34 ಕೋಟಿ ವೆಚ್ಚದ ಬೃಹತ್ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಶೀಘ್ರದಲ್ಲೇ ಚಾಲನೆ

ಚಳ್ಳಕೆರೆ

       ಕ್ಷೇತ್ರದ ಪರಶುರಾಮಪುರ ಹೋಬಳಿಯ ಚೌಳೂರು ಮತ್ತು ಪರಶುರಾಮಪುರದ ಬಳಿ ಸುಮಾರು 34 ಕೋಟಿ ವೆಚ್ಚದಲ್ಲಿ ಎರಡು ಕಡೆ ಬೃಹತ್ ಬ್ಯಾರೇಜ್‍ನ್ನು ನಿರ್ಮಿಸುವ ಯೋಜನೆಗೆ ಶೀಘ್ರದಲ್ಲೇ ಚಾಲನೆ ದೊರೆಯಲಿದೆ ಎಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ತಿಳಿಸಿದ್ದಾರೆ.

       ಅವರು ಶುಕ್ರವಾರ ಇಲ್ಲಿನ ಶಾಸಕರ ಭವನದಲ್ಲಿ ಪತ್ರಿಕೆಗೆ ಮಾಹಿತಿ ನೀಡಿ ಪರಶುರಾಮಪುರ ಮತ್ತು ಚೌಳೂರು ಗ್ರಾಮಗಳಿಗೆ ಭದ್ರಾ ಮೇಲ್ದಂಡೆ ಯೋಜನೆಯ ಹಿರಿಯ ಅಧಿಕಾರಿಗಳನ್ನು ಕರೆದ್ಯೊಯುದು ಸ್ಥಳ ಪರಿಶೀಲನೆ ನಡೆಸಲಾಗಿದೆ. ಬ್ಯಾರೇಜ್ ನಿರ್ಮಾಣ ಕುರಿತಂತೆ ಈಗಾಗಲೇ ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿದ್ದು, ಸೂಕ್ತ ಸ್ಥಳವನ್ನು ಸಹ ಗುರುತಿಸುವಲ್ಲಿ ಎಲ್ಲರೂ ಸಹಕಾರ ನೀಡಿದ್ಧಾರೆ.

       ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಮಳೆಯ ನೀರು ವ್ಯರ್ಥವಾಗಿ ಹರಿದು ಪೋಲಾಗದಂತೆ ಬ್ಯಾರೇಜ್ ಮೂಲಕ ತಡೆದು ಅದರಿಂದ ಈ ಭಾಗದ ಭೂಮಿಯ ಅಂತರ್ಜಲವನ್ನು ಸಂರಕ್ಷಿಸಿಕೊಳ್ಳಲು ಬ್ಯಾರೇಜ್ ನಿರ್ಮಾಣ ಕಾಮಗಾರಿ ಶೀಘ್ರದಲ್ಲೇ ಕೈಗೆತ್ತಿಕೊಳ್ಳಲಾಗುವುದು ಎಂದರು.

        ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಅಧೀಕ್ಷಕ ಇಂಜಿನಿಯರ್ ಎಂ.ಪಿ.ಶಿವಕುಮಾರ್, ಸೂಪರ್‍ಡೆಂಟ್ ಇಂಜಿನಿಯರ್ ಪಾಳೇಗಾರ್, ಜಿಲ್ಲಾ ಕಾರ್ಯಪಾಲಕ ಅಭಿಯಂತರ ಶಿವಕುಮಾರ್, ಸಹಾಯಕ ಕಾರ್ಯಪಾಲಕ ಅಭಿಯಂತರ ವೀರಭದ್ರಪ್ಪ, ಗುತ್ತಿಗೆದಾರ ಎಚ್.ಪಿ.ಬಂಡಿ ಮುಂತಾದವರು ಭೇಟಿ ನೀಡಿದ ತಂಡದಲ್ಲಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link