ಶಿರಾ: ಕೆರೆಯಲ್ಲಿ ಮುಳುಗಿ ಮೂವರ ಸಾವು..!

ಶಿರಾ

    ಕುರಿಗಳನ್ನು ಕೆರೆಯ ನೀರಿನಲ್ಲಿ ಮೈ ತೊಳೆಯಲೆಂದು ಕೆರೆಯ ನೀರಿನೊಳಗೆ ಇಳಿದ ಒಂದೇ ಕುಟುಂಬದ ಮೂರು ಮಂದಿ ಕೆರೆಯ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ತಾಲ್ಲೂಕಿನ ಗೌಡಗೆರೆ ಹೋಬಳಿಯ ಹೊಸೂರು ಕೆರೆಯಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.

    ಕಳುವರಹಳ್ಳಿ ಗ್ರಾಮದ ರೈತ ಕುಟುಂಬದ ಹಾಗೂ ಜನಪದ ಸಂಸ್ಕøತಿಯ ಪ್ರಸಿದ್ಧ ಕ್ಷೇತ್ರ ಜುಂಜಪ್ಪ ದೇವರ ಪೂಜಾರ ಕುಟುಂಬದ ನಾಗರಾಜು (45) 30 ಕುರಿಗಳನ್ನು ಸಾಕಿದ್ದರು. ಹೊಸೂರು ಕೆರೆಯು ತುಂಬಿದ ಪರಿಣಾಮ ಕೆರೆಯ ಹಿನ್ನೀರು ಪ್ರದೇಶದಲ್ಲಿ ಕುರಿಗಳನ್ನು ತೊಳೆಯಲು ಮಗ ಕಿರಣ ಮತ್ತು ಮಡದಿ ಮಮತರೊಂದಿಗೆ ಹೋಗಿದ್ದರು.

    ಕೆರೆಯಲ್ಲಿದ್ದ ಗುಂಡಿ ಆಳವಾಗಿದ್ದ ಕಾರಣ ನಾಗರಾಜು ಆಯಾ ತಪ್ಪಿ ನೀರಿನಲ್ಲಿ ಮುಳಗಿದ್ದಾರೆ, ನೀರಿನಲ್ಲಿ ಮುಳಗಿದ ಪತಿ ನಾಗರಾಜು ಮೇಲೆ ಬಾರದ ಕಾರಣ ಗಾಬರಿಗೊಂಡು ಪತ್ನಿ ಮಮತ (35) ನೀರಿಗಿಳಿದ ತಕ್ಷಣ ಆಳವಾದ ನೀರು ಅವರನ್ನು ಮುಳಗಿಸಿ ಬಿಟ್ಟಿದೆ. ತಂದೆ ತಾಯಿ ನೀರಿನಲ್ಲಿ ಮುಳುಗಿದ ನಂತರ ಅವರು ಮೇಲೆ ಬಾರದಿದ್ದಾಗ ಮಗ ಕಿರಣ್ (15) ತಂದೆ ತಾಯಿ ರಕ್ಷಣೆಗೆ ಹೋಗಿ ತಾನು ನೀರಿನಲ್ಲಿ ಮುಳುಗಿದ್ದಾನೆ ಎನ್ನಲಾಗಿದೆ.

     ಕೆರೆಯ ಹಿನ್ನೀರಿನ ಪಕ್ಕದಲ್ಲಿಯೇ ಕುರಿ ಕಾಯುತ್ತಿದ್ದ ವ್ಯಕ್ತಿ ಈ ದೃಶ್ಯವನ್ನು ಕಂಡು ಗ್ರಾಮಸ್ಥರಿಗೆ ಸುದ್ದಿ ಮುಟ್ಟಿಸಿದ್ದಾನೆ. ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಾರ್ವಜನಿಕರ ಸಹಕಾರದೊಂದಿಗೆ ಶೋಧ ಕಾರ್ಯ ನಡೆಸಿ ಮೃತ ದೇಹಗಳನ್ನು ಹೊರತೆಗೆದಿದ್ದಾರೆ. ಮೃತ ವಿದ್ಯಾರ್ಥಿ ಹೊಸೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 10ನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು ಎನ್ನಲಾಗಿದ್ದು ಘಟನಾ ಸ್ಥಳದಲ್ಲಿ ಸಂಬಂಧಿಕರ ಆಅಕ್ರಂದನ ಮುಗಿಲು ಮುಟ್ಟಿತ್ತು.

    ಸದರಿ ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಮೃತ ಕುಟುಂಬಕ್ಕೆ ಸಾಂತ್ವನ ಹೇಳಿದರಲ್ಲದೆ, ಸರ್ಕಾರದಿಂದ ಲಭ್ಯವಾಗುವ ಪರಿಹಾರವನ್ನು ಕೂಡಲೆ ದೊರಕಿಸಿಕೊಡುವ ಭರವಸೆ ನೀಡಿದರು.

ಶಾಸಕರ ಭೇಟಿ :

    ಘಟನೆಯ ಸುದ್ದಿ ತಿಳಿದ ಕ್ಷೇತ್ರದ ಶಾಸಕ ಬಿ.ಸತ್ಯನಾರಾಯಣ್ ಕಳುವರಹಳ್ಳಿ ಗ್ರಾಮದ ಮೃತ ಕುಟುಂಬಕ್ಕೆ ಭೇಟಿ ನೀಡಿ ವೈಯಕ್ತಿಕವಾಗಿ ಸಹಾಯ ಧನ ನೀಡಿದರಲ್ಲದೆ, ಸರ್ಕಾರದ ಸೌಲಭ್ಯಗಳನ್ನು ದೊರಕಿಸಿಕೊಡುವ ಭರವಸೆ ನೀಡಿದರು. ಜಿಲ್ಲಾ ಬಿ.ಜೆ.ಪಿ. ಉಪಾಧ್ಯಕ್ಷ ಬಿ.ಕೆ.ಮಂಜುನಾಥ್, ಡಿ.ವೈ.ಎಸ್.ಪಿ. ವೆಂಕಟಸ್ವಾಮಿ, ತಹಸೀಲ್ದಾರ್ ನಾಹಿದಾ ಜಮ್ ಜಮ್, ಗ್ರಾಮಾಂತರ ಸಿ.ಪಿ.ಐ. ಶಿವಕುಮಾರ್ ಸ್ಥಳಕ್ಕೆ ಭೇಟಿ ನೀಡಿದರು. ಸದರಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಾವರೇಕೆರೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap