ತುಮಕೂರು
ಪೊಲೀಸ್ ಠಾಣೆಯಲ್ಲೇ ಮದ್ಯಪಾನ ಮಾಡಿ ಜೂಜಾಡಿದ ಹೆಬ್ಬೂರು ಠಾಣೆಯ ಸಹಾಯಕ ಸಬ್ ಇನ್ಸ್ ಪೆಕ್ಟರ್ ಹಾಗೂ ಮೂವರು ಪೇದೆಗಳನ್ನು ಅಮಾನುತು ಮಾಡಲಾಗಿದೆ.
ಕರ್ತವ್ಯ ನಿರತರಾಗಿದ್ದಾಗ ಕಾನೂನು ಸುವ್ಯವಸ್ಥೆಯ ಕಡೆ ಗಮನಕೊಡದೇ ಠಾಣೆಯಲ್ಲಿ ಮದ್ಯಪಾನ ಮಾಡಿ ಮೋಜು ಮಾಡಿದ ಮತ್ತು ಜೂಜಾಟ ಮಾಡಿ ಗಲಾಟೆ ಮಾಡಿಕೊಂಡ ಆರೋಪದ ಮೇಲೆ ಪೊಲೀಸ್ ವರಿಷ್ಠಾಕಾರಿ ವಂಶಿಕೃಷ್ಣ ಇವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಎಎಸ್‍ಐ ರಾಮಚಂದ್ರಯ್ಯ, ಪೇದೆಗಳಾದ ಮಹೇಶ್, ಚೆಲುವರಾಜು, ಸಂತೋಷ್ ಅಮಾನತುಗೊಂಡವರು. ಹೆಬ್ಬೂರು ಠಾಣೆಯ ಮೇಲಿರುವ ಕೊಠಡಿಯಲ್ಲಿ ಮದ್ಯಪಾನ ಮಾಡಿ ಜೂಜಾಡಿ ಪರಸ್ಪರ ಹೊಡೆದಾಡಿಕೊಂಡಿರುವ ಬಗ್ಗೆ ಸಬ್ ಇನ್ ಸ್ಪೆಕ್ಟರ್ ಅವರು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು.ಈ ವರದಿಯ ಆಧಾರ ಮೇಲೆ ಪೊಲೀಸ್ ವರಿಷ್ಠಾಧಿಕಾರಿಯವರು ನಾಲ್ವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ