ಲಾಕ್ ಡೌನ್ ಎಫೆಕ್ಟ್ : ಅಬಕಾರಿ ಇಲಾಖೆಗೆ ಆದ ನಷ್ಟವಾದರೂ ಎಷ್ಟು ಗೊತ್ತಾ..?

ಬೆಂಗಳೂರು

      ಲಾಕ್ ಡೌನ್ ನಿಂದಾಗಿ ದೇಶದ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಈ ಮಧ್ಯೆ ಮಾರ್ಚ್ 24 ಲಾಕ್ ಡೌನ್ ಮಾಡಲಾಗಿದ್ದು ಮೇ 3ರವರೆಗೆ ಮುಂದುವರೆಯಲಿದ್ದು ಕರ್ನಾಟಕದ ಮದ್ಯದಂಗಡಿಗಳನ್ನು ಬಂದ್ ಮಾಡಿರುವುದರಿಂದ ಈ ಅವಧಿಯಲ್ಲಿ ರಾಜ್ಯ ಅಬಕಾರಿ ಇಲಾಖೆಗೆ ಅಂದಾಜು 2,050 ಕೋಟಿ ರೂ. ನಷ್ಟವಾಗಿದೆ.

      ದಿನವೊಂದಕ್ಕೆ ಸುಮಾರು 50 ಕೋಟಿ ರುಪಾಯಿ ನಷ್ಟವಾಗುತ್ತಿದ್ದು ಇನ್ನು 41 ದಿನಕ್ಕೆ ಹೋಲಿಸಿದರೆ ಸರಾಸರಿ ಅಂದಾಜು 2,050 ಕೋಟಿ ರುಪಾಯಿ ನಷ್ಟವಾಗಿದೆ ಎಂದು ಹಿರಿಯ ಅಬಕಾರಿ ಅಧಿಕಾರಿ ಸುದ್ದಿ ಸಂಸ್ಥೆಯೊಂದಕ್ಕೆ ಮಾಹಿತಿ ನೀಡಿದ್ದಾರೆ. 

      ಮೇ 3ರ ನಂತರ ಮದ್ಯದಂಗಡಿಗಳನ್ನು ತೆರೆಯಲಾಗುತ್ತದೆಯೋ ಎಂಬ ಬಗ್ಗೆ ಇನ್ನು ಸ್ಪಷ್ಟತೆ ಇಲ್ಲ. ಲಾಕ್ ಡೌನ್ ತೆರೆದ ನಂತರ ಮದ್ಯದಂಗಡಿ ತೆರೆಯುವ ಸಾಧ್ಯತೆಯಿದೆ. ಇನ್ನು ರಾಜ್ಯ ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಹೇಳಿದ್ದಾರೆ. ಅಬಕಾರಿ ಇಲಾಖೆಯ ವೆಬ್‌ಸೈಟ್‌ನ ಪ್ರಕಾರ, 2016-17ರ ಆರ್ಥಿಕ ವರ್ಷದಲ್ಲಿ ಏಪ್ರಿಲ್‌ನಲ್ಲಿ 1,003.21 ಕೋಟಿ ರೂ., 2017-18ರಲ್ಲಿ 997.55 ಕೋಟಿ ರೂ., ಮತ್ತು 2018-19ರಲ್ಲಿ 1,334.47 ಕೋಟಿ ರೂ. ಆದಾಯ ಬಂದಿತ್ತು.
 
      ಮಾರ್ಚ್ 27 ರಿಂದ ಏಪ್ರಿಲ್ 27ರವರೆಗೆ ರಾಜ್ಯಾದ್ಯಂತ 20,449 ದಾಳಿಗಳನ್ನು ನಡೆಸಲಾಗಿತ್ತು. ಈ ವೇಳೆ 77,305 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ 40,852 ಲೀಟರ್ ಇಂಡಿಯಾ ಮೇಡ್ ಫಾರಿನ್ ಲಿಕ್ಕರ್(ಐಎಂಎಫ್ಎಲ್), 24,340 ಲೀಟರ್ ಬಿಯರ್, 2,938 ಲೀಟರ್ ತೊಗರಿ ಮತ್ತು 1,777 ಲೀಟರ್ ವೈನ್ ಸೇರಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link