ಹೊನ್ನಾಳಿ:
ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗಳು ಮಂಗಳವಾರದಿಂದ ಪ್ರಾರಂಭವಾದವು. ಮಂಗಳವಾರ ನಡೆದ ಲೆಕ್ಕಶಾಸ್ತ್ರ, ಗಣಿತಶಾಸ್ತ್ರ ಮತ್ತು ಸಮಾಜಶಾಸ್ತ್ರ ಪರೀಕ್ಷೆಗಳು ಶಾಂತಿಯುತವಾಗಿ ನೆರವೇರಿದವು.
ಇಲ್ಲಿನ ಟಿ.ಬಿ. ವೃತ್ತದ ಸರಕಾರಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಒಟ್ಟು 362 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಲೆಕ್ಕಶಾಸ್ತ್ರ ವಿಷಯದಲ್ಲಿ ಪರೀಕ್ಷೆಗೆ ನೋಂದಾಯಿಸಿಕೊಂಡ 168 ವಿದ್ಯಾರ್ಥಿಗಳ ಪೈಕಿ 155, ಗಣಿತಶಾಸ್ತ್ರ ವಿಷಯದಲ್ಲಿ ಪರೀಕ್ಷೆಗೆ ನೋಂದಾಯಿಸಿಕೊಂಡ 129 ವಿದ್ಯಾರ್ಥಿಗಳ ಪೈಕಿ 121 ಮತ್ತು ಸಮಾಜಶಾಸ್ತ್ರ ವಿಷಯದಲ್ಲಿ ಪರೀಕ್ಷೆಗೆ ನೋಂದಾಯಿಸಿಕೊಂಡ 65 ವಿದ್ಯಾರ್ಥಿಗಳ ಪೈಕಿ 61 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಒಟ್ಟು 25 ವಿದ್ಯಾರ್ಥಿಗಳು ಗೈರಾಗಿದ್ದರು.
ಹೊನ್ನಾಳಿಯ ಟಿ.ಬಿ. ವೃತ್ತದ ಸರಕಾರಿ ಪದವಿ ಪೂರ್ವ ಕಾಲೇಜು, ಎಂ.ಎಸ್. ಪಿಯು ಕಾಲೇಜು, ಚನ್ನೇಶ್ವರ ಗ್ರಾಮಾಂತರ ಪದವಿ ಪೂರ್ವ ಕಾಲೇಜು, ತಾಲೂಕಿನ ಕೂಲಂಬಿ-ಕುಂದೂರು ಸರಕಾರಿ ಪದವಿ ಪೂರ್ವ ಕಾಲೇಜು, ತಾಲೂಕಿನ ಅರಬಗಟ್ಟೆ ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜು, ಸಾಸ್ವೆಹಳ್ಳಿಯ ಸರಕಾರಿ ಪದವಿ ಪೂರ್ವ ಕಾಲೇಜು, ಆದಿ ದ್ರಾವಿಡ ವಿದ್ಯಾ ಸಂಸ್ಥೆಯ ಪದವಿ ಪೂರ್ವ ಕಾಲೇಜು, ನ್ಯಾಮತಿ ತಾಲೂಕಿನ ಚೀಲೂರು ಸರಕಾರಿ ಪದವಿ ಪೂರ್ವ ಕಾಲೇಜು, ಸವಳಂಗ ಸರಕಾರಿ ಪದವಿ ಪೂರ್ವ ಕಾಲೇಜು, ಜೀನಹಳ್ಳಿ ಸರಕಾರಿ ಪದವಿ ಪೂರ್ವ ಕಾಲೇಜು, ಬೆಳಗುತ್ತಿಯ ಶ್ರೀ ತೀರ್ಥಲಿಂಗೇಶ್ವರ ಪದವಿ ಪೂರ್ವ ಕಾಲೇಜು, ನ್ಯಾಮತಿ ಪಟ್ಟಣದ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜು, ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಟಿ.ಬಿ. ವೃತ್ತದ ಸರಕಾರಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದರು ಎಂದು ಜಿಜೆಸಿ ಪ್ರಾಂಶುಪಾಲ, ದ್ವಿತೀಯ ಪಿಯುಸಿ ಪರೀಕ್ಷಾ ಮುಖ್ಯ ಅಧೀಕ್ಷಕ ನಾರಾಯಣ ನಾಯ್ಕರ್ ಮಾಹಿತಿ ನೀಡಿದರು.
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳ ವಿಶೇಷ ಜಾಗೃತ ದಳದ ಸದಸ್ಯ, ದಾವಣಗೆರೆಯ ಎಜಿಬಿ ಪದವಿ ಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕ ಪ್ರದೀಪ್, ಪ್ರಶ್ನೆಪತ್ರಿಕೆಗಳ ಸಹ ಮುಖ್ಯ ಅಧೀಕ್ಷಕ, ಜಗಳೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ರಂಗಪ್ಪ, ಕಚೇರಿ ಅಧೀಕ್ಷಕ ಎಚ್. ಬಸವರಾಜ್, ಉತ್ತರ ಪತ್ರಿಕೆ ಪಾಲಕ ಸುರೇಶ್ ಲಮಾಣಿ ಇತರರು ಪರೀಕ್ಷಾ ಉಸ್ತುವಾರಿ ವಹಿಸಿಕೊಂಡಿದ್ದರು.
ಉಪನ್ಯಾಸಕರಾದ ಬಿ.ಇ. ಪ್ರಕಾಶ್, ಬಿ.ಜೆ. ಸುಪ್ರಿಯಾ, ಡಿ. ಲತಾ, ಕೆ. ನಾಗರಾಜ್, ಸುಮತಿ, ಸಲ್ಮಾ ಬಾನು, ಡಾ. ಅರುಣ್ ಶಿಂಧೆ, ಉಮ್ಮೇಹಾನಿ, ಬಿ. ನೇತ್ರಾವತಿ, ಚನ್ನೇಶ್.ಬಿ.ಇದರಮನಿ, ಕೆ. ನೇತ್ರಾವತಿ, ಕಾವ್ಯ, ಶಾಲಿನಿ, ಪ್ರತಿಮಾ, ಐಟಿಐ ಕಾಲೇಜು ಉಪನ್ಯಾಸಕ ಶಶಿಧರ್, ಪ್ರೌಢಶಾಲಾ ವಿಭಾಗದ ಶಿಕ್ಷಕಿಯರಾದ ಪುಷ್ಪಾ ಹೊಂಬಾಳೆ, ಶೋಭಾ ಮತ್ತಿತರರು ಕೊಠಡಿ ಮೇಲ್ವಿಚಾರಕರಾಗಿ ಕಾರ್ಯ ನಿರ್ವಹಿಸಿದರು.