ವಿದ್ಯುತ್ ಶಾರ್ಟ್ ಸಕ್ರ್ಯೂಟ್ : 30 ಲಕ್ಷ ಮೌಲ್ಯದ ಔಷಧಿ ಬೆಂಕಿಗಾಹುತಿ

ಪಟ್ಟನಾಯಕನಹಳ್ಳಿ

        ವಿದ್ಯುತ್ ಶಾರ್ಟ್‍ಸಕ್ರ್ಯೂಟ್ ಸಂಭವಿಸಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ, ಗುಪ್ತ ಮೆಡಿಕಲ್ ಮತ್ತು ಜನರಲ್ ಸ್ಟೋರ್‍ನಲ್ಲಿದ್ದ 30 ಲಕ್ಷ ರೂಪಾಯಿ ಮೌಲ್ಯದ ಔಷಧಿ ಹಾಗೂ ಜನರ ನಿತ್ಯಬಳಕೆಯ ಮಾರಾಟದ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದೆ.

         ಟಿ.ಎಸ್.ಮಂಜುನಾಥ್ ಎಂಬುವರಿಗೆ ಸೇರಿದ ಗುಪ್ತ ಮೆಡಿಕಲ್ ಮತ್ತು ಜನರಲ್ ಸ್ಟೋರ್ ವ್ಯಾಪಾರದಲ್ಲಿ ಉತ್ತಮ ವಹಿವಾಟು ಹೊಂದಿದ್ದ ಕಾರಣ ಸದಾ ಹೆಚ್ಚು ಔಷಧಿ ದಾಸ್ತಾನು ಇರುತ್ತಿತ್ತು. 28 ಲಕ್ಷ ರೂಪಾಯಿ ಮೌಲ್ಯದ ಜನ ಬಳಕೆ ಔಷಧಿ ಮತ್ತು ಪಶು ಔಷಧಿಗಳು ಇದ್ದವು ಎನ್ನಲಾಗಿದೆ. ಇದಲ್ಲದೆ 1 ಲಕ್ಷ ರೂ. ಮೌಲ್ಯದ ಫ್ರಿಡ್ಜ್, 4 ಲಕ್ಷ ರೂ. ಮೌಲ್ಯದ ನಿತ್ಯಬಳಕೆಯ ಸೋಪು, ಪೇಸ್ಟ್, ಚಾಕ್‍ಲೇಟ್, ಸೆರಿಲ್ಯಾಕ್ಸ್, ಶಾಂಪೂ ಸೇರಿದಂತೆ ಮೆಡಿಕಲ್‍ಸ್ಟೋರ್‍ನಲ್ಲಿದ್ದ ಎಲ್ಲ ವಸ್ತುಗಳು ಬೆಂಕಿಗೆ ಸುಟ್ಟು ಹೋಗಿವೆ. ಕಟ್ಟಡ ಕೂಡ ಜಖಂ ಆಗಿದ್ದು, ಒಟ್ಟು 33 ಲಕ್ಷ ರೂಪಾಯಿನಷ್ಟು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

         ಸೋಮವಾರ ರಾತ್ರಿ 9 ಗಂಟೆಗೆ ಮೆಡಿಕಲ್ ಸ್ಟೋರ್ ಮುಚ್ಚಿ ಮನೆಗೆ ಹೋಗಿದ್ದ ಮಾಲೀಕ ಟಿ.ಎಸ್.ಮಂಜುನಾಥ್‍ಗೆ ತಡರಾತ್ರಿ ಬೀಟ್‍ನಲ್ಲಿದ್ದ ಪೊಲೀಸರು ಮೆಡಿಕಲ್ ಸ್ಟೋರ್‍ನಿಂದ ದಟ್ಟ ಹೊಗೆ ಬರುತ್ತಿದ್ದನ್ನು ಗಮನಿಸಿ, ಮೊಬೈಲ್ ಮೂಲಕ ಕರೆ ಮಾಡಿ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಪೊಲೀಸರು ಅಗ್ನಿ ಶಾಮಕ ವಾಹನಕ್ಕೂ ಕರೆ ಮಾಡಿದ್ದಾರೆ. ತಡರಾತ್ರಿ ಜನ ಇಲ್ಲದ ಕಾರಣ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ. ಅಗ್ನಿ ಶಾಮಕ ವಾಹನ ಬರುವಷ್ಟರಲ್ಲಿ ಬೆಂಕಿಯ ಕೆನ್ನಾಲಿಗೆಗೆ ವಸ್ತುಗಳು ಸಂಪೂರ್ಣ ಆಹುತಿಯಾಗಿದ್ದವು ಎನ್ನಲಾಗಿದೆ. ಪರಿಶೀಲನೆ ನಡೆಸಿದ ಪಿಎಸ್‍ಐ ನಿರ್ಮಲ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link