ಚಿತ್ರದುರ್ಗ:
ರೋಟರಿ ಕ್ಲಬ್ ಚಿತ್ರದುರ್ಗ ವತಿಯಿಂದ ಇಪ್ಪತ್ತೈದು ಅತ್ಯುತ್ತಮ ಶಿಕ್ಷಕರಿಗೆ ನೇಷನ್ ಬಿಲ್ಡರ್ ಅವಾರ್ಡ್ ಪ್ರಶಸ್ತಿಯನ್ನು ಭಾನುವಾರ ರೋಟರಿ ಬಾಲಭವನದಲ್ಲಿ ನೀಡಿ ಸನ್ಮಾನಿಸಲಾಯಿತು.
ಜಿಲ್ಲಾ ಸಾಕ್ಷರತಾ ಚೇರ್ಮನ್ ದಾವಣಗೆರೆಯ ಬಿ.ಇ.ರಂಗಸ್ವಾಮಿ ಅತ್ಯುತ್ತಮ ಶಿಕ್ಷಕರುಗಳಿಗೆ ಸನ್ಮಾನಿಸಿ ಮಾತನಾಡುತ್ತ ಸದೃಡ ಸಮಾಜ ನಿರ್ಮಿಸುವಲ್ಲಿ ಶಿಕ್ಷಕರುಗಳ ಪಾತ್ರ ಮುಖ್ಯವಾಗಿರುವುದರಿಂದ ಮಕ್ಕಳಲ್ಲಿ ಸಂಸ್ಕಾರ-ಸಂಸ್ಕøತಿಯನ್ನು ಬಿತ್ತುವ ಹೊಣೆಗಾರಿಕೆ ಶಿಕ್ಷಕರುಗಳ ಮೇಲಿದೆ ಎಂದು ಹೇಳಿದರು.
ಪಠ್ಯದ ಜೊತೆಗೆ ಮಕ್ಕಳಲ್ಲಿ ಕೌಶಲ್ಯವನ್ನು ಹುಟ್ಟುಹಾಕುವ ಶಿಕ್ಷಣ ಅಗತ್ಯವಿರುವುದರಿಂದ ಸ್ಪರ್ಧಾ ಯುಗದಲ್ಲಿ ಮಕ್ಕಳು ಪೈಪೋಟಿಯನ್ನು ಎದುರಿಸುವ ಸಾಮಥ್ರ್ಯ ಬೆಳೆಸಬೇಕು ಎಂದು ಶಿಕ್ಷಕರುಗಳಿಗೆ ತಿಳಿಸಿದರು.
ರೋಟರಿ ಕ್ಲಬ್ ಚಿತ್ರದುರ್ಗ ಅಧ್ಯಕ್ಷೆ ಜಯಶ್ರಿಷಾ ಮಾತನಾಡಿ ರೋಟರಿ ಇಂಡಿಯಾ ಲಿರ್ಟ್‍ಸಿ ಮಿಷಿನ್‍ನಿಂದ ಪ್ರತಿ ವರ್ಷವೂ ಅತ್ಯುತ್ತಮ ಶಿಕ್ಷಕರುಗಳನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ. ಇದರಿಂದ ಶಿಕ್ಷಕರುಗಳ ಹೊಣೆಗಾರಿಕೆ ಹೆಚ್ಚಾಗಲಿದೆಯಲ್ಲದೆ ಬೇರೆ ಶಿಕ್ಷಕರುಗಳು ಪ್ರಶಸ್ತಿ ಪಡೆಯುವ ನಿಟ್ಟಿನಲ್ಲಿ ಕೆಲಸ ಮಾಡಲು ಉತ್ತೇಜನ ನೀಡಿದಂತಾಗುತ್ತದೆ ಎಂದರು.
ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಮಕ್ಕಳೆ ಆಯ್ಕೆ ಮಾಡುವ ಅತ್ಯುತ್ತಮ ಶಿಕ್ಷಕರುಗಳನ್ನು ಗುರುತಿಸಿ ಸನ್ಮಾನ ಮಾಡುವುದರಿಂದ ನಿಜವಾದ ಪ್ರತಿಭೆಯುಳ್ಳವರು ಮಾತ್ರ ಪ್ರಶಸ್ತಿಗೆ ಅರ್ಹರಾಗಿರುತ್ತಾರೆ ಎಂದು ಹೇಳಿದರು.
ಚಿತ್ರದುರ್ಗ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ಸಹ ಶಿಕ್ಷಕ ಟಿ.ಸಂತೋಷ್, ಡಿ.ಎಸ್.ಹಳ್ಳಿ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕಿ ಪದ್ಮಾವತಿ, ವಿದ್ಯಾವಿಕಾಸ ಶಾಲೆಯ ಪ್ರೌಢಶಾಲೆ ಶಿಕ್ಷಕ ವಿರೇಶ್, ಲಕ್ಷ್ಮಿಸಾಗರ ಪ್ರೌಢಶಾಲೆಯ ಸಹ ಶಿಕ್ಷಕಿ ರೋಷನ್‍ಆರ, ಸರ್ಕಾರಿ ಉರ್ದು ಹೈಸ್ಕೂಲ್‍ನ ಶಿಕ್ಷಕಿ ನಜ್ಮಅನ್ವರ್ ಸೇರಿದಂತೆ 25 ಅತ್ಯುತ್ತಮ ಶಿಕ್ಷಕರುಗಳನ್ನು ಸನ್ಮಾಸಿಸಲಾಯಿತು.
ರೋಟರಿ ಕ್ಲಬ್ ಚಿತ್ರದುರ್ಗ ಕಾರ್ಯದರ್ಶಿ ಪಿ.ಬಿ.ಶಿವರಾಂ, ಡಿಸ್ಟ್ರಿಕ್ಟ್ ಅಸಿಸ್ಟೆಂಟ್ ಗೌರ್ವನರ್ ಡಾ.ಸಿ.ತಿಪ್ಪೇಸ್ವಾಮಿ, ಚಂದ್ರಶೇಖರಯ್ಯ, ತರುಣ್‍ಷಾ, ಎಸ್.ವೀರೇಶ್, ಜಿ.ಎ.ವಿಶ್ವನಾಥ್, ವೀರಭದ್ರಸ್ವಾಮಿ, ನಾಗೇಂದ್ರಬಾಬು, ಗಾಯತ್ರಿಶಿವರಾಂ, ವಿನೋದ್‍ಭಾಪ್ನ, ಡಾ.ಸುನೀಲ್, ಮಹಂತೇಶ್, ಭಾಗ್ಯಲಕ್ಷ್ಮಿ, ಎ.ವಿ.ಮೂರ್ತಿ, ಅನ್ವರ್‍ಪಾಷ, ಮಲ್ಲಿಕಾರ್ಜುನ್, ರಾಜೇಶ್ವರಿ, ವೈ.ರವಿಕುಮಾರ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ