ತುಮಕೂರು
ಕೊರೊನಾ ಸೋಂಕು ಜಿಲ್ಲೆಯಲ್ಲಿ ನಿಯಂತ್ರಣಕ್ಕೆ ಬರುವಂತೆ ಕಾಣುತ್ತಿಲ್ಲ, ದಿನದಿನಕ್ಕೂ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಬುಧವಾರ 250 ಜನರಿಗೆ ಸೋಂಕು ತಗುಲಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 8049ಕ್ಕೆ ಏರಿಕೆಯಾಗಿದೆ. ಜೊತೆಗೆ ಸೋಂಕು ತಗುಲಿದ ಇಬ್ಬರು ಮೃತಪಟ್ಟಿದ್ದಾರೆ. ಇವರೊಂದಿಗೆ ಸೋಂಕಿನಿಂದ ಮೃತರಾದವರ ಸಂಖ್ಯೆ 190ಕ್ಕೆ ಏರಿಕೆಯಾಗಿದೆ.
ತುಮಕೂರು ನಗರದ ನಜರಾಬಾದ್‍ನ 70 ವರ್ಷದ ಗಂಡಸು, ಜಗನ್ನಾಥಪುರದ 60 ವರ್ಷದ ಹೆಂಗಸು, ಪಾವಗಡದ 60 ವರ್ಷದ ಗಂಡಸು, ಕುಣಿಗಲ್‍ನ ಕೆ.ಆರ್.ಎಸ್. ಬಡಾವಣೆಯ 64 ವರ್ಷದ ಗಂಡಸು ಹಾಗೂ ಕುಣಿಗಲ್ ತಾಲ್ಲೂಕು ಚೆನ್ನತಿಮ್ಮನಪಾಳ್ಯದ 35 ವರ್ಷದ ಗಂಡಸು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.
ಕೊರೊನಾ ಸೋಂಕಿತರು ಚಿಕಿತ್ಸೆ ಪಡೆದು ಗುಣಮುಖರಾಗಿ ಸೋಮವಾರ 212 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ 5792 ಮಂದಿ ಗುಣಮುಖರಾದಂತಾಗಿದೆ. ಆದರೆ, ಜಿಲ್ಲೆಯಲ್ಲಿ 1806 ಸೋಂಕು ಸಕ್ರಿಯ ಪ್ರಕರಣಗಳಿವೆ. ಮಂಗಳವಾರ ವರದಿಯಾದ 212 ಪ್ರಕರಣಗಳಲ್ಲಿ ತುಮಕೂರು ತಾಲ್ಲೂಕಿನ 108 ಜನರಿಗೆ ಸೋಂಕು ಖಚಿತವಾಗಿದೆ. ತಿಪಟೂರು ತಾಲ್ಲೂಕಿನ 46, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 26, ಪಾವಗಡ ತಾಲ್ಲೂಕಿನ 21, ಮಧುಗಿರಿ ತಾಲ್ಲೂಕಿನ 15, ಶಿರಾ ತಾಲ್ಲೂಕಿನಲ್ಲಿ 15, ಗುಬ್ಬಿ ತಾಲ್ಲೂಕಿನಲ್ಲಿ 13, ತುರುವೇಕೆರೆ ತಾಲ್ಲೂಕಿನಲ್ಲಿ 11 ಕುಣಿಗಲ್ ತಾಲ್ಲೂಕಿನ 10, ಕೊರಟಗೆರೆ ತಾಲ್ಲೂಕಿನ 8 ಕೊರೊನಾ ಸೋಂಕು ಖಚಿತವಾಗಿದೆ. ಇವರಲ್ಲಿ 164 ಪುರುಷರು, 109 ಮಹಿಳೆಯರು, ನಾಲ್ವರು ಮಕ್ಕಳು ಹಾಗೂ 60 ವರ್ಷ ಮೇಲ್ಪಟ್ಟ 51 ಜನರಿದ್ದಾರೆ.
ಇದೂವರೆಗೆ ಜಿಲ್ಲೆಯಲ್ಲಿ ವರದಿಯಾಗಿರುವ ಒಟ್ಟು 7799 ಸೋಂಕು ಪ್ರಕರಣಗಳಲ್ಲಿ ತುಮಕೂರು ತಾಲ್ಲೂಕಿನಲ್ಲಿ 2873, ಪಾವಗಡ ತಾ. 692, ತಿಪಟೂರು ತಾ. 717, ಕುಣಿಗಲ್ ತಾ. 592, ಶಿರಾ ತಾ. 556, ಗುಬ್ಬಿ ತಾ. 547, ಮಧುಗಿರಿ ತಾ. 526, ಚಿಕ್ಕನಾಯಕನಹಳ್ಳಿ ತಾ. 474, ತುರುವೇಕೆರೆ ತಾ. 439, ಕೊರಟಗೆರೆ ತಾ. 383 ಪ್ರಕರಣ ವರದಿಯಾಗಿವೆ.
ಈವರೆಗೂ ಕೊರೊನಾ ಸೋಂಕು ತಗುಲಿದ 7799 ಜನರಲ್ಲಿ 188 ಜನ ಮೃತಪಟ್ಟಿದ್ದಾರೆ. ತುಮಕೂರು ತಾಲ್ಲೂಕಿನ 118, ಕುಣಿಗಲ್ ತಾಲ್ಲೂಕಿನಲ್ಲಿ 13, ಪಾವಗಡ ತಾಲ್ಲೂಕಿನ 11, ಗುಬ್ಬಿ ತಾಲ್ಲೂಕಿನಲ್ಲಿ 11, ತಿಪಟೂರು ತಾಲ್ಲೂಕಿನ 8, ಶಿರಾ ತಾಲ್ಲೂಕಿನ 7, ಕೊರಟಗೆರೆ ತಾಲ್ಲೂಕಿನಲ್ಲಿ 6, ತುರುವೇಕೆರೆ ತಾಲ್ಲೂಕು 5, ಮಧುಗಿರಿ ತಾಲ್ಲೂಕಿನಲ್ಲಿ 5, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 4 ಮಂದಿ ಕೋವಿಡ್‍ಗೆ ಬಲಿಯಾಗಿದ್ದಾರೆ.
ಸೋಂಕಿತರಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ಇದೂವರೆಗೆ 7799 ಮಂದಿಗೆ ಸೋಂಕು ತಗುಲಿದೆ, ಇವರಲ್ಲಿ 5792 ಮಂದಿ ಗುಣಮುಖರಾಗಿದ್ದಾರೆ..
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ