ಲೋಕಸಭಾ ಚುನಾವಣೆ : 30 ಅಧಿಕಾರಿಗಳ ವರ್ಗಾವಣೆ

ಬೆಂಗಳೂರು 

        ಚುನಾವಣಾ ಆಯೋಗದ ಸೂಚನೆಯಂತೆ ಲೋಕಸಭಾ ಚುನಾವಣೆ ಹಿನ್ನೆಲೆ 30 ಹಿರಿಯ ಹಾಗೂ ಕಿರಿಯ ಶ್ರೇಣಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯಸರ್ಕಾರ ಆದೇಶಿಸಿದೆ.

         ಮೈಸೂರು ಜಿಲ್ಲೆ ಅಪರ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾದಂಡಾಧಿಕಾರಿಯಾಗಿ ಜಿ. ಅನುರಾಧ, ದಕ್ಷಿಣ ಕನ್ನಡ ಜಿಲ್ಲೆ ಅಪರ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾದಂಡಾಧಿಕಾರಿಯಾಗಿ ವೆಂಕಟಾಚಲಪತಿ, ಶಿವಮೊಗ್ಗ ಜಿಲ್ಲೆ ಅಪರ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾ ದಂಡಾಧಿಕಾರಿಯಾಗಿ ಜಿ.ಆರ್. ಪೂರ್ಣಿಮಾ, ಧಾರವಾಡ ಜಿಲ್ಲೆ ಅಪರ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾದಂಡಾಧಿಕಾರಿಯಾಗಿ ಡಾ. ಸುರೇಶ್ ಹಿತ್ನಾಳ್, ಮಂಡ್ಯ ಜಿಲ್ಲೆ ಅಪರ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾದಂಡಾಧಿಕಾರಿಯಾಗಿ ಎಂ.ಜೆ. ರೂಪಾ, ಬೆಳಗಾವಿ ನಗರ ಪಾಲಿಕೆ ಆಯುಕ್ತರಾಗಿ ಇಬ್ರಾಹಿಂ ಮೈಗೂರು, ಕಾಲೇಜು ಶಿಕ್ಷಣ ಇಲಾಖೆ ಮುಖ್ಯ ಆಡಳಿತಾಧಿಕಾರಿಯಾಗಿ ಕೆ.ಎಚ್. ಜಗದೀಶ್, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತರಾಗಿ ಡಾ. ಜಿ. ಷಣ್ಮುಖ, ಬೈಲಹೊಂಗಲ ಉಪವಿಭಾಗಾಧಿಕಾರಿಯಾಗಿ ಮಹದೇವ ಎಂ. ಮುರಗಿ, ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಮುಖ್ಯ ಆಡಳಿತಾಧಿಕಾರಿಯಾಗಿ ಪಿ.ಎಸ್. ಮಂಜುನಾಥ್ ಅವರನ್ನು ವರ್ಗಾವಣೆ ಮಾಡಲಾಗಿದೆ.

       ಹುಣಸೂರು ಉಪ ವಿಭಾಗಾಧಿಕಾರಿಯಾಗಿ ಎಚ್.ಜಿ. ಚಂದ್ರಶೇಖರಯ್ಯ, ಗದಗ ಉಪ ವಿಭಾಗಾಧಿಕಾರಿಯಾಗಿ ಶಿವಪ್ಪ ಯಲ್ಲಪ್ಪ ಭಜಂತ್ರಿ, ಗದಗ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾಗಿ ರವೀಂದ್ರ ಕರಿಲಿಂಗಣ್ಣನವರ್, ಮಧುಗಿರಿ ಉಪ ವಿಭಾಗಾಧಿಕಾರಿಯಾಗಿ ಬಿ.ಎನ್ ವೀಣಾ, ಕೃಷ್ಣಮೇಲ್ದಂಡೆ ಯೋಜನೆ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಸಿದ್ದಪ್ಪ ಪರಪ್ಪ ಗುಲ್ಲೊಳಿ, ಚಿಕ್ಕೋಡಿ ಉಪ ವಿಭಾಗಾಧಿಕಾರಿಯಾಗಿ ಸೋಮಲಿಂಗ ಗೋಪಾಲ ಗೆಣ್ಣೂರ ಅವರನ್ನು ವರ್ಗಾಯಿಸಲಾಗಿದೆ.

ದಾವಣಗೆರೆ ಮಹಾನಗರ ಪಾಲಿಕೆ ಉಪಆಯುಕ್ತ ಸೈಯದ ಅಫ್ರಿನ್ ಭಾನು ಎಸ್.ಬಳ್ಳಾರಿ, ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಎಂ.ಕೆ ಸವಿತಾ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಆಯುಕ್ತರ ಕೇಂದ್ರ ಸ್ಥಾನಿಕ ಸಹಾಯಕರಾಗಿ ಡಾ. ದಾಸೇಗೌಡ, ಧಾರವಾಡ ಕೆ.ಐ.ಎ.ಡಿ.ಬಿ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಶಾರದಾ. ಸಿ. ಕೋಲಕಾರ, ವಿಜಯಪುರ ಉಪ ವಿಭಾಗಾಧಿಕಾರಿಯಾಗಿ ಎಸ್.ಎನ್. ರುದ್ರೇಶ್, ಕೃಷ್ಣ ಮೇಲ್ದಂಡೆ ಯೋಜನೆ ಪುನರ್ ವಸತಿ ಅಧಿಕಾರಿಯಾಗಿ ಶ್ರೀ ಹರ್ಷ ಎಸ್. ಶೆಟ್ಟಿ ಅವರನ್ನು ನೇಮಕ ಮಾಡಲಾಗಿದೆ.

ಗದಗ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಉಪ ನಿರ್ದೇಶಕರಾಗಿ ಸದಾಶಿವ ಮಿರ್ಜಿ, ಧಾರವಾಡ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಉಪ ನಿರ್ದೇಶಕರಾಗಿ ಅಶೋಕ್ ಕಳಗಟಕಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿಯಾಗಿ ರವೀಂದ್ರ ಬಿ. ಮಲ್ಲಾಪುರ್ ಅವರನ್ನು ವರ್ಗಾವಣೆ ಮಾಡಲಾಗಿದೆ.

ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಮಾಯಣ್ಣ ಗೌಡ, ತುಂಗ ಮೇಲ್ದಂಡೆ ಯೋಜನೆ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಅಬೀದ್ ಗದ್ಯಾಳ, ಬೆಳಗಾವಿ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಉಪ ನಿರ್ದೇಶಕರಾಗಿ ರಮೇಶ್ ಕೋಲಾರ, ರಾಮನಗರ ಡಿಯುಡಿಸಿ ಯೋಜನಾ ನಿರ್ದೇಶಕರಾಗಿ ಸೂರಜ್. ಎಸ್.ಆರ್, ಕೃಷ್ಣ ಮೇಲ್ದಂಡೆ ಯೋಜನೆ ವಿಶೇಷ ಜಿಲ್ಲಾಧಿಕಾರಿಯಾಗಿ ಸಿದ್ದರಾಮೇಶ್ವರ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap