕನಹಳ್ಳಿ ತಾ. 28, ಕುಣಿಗಲ್ ತಾ. 26, ತಿಪಟೂರು ತಾ. 18, ತುರುವೇಕೆರೆ ತಾ. 17 ಪ್ರಕರಣ ವರದಿಯಾಗಿವೆ.

ತಿಪಟೂರು

     ತಿಪಟೂರಿನ ಕೆ.ಆರ್.ಬಡಾವಣೆಯ 50 ವರ್ಷದ ಪುರುಷ, ರಾಮಚಂದ್ರಪುರದ 52 ವರ್ಷದ ಗಂಡಸು, ಅರಸು ನಗರದ 48 ವರ್ಷದ ಗಂಡಸಿಗೆ ಕೊರೊನಾ ದೃಢಪಟ್ಟಿದೆ.ಚಿಕ್ಕನಾಯಕನಹಳ್ಳಿ ತಾಲ್ಲೂಕು ಶೆಟ್ಟಿಕೆರೆಯ 54 ವರ್ಷದ ಪುರುಷ ಹಾಗೂ ತುರುವೇಕೆರೆ ತಾಲ್ಲೂಕು ದಬ್ಬೇಘಟ್ಟದ 23 ವರ್ಷದ ಯುವತಿಗೆ ಸೋಂಕು ತಗುಲಿದೆ.

     ಮಧುಮೇಹ, ಅಧಿಕ ರಕ್ತದ ಒತ್ತಡ, ಜ್ವರ, ಕೆಮ್ಮು, ಶೀತ ಇತರೆ ರೋಗ ಲಕ್ಷಣಗಳಿದ್ದರೆ ತಕ್ಷಣ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ ಎಂದು ಡಿಹೆಚ್‍ಓ ಡಾ.ನಾಗೇಂದ್ರಪ್ಪ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.ವೈಯಕ್ತಿಕ ಸ್ವಚ್ಛ್ಚತೆಗಾಗಿ ಸ್ವಚ್ಛಗೊಳಿಸುವ ದ್ರಾವಣ, ನೀರು ಮತ್ತು ಸೋಪು ಬಳಸಿ ಆಗಾಗ ಕೈಗಳನ್ನು ತೊಳೆದುಕೊಳ್ಳಬೇಕು. ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು ಕಡ್ಡಾಯ. ಸಾರ್ವಜನಿಕವಾಗಿ ಗುಂಪು ಗೂಡದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದ್ದಾರೆ.

ತುಮಕೂರು ನಗರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳ

     ತುಮಕೂರು ಜಿಲ್ಲೆಯಲ್ಲಿ ಪ್ರತಿದಿನ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಆರಂಭದಲ್ಲಿ ನಗÀರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಸೋಂಕು ಈಗ ಹಳ್ಳಿಗಳಿಗೂ ವ್ಯಾಪಿಸಿ ಆತಂಕ ಉಂಟು ಮಾಡಿದೆ.ಜಿಲ್ಲೆಯಲ್ಲಿ ಎಲ್ಲಾ ತಾಲ್ಲೂಕುಗಳೂ ಕೊರೊನಾ ಬಾಧಿತವಾಗುತ್ತಿವೆ. ಸೋಂಕಿತರ ಸಂಖ್ಯೆ ಹೆಚ್ಚಾಗಿ, ನಿಯಂತ್ರಣ ಸವಾಲಾಗಿದೆ.

     ಭಾನುವಾರದವರೆಗೆ ಜಿಲ್ಲೆಯಲ್ಲಿ 478 ಜನರಲ್ಲಿ ಸೋಂಕು ಖಚಿತವಾಗಿದೆ. ತುಮಕೂರು ತಾಲ್ಲೂಕಿನಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗುತ್ತವೆ. ತಾಲ್ಲೂಕಿನಲ್ಲಿ ಇದೂವರೆಗೆ 176 ಜನರಲ್ಲಿ ಸೋಂಕು ದೃಢಪಟ್ಟಿದೆ. ಆಗಿವೆ. ತುಮಕೂರು ನಗರದಲ್ಲಿ ಸೋಂಕಿನ ಪ್ರಮಾಣ ಏರಿಕೆಯಾಗುತ್ತಲೇ ಇದೆ. ಜಿಲ್ಲೆಯಲ್ಲಿ ಕೊರೊನಾದಿಂದ ಸಾವಿಗೀಡಾದ 14 ಜನರಲ್ಲಿ ತುಮಕೂರು ತಾಲ್ಲೂಕಿನವರೇ 10 ಜನ. ಶಿರಾ, ಕೊರಟಗೆರೆ, ಮಧುಗಿರಿ ಹಾಗೂ ಕುಣಿಗಲ್ ತಾಲ್ಲೂಕಿನಲ್ಲಿ ಒಬ್ಬೊಬ್ಬರು ಮೃತಪಟ್ಟಿದ್ದಾರೆ. ಕೊರೊನಾ ವ್ಯಾಪಕಗೊಳ್ಳುತ್ತಿರುವ ರಾಜಧಾನಿ ಬೆಂಗಳೂರು ಸಂಪರ್ಕದಿಂದ ತುಮಕೂರು ನಗರಕ್ಕೆ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿದೆ, ಸೋಂಕಿತರ ಪ್ರವಾಸದ ಮಾಹಿತಿಯಿಂದ ಖಚಿತವಾಗಿದೆ.

      ರೋಗ ಲಕ್ಷಣ ಇರುವ 1395 ಜನ ಆಸ್ಪತ್ರೆಗಳಲ್ಲಿ ನಿಗಾವಣೆಯಲ್ಲಿದ್ದಾರೆ. ಇವರ ಗಂಟಲು ದ್ರವದ ಪರೀಕ್ಷೆಯ ವರದಿ ಬರಬೇಕಾಗಿದೆ. ಇವರಲ್ಲಿ ಹೆಚ್ಚಿನ ಜನರಿಗೆ ಕೊರೊನಾ ಸೋಂಕು ಕಂಡುಬರುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.ಜಿಲ್ಲೆಯ 17 ಫೀವರ್ ಕ್ಲಿನಿಕ್‍ಗಳಲ್ಲಿ ಪ್ರತಿ ನಿತ್ಯ 500-600 ಜನರ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಇವರಲ್ಲಿ ಬಹುತೇಕರಿಗೆ ಜ್ವರ, ನೆಗಡಿ, ಕೆಮ್ಮು, ಉಸಿರಾಟದ ಸಮಸ್ಯೆ ಕಂಡುಬರುತ್ತಿದೆ. ಇವರ ಗಂಟಲ ದ್ರವ ಪಡೆದು ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ಇವುಗಳ ಪರೀಕ್ಷೆ ನಂತರ ಇನ್ನೆಷ್ಟು ಸೋಂಕು ವರದಿಗಳು ಬರಬಹುದೋ ಎಂಬುದು ಆತಂಕದ ವಿಚಾರ.

      ತುಮಕೂರು ಜಿಲ್ಲಾಆಸ್ಪತ್ರೆಯಲ್ಲಿ ಮೂರು ತಿಂಗಳ ಹಿಂದೆಯೇ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಿ, ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತದೆ. ಸೋಂಕಿತರ ಸಂಖ್ಯೆ ಹೆಚ್ಚಾಗಿ ಕ್ಯಾತ್ಸಂದ್ರದÀ ಟ್ರಕ್‍ಟರ್ಮಿನಲ್ಲಿ ಇದ್ದ ಜಾಗದಲ್ಲಿ ನಿರ್ಮಾಣವಾಗುತ್ತಿರುವ ಒಳಾಂಗಣ ಕ್ರೀಡಾಂಗಣವನ್ನು ಕೋವಿಡ್ ಕೇರ್ ಸೆಂಟರ್ ಮಾಡಿ, ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿ ಚಿಕಿತ್ಸಾ ನಿರ್ವಹಣೆ, ವೈದ್ಯಕೀಯ ಸಬ್ಬಂದಿ ಕೊರತೆ ಉಂಟಾಗಬಹುದು, ಈ ಕಾರಣದಿಂದ ಕೋವಿಡ್ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳ ಸಹಕಾರ ಪಡೆಯಲಾಗುತ್ತದೆ, ತುಮಕೂರು ಜಿಲ್ಲೆಯಲ್ಲೂ ಈ ಪ್ರಯತ್ನ ನಡೆದಿದೆ.

      ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ವಿಪರೀತ ಏರಿಕೆಯಾಗುತ್ತದೆ. ಸರ್ಕಾರ ಬೆಂಗಳೂರಿನಲ್ಲಿ ಒಂದು ವಾರ ಲಾಕ್‍ಡೌನ್ ಮಾಡಲು ಘೋಷಿಸಿದೆ. ಈ ಪರಿಸ್ಥಿತಿಯಲ್ಲಿ ತುಮಕೂರು ಜಿಲ್ಲೆಯಲ್ಲೂ ಲಾಕ್‍ಡೌನ್ ಮಾಡಬೇಕೆ ಎಂಬ ವಿಚಾರ ಚರ್ಚೆಗೆ ಬಂದಿದೆ. ಸೋಂಕಿನ ಸಂಪರ್ಕಕಡಿತಗೊಳಿಸಲು ಲಾಕ್‍ಡೌನ್ ಮಾಡಬೇಕೆ ಅಥವಾ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಸೋಂಕು ನಿಯಂತ್ರಣಾ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಲು ಜಾಗೃತಿ ಮೂಡಿಸಬೇಕೆ ಎಂಬುದು ಈಗಿನ ಪ್ರಶ್ನೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap