ಸ್ವಯಂ ಸೇವಕರಿಗೆ ತರಬೇತಿ ಕಾರ್ಯಕ್ರಮ

ಎಂ ಎನ್ ಕೋಟೆ :

      16 ರಿಂದ 18 ವರ್ಷದ ಒಳಗಿನ ಯುವಕರು  ಸ್ವಯಂ ಸೇವಕರಾಗಿ ಕೆಲಸ ಮಾಡಬೇಕು ಎಂದು ಸಂಪನ್ಮೂಲ ವ್ಯಕ್ತಿ ಕೆ. ಕುಮಾರ್ ತಿಳಿಸಿದರು.

      ಗುಬ್ಬಿ ತಾಲ್ಲೂಕಿನ ಎಂ ಎನ್ ಕೊಟೆ ಗ್ರಾಮ ಪಂಚಾಯಿತಿಯಲ್ಲಿ ಹಮ್ಮಿಕೊಂಡಿದ್ದ ಲೋಕಸಭಾ ಚುನಾವಣೆ ಏ.18ರಂದು ನಡೆಯಲಿರುವ ಮತದಾನಕ್ಕೆ ಆಯ್ಕೆ ಆಗಿರುವ ಸ್ವಯಂ ಸೇವಕರಿಗೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮತಗಟ್ಟಿ ಕೇಂದ್ರಕ್ಕೆ ವಯೋ ವೃದ್ದರನ್ನು ಹಾಗೂ ಅಂಗವಿಕರನ್ನು ವಾಹನದ ಮೂಲಕ ಕರೆ ತಂದು ಮತದಾನವನ್ನು ಮಾಡಿಸಬೇಕು. ಗ್ರಾಮ ಪಂಚಾಯಿತಿ ವತಿಯಿಂದ 2 ವಾಹನಗಳನ್ನು ಏರ್ಪಡು ಮಾಡಿರುತ್ತಾರೆ.

       ಅಂಗವಿಕಲರನ್ನು ಹಾಗೂ ವೃದ್ದರನ್ನು ಕರೆದುಕೊಂಡು ಬಂದು ಮತದಾನ ಮಾಡಿಸಿ ಮತ್ತೆ ಅವರ ಊರಿಗೆ ಬೀಡಬೇಕು. ಮತದಾರರಿಗೆ ಯಾವುದೇ ಪ್ರಚಾರ ಮಾಡಬಾರದು. ಯಾವುದೇ ಜಾಗೃತಿ ಮೂಡಿಸಬಾರದು. ಎಂದು ತಿಳಿಸಿದರು.

        ಪಿಡಿಓ ನಾಗೇಂದ್ರ ಮಾತನಾಡಿ ಯುವಕರು ಸ್ವಯಂ ಸೇವಕರಾಗಿ ಬಂದು ಅಂಗವಿಕಲರನ್ನ ಮತದಾನ ಮಾಡಿಸಬೇಕು. ಇಲ್ಲಿ ವೃದ್ದರಿಗೆ ಹಾಗೂ ಅಂಗವಿಕಲರಿಗೆ ಚುನಾವಣೆ ಬಗ್ಗೆ ಯಾವುದೇ ತರದ ಮಾಹಿತಿಗಳನ್ನು ಮಾಡಬಾರದು. ಸ್ವಯಂ ಸೇವಕರಿಗೆ ಅಂದು ಊಟದ ವ್ಯವಸ್ಥೆ ಮಾಡಲಾಗುತ್ತದೆ. ಸರ್ಕಾರದಿಂದ ಸಹಾಯ ಧನ ಕೊಡಬೇಕು ಎಂದು ಆದೇಶ ಬಂದರೆ ಪಂಚಾಯಿತಿ ವತಿಯಿಂದ ಸಹಾಯ ಧನವನ್ನು ಕೊಡಲಾಗುತ್ತದೆ. ಸ್ವಯಂ ಸೇವಕರು ನಿಷ್ಠೆಯಿಂದ ಕೆಲಸವನ್ನು ಮಾಡಬೇಕು ಎಮದು ತಿಳಿಸಿದರು.

         ಕಾರ್ಯಕ್ರಮದಲ್ಲಿ ಲೆಕ್ಕ ಸಹಾಯಕ ಸಂಧೀಫ್ , ಸಿಬ್ಬಂದಿಗಲಾದ ಬಸವರಾಜು , ಮಂಜು , ಗೋವಿಂದರಾಜು , ಶಶಿಕುಮಾರ್ , ರಾಜಣ್ಣ ಹಾಗೂ ಸ್ವಯಂ ಸೇವಕರು ಭಾಗವಹಿಸಿದ್ದರು.

Recent Articles

spot_img

Related Stories

Share via
Copy link
Powered by Social Snap