ಬೆಂಗಳೂರು
ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಬೈಕ್ನಲ್ಲಿ ಹೋಗುತ್ತಿದ್ದ ಅಜ್ಜ,ಅಜ್ಜಿ, ಮೊಮ್ಮಗ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ರಾಷ್ಟ್ರೀಯ ಹೆದ್ದಾರಿ 207ರ ಕೊಗೇನಹಳ್ಳಿ ಬಳಿ ಸಂಭವಿಸಿದೆ.
ನೆಲಮಂಗಲದ ತ್ಯಾಮಗೊಂಡ್ಲುವಿನ ಗಂಗಮ್ಮನ ಗುಡಿಬೀದಿಯ ಪ್ಲಾಸ್ಟಿಕ್ ವ್ಯಾಪಾರ ಮಾಡುತ್ತಿದ್ದ ಸೈಯದ್ ಅಬ್ದುಲ್ಲಾ (48)ಆತನ ಪತ್ನಿ ಜಬೀನ ತಾಜ್ (42), ಅವರ ಮೊಮ್ಮಗ ಫಿಝಾನ್ ಷರೀಫ ಎಂದು ಮೃತಪಟ್ಟವರನ್ನು ಗುರುತಿಸಲಾಗಿದೆ.
ಒಂದೇ ಕುಟುಂಬದ ನತದೃಷ್ಟ ಈ ಮೂವರು ಒಂದೇ ಬೈಕ್ನಲ್ಲಿ ತ್ಯಾಮಗೊಂಡ್ಲು ಕಡೆಗೆ ಹೋಗುತ್ತಿದ್ದಾಗ ದೊಡ್ಡಬಳ್ಳಾಪುರದ ಕೂಗೇನಹಳ್ಳಿಯ ಸಮೀಪ ಬರುವಾದ ಎದುರಿಗೆ ವೇಗವಾಗಿ ಬಂದ ಇಂಡಿಕಾ ಕಾರು ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಅಬ್ದುಲ್ಲಾನ ತಲೆಗೆ ಗಂಭೀರ ಗಾಯಾವಾಗಿ ಆತ ಸ್ಥಳದಲ್ಲಿಯೇ ಮೃತಪಟ್ಟರೆ, ಗಾಯಾಗೊಂಡಿದ್ದ ಜಬೀನಾ ಮತ್ತು ಫಿಝಾಜ್ನ್ ಆಸ್ಪತ್ರೆಗೆ ಸಾಗಿಸುವಾಗ ಸಾವನ್ನಪ್ಪಿದ್ದಾರೆ. ದೊಡ್ಡಬೆಳವಂಗಲ ಪೊಲೀಸರು ಪ್ರಕರಣ ದಾಖಲಿಸಿ ಕಾರು ಚಾಲಕನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
