ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ಮೂರು ಲೋಡು ಹುಲ್ಲು ಭಸ್ಮ

ಮಿಡಿಗೇಶಿ :

    ಕಳೆದ ಎಂಟತ್ತು ವರ್ಷಗಳಿಂದ ಸರಿಯಾಗಿ ಮಳೆಬಾರದೆಯೆ ಬೆಳೆ ಬೆಳೆಯದೇ ದನಕರು, ಕುರಿ, ಮೇಕೆ,ಎತ್ತು,ಎಮ್ಮೆ,ಹಸು,ಕರು,ಜಿಂಕೆ ,ಮೊಲ,ನರಿ ಮುಂತಾದ ಪ್ರಾಣಿ-ಪಕ್ಷಿಗಳು ಕುಡಿಯಲು ನೀರಿರದೆ ತಿನ್ನಲು ಆಹಾರ ಇಲ್ಲದೆ ತೊಂದರೆ ಎದುರಿಸುತ್ತಿರುವ ಕ್ಲಿಷ್ಟಕರ ಸಂಧರ್ಭದಲ್ಲಿ ಘನ ಸರ್ಕಾರಗಳು ಜನತೆಗೆ ಕುಡಿಯುವ ನೀರು,

      ನ್ಯಾಯಬೆಲೆ ಅಂಗಡಿಗಳಲ್ಲಿ ಬಹುತೇಕ ಎಲ್ಲಾ ವರ್ಗದವರಿಗೆ ಉಚಿತ ಅಕ್ಕಿ ವಿತರಣೆ ಹಾಗೂ ದನಕರುಗಳಿಗೆ ಕೆ.ಜಿ ಒಂದಕ್ಕೆ ಎರಡು ರೂಗಳಂತೆ ಒಂದು ದನವಿಗೆ ಐದು ಕೆಜಿ ಮೇವನ್ನು ಮೇವಿನ ಬ್ಯಾಂಕ್ ಮೂಲಕ ವಿತರಿಸಲಾಗುತ್ತದೆ.ಇಂತಹ ಸಂಕಷ್ಟದಿನಗಳಲ್ಲಿ ಅಲ್ಪಸ್ವಲ್ಪ ಮಳೆಯಿಂದ ಬೆಳೆದಂತಹ ಮೇವನ್ನು ಸಂಗ್ರಹಿಸಿಟ್ಟುಕೊಂಡಂತಹ ಮೇವಿ ಹುಲ್ಲಿನ ಬಣವೆಗೆ ಆಕಸ್ಮಕ ಬೆಂಕಿಬಿದ್ದು 19-04-2019 ರಂದು ರಾತ್ರಿ ಸಮಯ ಹನ್ನೆರಡು ಗಂಟೆಯಲ್ಲಿ ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಗ್ರಾಮದ ಸಂತೆ ಮೈದಾನದ ಸಮೀಪ ನಾಗಮ್ಮ ಎಂಬುವರ ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿಬಿದ್ದು ಹುಲ್ಲಿನ ಬಣವೆ ಭಸ್ಮವಾಗಿರುವ ಬಗ್ಗೆ ವರದಿಯಾಗಿದೆ.

      ಬೆಂಕಿ ಬಿದ್ದಿರುವ ಬಗ್ಗೆ ಮಧುಗಿರಿ ಪಟ್ಟಣ್ಣದಲ್ಲಿರುವ ಆಗ್ನಿಶಾಮಕ ಇಲಾಖೆಗೆ ವಿಷಯ ತಿಳಿಸಿದ ತಕ್ಷಣ ಸದರಿ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಬೆಂಕಿಯನ್ನು ನಮದಿಸಿದ್ದು ಮುಂದೆಯಾಗಬಹುದಾದ ಬಾರಿ ಅನಾಹುತವನ್ನು ತಪ್ಪಿಸಿದ್ದಾರೆ. ಸ್ಥಳಕ್ಕೆ ಮಿಡಿಗೇಶಿ ರಕ್ಷಣಾ ಸಿಬ್ಬಂದಿಯವರು ಬೇಟಿನೀಡಿರುತ್ತಾರೆ. ಆದ್ದರಿಂದ ಘನಸರ್ಕಾರದವರು ನಷ್ಟಹೊಂದಿರುವ ನಾಗಮ್ಮಳಿಗೆ ಸರ್ಕಾರದಿಂದ ದೊರೆಯಬಹುದಾದ ಅನುಕೂಲವನ್ನು ಕೊಡಿಸಿಕೊದುವಂತೆ ಈ ಭಾಗದ ರೈತರು ಮನವಿಮಾಡಿಕೊಂಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link