ಬೆಂಗಳೂರು
ನವರಾತ್ರಿ ಹಬ್ಬದ ಇರುವ ಕಾರಣ ಸಾಲು-ಸಾಲು ರಜೆ ಇದೆ. ಪ್ರಯಾಣಿಕರಿಗೆ ಅನುಕೂಲಕ್ಕಾಗಿ ಸಾರಿಗೆ ಸಂಸ್ಥೆ ಸುಮಾರು 2,500 ವಿಶೇಷ ಬಸ್ಸುಗಳನ್ನು ಓಡಿಸಲು ನಿರ್ಧರಿಸಿದೆ .
ಈ ವಿಶೇಷ ಬಸ್ಸುಗಳು ಅಕ್ಟೋಬರ್ 17 ರಿಂದ 22 ತನಕ ಸಂಚಾರ ನಡೆಸಲಿವೆ. ಮೈಸೂರಿನಿಂದ 300 ಬಸ್ಸುಗಳು ಸಂಚಾರ ನಡೆಸಲಿದ್ದು, ಮೈಸೂರಿಗೆ ಜನರು ಭೇಟಿ ನೀಡಲು ಸಹಾಯಕವಾಗಲಿದೆ. ಮೈಸೂರು ದಸರಾ – ವಿಶೇಷ , ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಹ ದಸರಾ ಹಿನ್ನಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ವಿವಿಧ ಸಾಂಸ್ಕೃತಿಕ ಕಲಾತಂಡಗಳು ವಿಮಾನ ನಿಲ್ದಾಣದಲ್ಲಿ ನೃತ್ಯ ಪ್ರದರ್ಶನ ನಡೆಸಲಿವೆ. ದೊಡ್ಡ ರಂಗೋಲಿ, ವಿವಿಧ ಚಿತ್ತಾರಗಳ ಮೂಲಕ ಪ್ರಯಾಣಿಕರಿಗೆ ದಸರಾ ಬಗ್ಗೆ ಮಾಹಿತಿ ನೀಡಲಿದೆ ಎಂದು ಕೆಎಸ್ಆರ್‌ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
