ಸಿಲಿಕಾನ್ ಸಿಟಿಯಲ್ಲಿ ಮೂರು ಜಾವಾ ಶೋರೂಂ

ಬೆಂಗಳೂರು

          ಸಿಲಿಕಾನ್ ಸಿಟಿಯಲ್ಲಿ ಜಾವಾ ಮೋಟಾರ್ ಸೈಕಲ್ ಸಂಸ್ಥೆ ಮೂರು ಶೋರೂಂಗಳನ್ನು ತೆರೆದಿದೆ. ಕೋರಮಂಗಲ, ಬಸವನಗುಡಿ ಮತ್ತು ರಾಜಾಜಿನಗರದಲ್ಲಿ ಹೊಸ ಶೋರೂಂಗಳನ್ನು ತೆರೆಯಲಾಗಿದ್ದು,ಇವು ಪೂರ್ಣ ಪ್ರಮಾಣದಲ್ಲಿ ಕೆಲಸ ನಿರ್ವಹಿಸಲಿವೆ.

          ಗ್ರಾಹಕರು ಈಗ ನೇರವಾಗಿ ಶೋರೂಂಗಳಿಗೆ ಭೇಟಿ ನೀಡಿ ತಮ್ಮ ನೆಚ್ಚಿನ ಐಕಾನಿಕ್ ಜಾವಾ ಪೋರ್ಟಿ ಟು ಮೋಟಾರ್ ಸೈಕಲ್ ಗಳನ್ನು ಟೆಸ್ಟ್ ರೈಡ್ ಮಾಡಬಹುದಾಗಿದೆ ಹಾಗೂ ಮುಂಗಡವಾಗಿ ಕಾಯ್ದಿರಿಸಬಹುದಾಗಿದೆ.

          ಕ್ಲಾಸಿಕ್ ಲೆಜೆಂಡ್ಸ್ ಸಂಸ್ಥೆ ದೇಶದೆಲ್ಲೆಡೆ ಮೊದಲ ಹಂತದಲ್ಲಿ 100 ಶೋರೂಂಗಳನ್ನು ತೆರೆಯುವ ಗುರಿ ಹಾಕಿಕೊಂಡಿದ್ದು ಅದರಂತೆ ಮೊದಲ ಹಂತದಲ್ಲಿ ಈಗ ಬೆಂಗಳೂರಿನಲ್ಲೇ ಮೂರು ಶೋರೂಂಗಳನ್ನು ತೆರದಿದೆ.

         ಶೋರೂಂಗಳಲ್ಲಿನ ಮೋಟಾರ್ ಸೈಕಲ್ ಗಳು ತಮ್ಮ ಕ್ಲಾಸಿಕ್ ವಿನ್ಯಾಸದ, ಆಧುನಿಕ ವ್ಯಾಖ್ಯಾನವನ್ನು ವಿವರಿಸುವ ಜೊತೆ ಜೊತೆಗೆ ಸುಧಾರಿತ ಇಂಜಿನ್ ತಂತ್ರಜ್ಞಾನದೊಂದಿಗೆ ರೂಪುಗೊಂಡಿರುವ ನೂತನ ಜಾವಾ ಮತ್ತು ಪೋರ್ಟಿ ಟು ಮೋಟಾರ್ ಸೈಕಲ್ ಗಳು ತಮ್ಮ ವಿನ್ಯಾಸದಲ್ಲಿರುವ ಹಿಂದಿನ ಹಾಗೂ ಪ್ರಸ್ತುತ ದಿನಮಾನಗಳ ನಡುವಿನ ರಚನೆ ಹಾಗೂ ಸಾಮ್ಯತೆಯನ್ನು ಬಿಂಬಿಸುತ್ತವೆ.

        ಸಾವಿರಾರು ಮೊಟಾರ್ ಸೈಕಲ್ ಪ್ರೇಮಿಗಳ ಸಮ್ಮುಖದಲ್ಲಿ ಕ್ಲಾಸಿಕ್ ಲೆಜೆಂಡ್ಸ್ ಲಿಮಿಟೆಡ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಶಿಷ್ ಜೋಶಿ ಶೋರೂಂಗಳಿಗೆ ಚಾಲನೆ ನೀಡಿದರು.ಬೆಂಗಳೂರು ಜಾವಾ ಪ್ರಿಯರನ್ನು ಸಂತೋಷಪಡಿಸುವ ಸದುದ್ದೇಶದಿಂದ ನಗರದಲ್ಲಿ ಮೂರು ಶೋರೂಂಗಳನ್ನು ಆರಂಭಿಸಲಾಗಿದೆ ಎಂದರು.

         ಮಾರಾಟ ವಿಭಾಗದ ಮುಖ್ಯಸ್ಥ ತರುಣ್ ಶರ್ಮಾ ಅವರು ಮಾತನಾಡಿ, ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಹೊಸ ಸ್ಟ್ಯಾಂಡರ್ಡ್ ಅನ್ನು ಸೃಷ್ಠಿಮಾಡಲಿದೆ . ಪ್ರಸ್ತುತ ಮಾರುಕಟ್ಟೆಯಲ್ಲಿರುವ ಯಾವುದೇ ಕ್ಲಾಸಿಕ್ ಮೋಟಾರ್ ಸೈಕಲ್ ಬ್ರಾಂಡ್ ಗೆ ಹೋಲಿಸಿದರೂ ವಿಭಿನ್ನ ಮತ್ತು ಶಪ್ತ ಎನಿಸುವ ಬೆಸ್ಟಿ ಇನ್- ಕ್ಲಾಸ್ ಸೇಲ್ಸ್ ಮತ್ತು ಸರ್ವೀಸ್ ಅನುಭೂತಿಯನ್ನು ಜಾವಾ ಮೋಟಾರ್ ಸೈಕಲ್ ಶೋರೂಂ ಅಥವಾ ಡೀಲರ್ ಶಿಪ್ ಗಳು ನಮ್ಮ ಗ್ರಾಹಕರಿಗೆ ಒದಗಿಸಲಿವೆ ಎಂದು ಹೇಳಿದರು.

           ಈ ಮೋಟಾರ್ ಸೈಕಲ್‍ಗಳ ಬೆಲೆ ಕ್ರಮವಾಗಿ 1 ಲಕ್ಷದ 64 ಸಾವಿರ ರೂಪಾಯಿ ಹಾಗೂ 1 ಲಕ್ಷದ 55 ಸಾವಿರ ರೂಪಾಯಿಗಳಾಗಿವೆ . 2018 ನವೆಂಬರ್ 15ರಿಂದಲೇ ಆನ್‍ಲೈನ್ ಮೂಲಕ ಬುಕ್ಕಿಂಗ್ ಆರಂಭವಾಗಿದೆ. ಇಂದಿನ ಪೀಳಿಗೆಯ ಯುವಕರ ಅಭಿರುಚಿಗೆ ತಕ್ಕಂತೆ ರೂಪುಗೊಳಿಸಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link