ಚಾಮರಾಜನಗರ
ಬೇಸಿಗೆ ರಜೆಯಲ್ಲಿ ಕೆರೆಯ ನೀರಿನಲ್ಲಿ ಈಜಲೆಂದು ಹೋಗಿ ದುರಾದೃಷ್ಟವಶಾತ್ ಮುಳುಗಿ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ವರದಿಯಾಗಿವೆ. ಜಿಲ್ಲೆಯಲ್ಲಿ ವರದಿಯಾಗಿರುವ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಈಜಲು ಹೋಗಿದ್ದ ಮೂವರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಸಮೀಪದ ಹುತ್ತೂರು ಮತ್ತು ತಮ್ಮಡಹಳ್ಳಿ ಕೆರೆಗಳಲ್ಲಿ ಪ್ರಕರಣಗಳು ವರದಿಯಾಗಿವೆ.
ಹುತ್ತೂರು ಕೆರೆಯಲ್ಲಿ ಉಡಿಗಾಲ ಗ್ರಾಮದ 16 ವರ್ಷದ ಕಿರಣ್ ಎಂಬ ವಿದ್ಯಾರ್ಥಿ ಈಜಲು ಹೋಗಿ ಸಾವನ್ನಪ್ಪಿದ್ದು, ಈ ಸಂಬಂಧ ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೊಂದು ಘಟನೆ ತಮ್ಮಡಹಳ್ಳಿ ಕೆರೆಯಲ್ಲಿ ನಡೆದಿದ್ದು, ಗುಂಡ್ಲುಪೇಟೆ ಪಟ್ಟಣದ ಕೆಲವು ಯುವಕರು ಈಜಲು ಈ ಕೆರೆಯಲ್ಲಿ ಈಜಲು ತೆರಳಿದ್ದರು.
ಈ ವೇಳೆ ಇಬ್ಬರು ನೀರಿನಲ್ಲಿ ಮುಳುಗಿದ್ದು ಕೂಡಲೇ ಜತೆಗಿದ್ದವರು ಅಲ್ಲಿಂದ ಹೊರಟು ಹೋಗಿದ್ದಾರೆ ಎನ್ನಲಾಗಿದೆ. ತಮ್ಮಡಹಳ್ಳಿ ಗ್ರಾಮದ ಕೆರೆಯಲ್ಲಿ ನೀರು ಪಾಲಾದವರು ಗುಂಡ್ಲುಪೇಟೆ ಪಟ್ಟಣದ ಆಚಾರ್ ಬೀದಿಯ ಅಣ್ಣತಮ್ಮಂದಿರು ಎಂದು ಹೇಳಲಾಗಿದ್ದು, ಮೃತ ದೇಹವನ್ನು ಕೆರೆಯಿಂದ ಗ್ರಾಮಸ್ಥರ ಸಹಾಯ ಹೊರ ತೆಗೆಯಲಾಗಿದೆ. ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








